ಯಾದಗಿರಿ:ಸೆ:೧೦: ಬಾಲ್ಯವಿವಾಹದಂತಹ ಗಂಭೀರ ಸಮಸ್ಯೆಗಳ ನಿವಾರಣೆಗೆ ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬ ರ ಕುರಿತು ಸೂಕ್ತ ಜಾಗೃತಿ ಮೂಡಿಸುವಂತೆ ನಗರ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ೨೦೦೬, ಪೋಕ್ಸೋ ಕಾಯ್ದೆ -೨೦೧೨ ಹಾಗೂ ಬಾಲ ನ್ಯಾಯ ಕಾಯಿದೆ -೨೦೧೫ ಕುರಿತು ಸಮೂಹ ಮಾಧ್ಯಮ, ಪ್ರಿಂಟಿAಗ್ ಪ್ರೆಸ್,ಟೆಂಟ್ ಹೌಸ್,ಡಿಜೆ,ಬ್ಯಾಂಡ್, ಕಲ್ಯಾಣ ಮಂಟಪ,ಶಾದಿ ಮಹಲ್ ಮಾಲಿಕರು,ಪೂಜಾರಿ,ಖಾಜಿ, ಮೌಲಾನ,ಅಡುಗೆ ಭಟ್ಟರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹದಿಂದ ಹೆಣ್ಣು ಮಗುವಿನ ರಕ್ಷಣೆಯಾಗಬೇಕು.ಹೆಣ್ಣು ಹಾಗೂ ಗಂಡು ಮಗು ನಡುವಿನ ಲಿಂಗತಾರತಮ್ಯ ಹೋಗಬೇಕು.ಗಂಡು ಮಗುವಿನ ಜೊತೆಗೆ ಹೆಣ್ಣು ಮಗುವಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ಸಮಾಜದಲ್ಲಿ ಉನ್ನತ ಸ್ಥಾನ ದೊರಕಿಸಲು ಪಾಲಕರು,ಎಲ್ಲರೂ ಶ್ರಮಿಸಬೇಕು.ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಹಾಗೂ ಬಾಲ್ಯ ವಿವಾಹ ಕಾಯ್ದೆ ೨೦೦೬ರ ಕುರಿತು ಅವಶ್ಯಕ ಜಾಗೃತಿ ಮೂಡಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಅವರು, ಮಕ್ಕಳ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕು.ಮಕ್ಕಳ ಬಾಲ್ಯ ಅಮೂಲ್ಯವಾಗಿರುವದರಿಂದ ಅವರ ಭಾವನೆ ಹಾಗೂ ಜೀವನಕ್ಕೆ ಗೌರವ ನೀಡಬೇಕು. ಬಾಲ್ಯ ವಿವಾಹ ಸಾಮಾಜಿಕ ಪಿಡುಗುಆಗಿದ್ದು, ಬಾಲ್ಯ ವಿವಾಹ ಕಂಡು ಬಂದ ತಕ್ಷಣ ಮಕ್ಕಳ ಸಹಾಯವಾಣಿ ೧೦೯೮, ಪೋಲಿಸ್ ಇಲಾಖೆ ಸಹಾಯವಾಣಿ ೧೧೨ ಹಾಗೂ ಮಕ್ಕಳ ರಕ್ಷಣಾ ಘಟಕ(೦೮೪೭೩೨೫೩೩೪೭ )ಗೆ ದೂರು ಸಲ್ಲಿಸಬೇಕೆಂದು ಕರೆ ನೀಡಿದರು.
ಖಾಯಂ ಜನತಾ ನ್ಯಾಯಾಲಯ: ಒಂದು ಕೋ.ರೂ ಗಳ ಮೌಲ್ಯದ ವ್ಯಾಜ್ಯಗಳು ಹಾಗೂ ನಾಗರಿಕ ಸೌಲಭ್ಯಗಳಾದ ನೀರು ಸರಬರಾಜು,ಅಂಚೆ, ವಿದ್ಯುತ್ ಬ್ಯಾಂಕಿAಗ್,ಪ್ರಯಾಣಿಕರ ಸಾಗಾಣಿಕೆ,ಇತರೆಗೆ ಸಂಬAಧಿಸಿದAತೆ, ಕೋರ್ಟ್ ಫೀ ಇಲ್ಲದೆ ವ್ಯಾಜ್ಯಗಳಿಗೆ ಪರಿಹಾರ ಕಂಡು ಕೊಳ್ಳಬಹುದಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಅವರು ಮಾತನಾಡಿ ಬಾಲ್ಯ ವಿವಾಹದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿರುವುದು ವಿಪರ್ಯಾಸ. ಹೆಣ್ಣು ಮಕ್ಕಳ ಜೀವನ ನರಕ ಮಾಡುವ ಬಾಲ್ಯ ವಿವಾಹವನ್ನು ತಡೆಯಲು
ಎಲ್ಲರೂ ಎಚ್ಚರಗೊಂಡು ನಿಯಂತ್ರಣಕ್ಕೆ ಮುಂದಾಗುವAತೆ ಕರೆ ನೀಡಿದರು.
ನಗರಸಭೆ ಅಧ್ಯಕ್ಷ ಲಲಿತಾ ಅನಪೂರ ಅವರು ಮಾತನಾಡಿ, ಬಾಲ್ಯ ವಿವಾಹ ದಿಂದ ಹೆಣ್ಣು ಮಗುವಿನ ಜೀವನ ಹಾಳಾಗುವ ಜೊತೆಗೆ ರಕ್ತಹೀನತೆ, ವಿವಿಧ ಕಾಯಿಲೆಗಳಿಗೂ ಬಲಿಯಾಗ ಬೇಕಾಗುತ್ತದೆ. ಜಿಲ್ಲೆಯ ಸುರಪುರ ಮತ್ತು ಗುರುಮಠಕಲ್ ನಲ್ಲಿ ಬಾಲ್ಯ ವಿವಾಹ ಗಳು ಹೆಚ್ಚಾಗಿರುವದರಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳ ಮೂಲಕವು ಬಾಲ್ಯ ವಿವಾಹ ನಿಯಂತ್ರಣ ಜಾಗೃತಿ ಮೂಡಿಸಲು ಸಲಹೆ ನೀಡಿದರು.
ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್ ಸಂಯೋಜಕರಾದ ಹರೀಶ್ ಜೋಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ -೨೦೦೬, ಬಾಲನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತು ವಿವರವಾದ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಧರಣೇಶ್ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್ ಚಟ್ನಳ್ಳಿ , ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್, ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ವಂದಿಸಿದರು.ಶ್ರೀ ರಾಜೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು.ದೇವಪ್ಪ ಪ್ರಾರ್ಥಿಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಿರ್ಮಲಾ ಸುರಪುರ ಅವಶ್ಯಕ ಮಾಹಿತಿ ನೀಡಿದರು.























