ಕುಷ್ಠ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಿ:ರಾಜಶೇಖರ ಪಾಟೀಲ

ಬೀದರ್, ಜ.31: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ ಪಾಪ ದಿಂದ ಬರುವುದಿಲ್ಲ ಆದ್ದರಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಬೀದರ ಜಿಲ್ಲೆಯು ಕುಷ್ಠರೋಗ ಮುಕ್ತ ಜಿಲ್ಲೆ ಮಾಡಬಹುದು ಎಂದು ಬೀದರನ ಡಿವಿಬಿಡಿಸಿಓ ಅಧಿಕಾರಿ ಡಾ.ರಾಜಶೇಖರ ಪಾಟೀಲ ಹೇಳಿದರು.
ಅವರು ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಹುತಾತ್ಮದಿನ’ ನಿಮಿತ್ಯ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2026ರ “ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಖಚಿತಪಡಿಸುವುದು” ಎಂಬ ಘೋಷಣೆಯೊಂದಿಗೆ” ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ ಅರಿವು ಅಭಿಯಾನದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಕುಷ್ಠರೋಗವು ಒಂದು ಸಾಂಕ್ರಮಿಕ ರೋಗವಾಗಿದ್ದು ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದ್ದು ದೇಹದ ಮೇಲೆ ಯಾವುದೇ ತರಹದ ಮಚ್ಚೆಗಳು ಇದಲ್ಲಿ ತಮ್ಮ ಸಮೀಪದ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗ ಕಂಡು ಬಂದಲ್ಲಿ ಇದನ್ನು ಬಹುಔಷದಿ ಚಿಕಿತ್ಸೆಯಿಂದ ಗುಣ ಪಡಿಸಬಹುದು ಇದಕ್ಕೆ ಯಾವುದೇ ರೀತಿಯ ಹೆದರುವಂತಹ ಅಗತ್ಯವಿಲ್ಲಾ ಎಂದರು.
ಡಾ.ಶಂಕ್ರೆಪ್ಪಾ ಬೊಮಾ ಮಾತನಾಡಿ, ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಹುತಾತ್ಮದಿನ’ ಈ ದಿನ ರಾಷ್ಠ್ರೀಯ ಕುಷ್ಠರೋಗ ದಿನವೆಂದು ಆಚರಿಸುತ್ತಿರುವುದು, ಜಿಲ್ಲೆಯಲ್ಲಿ ಕುಷ್ಟರೊಗದ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ 64 ಯಾಗಿದ್ದು ಈ ವರ್ಷ 51 ಹೊಸ ಪ್ರಕರಣಗಳು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. ಸ್ಪರ್ಶ್ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಜ.30 ರಿಂದ ಫೆ.13 ರವರೆಗೆ ಜಿಲ್ಲೆಯಾಧ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿ ಬನ್ನಿರಿ ಎಲ್ಲರು ಭಾರತವನ್ನು ಕುಷ್ಠರೋಗ ಮುಕ್ತ ಮಾಡಲು ಪ್ರತಿಜ್ಞಾ ಮಾಡೋಣ ಎಂದು ಕರೆಕೊಟ್ಟರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ ಅವರು ಎಲ್ಲಾ ನಸಿರ್ಂಗ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಅರೋಗ್ಯ ಅಧಿಕಾರಿ ಡಾ.ಸಂಗಾರಡ್ಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಮೇಲ್ವಿಚಾರಕರಾದ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ ಸೇರಿದಂತೆ ಸಿಬ್ಬಂದಿಗಳು, ನಸಿರ್ಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಿಮಪ್ಪಾ ಆಪ್ತ ಸಮಾಲೋಚಕರು, ಮಾನಸಿಕ ವಿಭಾಗ ಇವರು ನಡೆಸಿಕೊಟ್ಟರು.