ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ :ಡಾ. ಶೈಲೇಂದ್ರ ಬೆಲ್ದಾಳೆ

ಬೀದರ:ಸೆ.15:ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಕಪಲಾಪುರ (ಎ) ಗ್ರಾಮದಲ್ಲಿ ಶನಿವಾರ ನಡೆದ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಮತ್ತು ಶ್ರಾವಣ ಮಾಸದ ಅಂಗವಾಗಿ ನಡೆದ ಪ್ರವಚನ ಮತ್ತು ಸಪ್ತಾಹ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರು, 12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷರು. ಅವರ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕರು.
ಶರಣರು ಕೇವಲ ಮಾತನಾಡುವವರಾಗಿರಲಿಲ್ಲ, ಬದಲಾಗಿ ತಮ್ಮ ಮಾತುಗಳಿಗೆ ಆಚಾರವನ್ನು ಅಳವಡಿಸಿಕೊಂಡವರಾಗಿದ್ದರು. ಅವರ ಅನುಭವವೇ ವಚನಗಳಾಗಿ ಮೂಡಿ ಬಂದವು ಹೀಗಾಗಿ ಶರಣರ ಹಿತ ವಚನಗಳು ವ್ಯಕ್ತಿಯ ಬದುಕಿಗೆ ಸರಿಯಾದ ದಾರಿ ತೋರಿಸುತ್ತವೆ. ಅವು ಧರ್ಮ, ಭಕ್ತಿ, ಕಾಯಕ, ಸಮಾನತೆ, ಸಮಾಜದ ಒಳಿತನ್ನು ಪ್ರತಿಪಾದಿಸುತ್ತವೆ. ಶರಣರ ವಚನಗಳನ್ನು ಓದುವ ಮೂಲಕ, ನಾವು ಉತ್ತಮ ವ್ಯಕ್ತಿಯಾಗಿ ಬದುಕಲು ಮತ್ತು ಸಮಾಜದ ಒಳಿತಿಗೆ ಕೊಡುಗೆ ನೀಡಲು ಸಾಧ್ಯ ಎಂದರು.
ನೂತನ ಸಂಸತ್ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪವನ್ನು ಪ್ರಸ್ತಾಪಿಸಿದರು. ನಾಡಿನ ಅಭಿವೃದ್ಧಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಮೊದಲ ಬಾರಿ ಜಾರಿಗೊಳಿಸಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ ಎಂದು ಬಸವೇಶ್ವರರಿಗೆ ಕನ್ನಡದಲ್ಲೇ ಪ್ರಧಾನಿ ನಮನ ಸಲ್ಲಿಸಿದರು ಮಹಾತ್ಮ ಬಸವೇಶ್ವರ ಅವರ ಅನುಭವ ಮಂಟಪದ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದು ನೂತನ ಸಂಸತ್ ಭವನವನ್ನು ಭಾರತ್ ಮಂಟಪಮ್ ಎಂದು ಹೆಸರಿಟ್ಟಿದ್ದು ಹೆಮ್ಮೆ ಎನಿಸುತ್ತದೆ.

ಕಪಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಸಮಾಜದ ಮುಖಂಡರು,ಮಹಿಳೆಯರು ಯುವಕರು ಸೇರಿ ಮಹಾತ್ಮರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಆಯೋಜನೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದೆ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಶಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕಪಲಾಪುರ (ಎ) ಗ್ರಾಮದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಮತ್ತು ಶ್ರಾವಣ ಮಾಸದ ಅಂಗವಾಗಿ ನಡೆದ ಪ್ರವಚನ ಮತ್ತು ಸಪ್ತಾಹ ಕಾರ್ಯಕ್ರಮದ ಸಮಾರೋಪ, ಮೂರ್ತಿ ಅನಾವರಣ ಕಾರ್ಯಕ್ರಮ
ಅತ್ಯಂತ ವಿಜೃಂಭಣೆಯಿಂದ ನೆರವೇರಿತು ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು, ಬಸವಣ್ಣನವರ ಸಂದೇಶಗಳು ಪಾಲಿಸಬೇಕೆಂದು ತಿಳಿಸಿದರು.

ಶತ, ಶತಮಾನಗಳಿಂದ ಜ್ಞಾನದ ಬೆಳಕು ಚಲ್ಲಿದ ಕಾಯಕಯೋಗಿ ಬಸವಣ್ಣ, ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದರು. ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಿವೆ ಎಂದು ಪರಮ ಪೂಜ್ಯ ಪೂರ್ಣಾನಂದ ಸ್ವಾಮಿಜಿ, ಪೂಜ್ಯ ಶ್ರೀ ಶಿವಯೋಗಿ ಮಚೇಂದ್ರ ಮಹಾರಾಜರು, ಪೂಜ್ಯ ಶ್ರೀ ಬಸವಲಿಂಗ ದೇವರು, ಆಣದೂರ ಬಂತೇಜೀ, ಪೂಜ್ಯ ಜಗದ್ಗುರು ದೊಡೆಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸತೀಶ ಸಿಕೆಂದಪುರ, ಗ್ರಾಪಂ ಉಪಾಧ್ಯಕ್ಷರಾದ ಶಿವಕುಮಾರ ಕೋಳಾರೆ, ಮುಖಂಡರಾದ ಹಣಮಂತರಾವ ಮೈಲಾರೆ, ನಾಗಭೂಷಣ ಕಮಠಾಣೆ, ಬಾಬುರಾವ ಮಲ್ಕಾಪುರ, ಜಗನ್ನಾಥ ಜಮಾದಾರ, ಮಹೇಶ ಮೈಲಾರೆ, ಸಂಗಮೇಶ ಪಾಟೀಲ್, ಅಶೋಕ ಗಾಧಾ, ಬಸವರಾಜ ಕೊಳ್ಳುರ, ಶಿವರಾಜ ಪಾಟೀಲ, ಶಿವರಾಜ ಮೂಲಗೆ, ಗಂಗಾಧರ್ ರೊಡ್ಡಾ, ಶಿವರಾಜ ಖೇಮಶೆಟ್ಟಿ, ಅಮೃತರಾವ ಮೂಲಗೆ, ಅಮರ ಚಾಂಬಳೆ, ವೀರಶೆಟ್ಟಿ ವಗದಾಳೆ ಗ್ರಾಮಸ್ಥರು ಇದ್ದರು.