ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು : ಶಾಸಕ ಲಕ್ಷ್ಮಣ ಸವದಿ

ಅಥಣಿ :ಜ.೨೭: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯ ಹೊಂದಿರುವ ನಮ್ಮ ಭಾರತದ ಶ್ರೇಷ್ಠ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ಭಾರತೀಯನು ಪಾಲಿಸಬೇಕು. ಅದರ ಮೌಲ್ಯಗಳನ್ನ ಗೌರವಿಸಬೇಕು. ಪ್ರತಿಯೊಬ್ಬ ಭಾರತೀಯನು ಸಂವಿಧಾನವನ್ನು ಅರಿತು ನಡೆದು ಕೊಂಡಾಗ ಗಣತಂತ್ರ ವ್ಯವಸ್ಥೆಗೆ ಅರ್ಥಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಇಲ್ಲಿನ ಭೋಜರಾಜ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನದ ಪ್ರಮುಖ ಆಶಯಗಳಾದ ಸೌರ್ಹಾದತೆ, ಸಮಾನತೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಪ್ರತಿಯೊಬ್ಬ ಭಾರತೀಯನು ಪಾಲಿಸುವ ಮೂಲಕ ಸಂವಿಧಾನದ ಆಶಯಗಳನ್ನು ಮತ್ತು ಸಂವಿಧಾನದಲ್ಲಿರುವ ಮೌಲ್ಯಗಳನ್ನು ಗೌರವಿಸೋಣ
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರು ಅನೇಕ ದೇಶಗಳಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ಹಲವು ಭಾಷೆ ಧರ್ಮ ಜಾತಿ ಜನಾಂಗವನ್ನ ಒಳಗೊಂಡಿರುವ ಭಾರತದ ಮನುಕುಲಕ್ಕೆ ಶ್ರೇಷ್ಠವಾದ ಧರ್ಮ ಗ್ರಂಥವನ್ನು ನೀಡಿದ್ದಾರೆ ಎಂದರು.

ಅಥಣಿಯನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡುವ ಸಂಕಲ್ಪ :
ಅಥಣಿ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಮತಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ಬರಗಾಲ ಪೀಡಿತ ಪ್ರದೇಶ ಎಂಬ ಹಣೆ ಪಟ್ಟಿಯನ್ನ ಕಿತ್ತು ಹಾಕಲಾಗುವುದು. ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಅಥಣಿ ಪುರಸಭೆಯನ್ನು ನಗರ ಸಭೆಯನ್ನಾಗಿ ಪರಿವರ್ತಿಸುವ ಮೂಲಕ ಪಟ್ಟಣವನ್ನ ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲಾಗುವುದು. ಅಥಣಿ ಐತಿಹಾಸಿಕ ಜೋಡಿ ಕೆರೆಗಳ ಅಭಿವೃದ್ಧಿಗೆ ೨೫ ಕೋಟಿ. ರೂ. ಮತ್ತು ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ೧೦ ಕೋಟಿ ರೂ. ಅನುದಾನ ತರುವ ಮೂಲಕ ಕಾಮಗಾರಿಯನ್ನು ಆರಂಭಿಸಿದ್ದೇವೆ. ಪಟ್ಟಣದ ನಿವಾಸಿಗಳಿಗೆ ದಿನದ ೨೪ ಗಂಟೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸು. ೧೩೦ ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಬರುವ ೮ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಇನ್ನಷ್ಟು ಶೈಕ್ಷಣಿಕ ಸುಧಾರಣೆಗಳನ್ನು ಕೈಕೊಳ್ಳುವ ಭರವಸೆ :
ತಾಲೂಕಿನ ಕೊಕಟನೂರು ವಲಯದಲ್ಲಿ ಸ್ಥಾಪನೆ ಮಾಡಲಾಗಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ವೈದ್ಯಕೀಯ ಶಿಕ್ಷಣ ಆರಂಭಗೊAಡಿದೆ. ಇದೇ ವೈದ್ಯಕೀಯ ಕಾಲೇಜಿನ ಮುಂಭಾಗದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ನಂದಗಾವ ಮತ್ತು ಅರಟಾಳ ಗ್ರಾಮಗಳಲ್ಲಿ ಶೀಘ್ರದಲ್ಲಿಯೇ ಪಶು ಚಿಕಿತ್ಸಾಲಯ ಆರಂಭಿಸಲಾಗುವುದು. ಬಡ ಹಾಗೂ ರೈತರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡಲಾಗಿದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಗಳು ಆರಂಭವಾಗಲಿದ್ದು, ಒಂದೆರಡು ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಕೆ ಬಿ ಎಸ್ ಶಾಲೆಗಳನ್ನು, ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ೯ ಸರ್ಕಾರಿ ಪ್ರೌಢ ಶಾಲೆಗಳನ್ನು ಸ್ಥಾಪನೆ ಮಾಡಲಾಗಿದೆ. ಅಥಣಿ ಪಟ್ಟಣದಲ್ಲಿಯೂ ಕೂಡ ಅನೇಕ ವರ್ಷಗಳಿಂದ ಕೊರತೆಯಿದ್ದ ಸರಕಾರಿ ಪ್ರೌಢ ಶಾಲೆಯನ್ನು ನೀಡಲಾಗಿದೆ. ಕಾರ್ಮಿಕ ಇಲಾಖೆಯಿಂದ ೩೬ ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಯನ್ನು ಆರಂಭಿಸಲಾಗಿದೆ. ಇದರ ಜೊತೆಗೆ ಮತಕ್ಷೇತ್ರದ ಬಡ ಹಾಗೂ ರೈತರ ಮಕ್ಕಳ ಶಿಕ್ಷಣಕ್ಕಾಗಿ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.

ರೈತರ ಸ್ವಾವಲಂಬಿ ಬದುಕಿಗೆ ವಿದ್ಯುತ್ ಘಟಕಗಳ ಸ್ಥಾಪನೆ:
ತಾಲೂಕಿನ ಪೂರ್ವಭಾಗದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ, ಉತ್ತರ ಭಾಗದ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಬರಪೀಡಿತ ಪ್ರದೇಶವೆಲ್ಲ ಹಸಿರು ಭೂಮಿಯಾಗಿ ಪರಿವರ್ತನೆಯಾಗಲಿದೆ. ನೀರಾವರಿ ಸೌಲಭ್ಯವನ್ನು ಬಳಸಿಕೊಳ್ಳಲು ರೈತರಿಗೆ ಹೆಚ್ಚಿನ ವಿದ್ಯುತ್ ಶಕ್ತಿಯ ಅಗತ್ಯವಿದ್ದು, ಮುಂದಾಲೋಚನೆಯನ್ನು ಇಟ್ಟುಕೊಂಡು ತಾಲೂಕಿನಲ್ಲಿ ಇನ್ನಷ್ಟು ವಿದ್ಯುತ್ ಘಟಕಗಳನ್ನು ಮತ್ತು ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡುವ ಮೂಲಕ ರೈತರಿಗೆ ಸ್ವಾವಲಂಬಿ ಬದುಕು ಕಲ್ಪಿಸಲಾಗುವುದು.

ಅಥಣಿ ವಿದ್ಯುತ್ ತಂತಿ ಮುಕ್ತ ನಗರ:
ಹಳೆಯದಾಗಿರುವ ವಿದ್ಯುತ್ ತಂತಿ ಹಾಗೂ ಕಂಡೆಕ್ಟರ್ ಗಳನ್ನು ತೆಗೆದು ಸು.೫೦ ಕೋಟಿ ರೂ. ವೆಚ್ಚದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸುವ ಮೂಲಕ ಅಥಣಿ ನಗರವನ್ನು ವಿದ್ಯುತ್ ತಂತಿಮುಕ್ತ ಪಟ್ಟಣವನ್ನಾಗಿ ಪರಿವರ್ತಿಸಲಾಗುತ್ತಿದೆ. ಅದರಿಂದ ನಗರದ ಜನರಿಗೆ ಮಳೆ ಗಾಳಿಯಲ್ಲಿ ವಿದ್ಯುತ್ ತೆಗೆಯುವ ಸಮಸ್ಯೆ ಇರುವುದಿಲ್ಲ ಅದಕ್ಕಾಗಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸುವ ಕಾರ್ಯ ಆರಂಭವಾಗಲಿದೆ
ಎಂದರು.

ಅAತರ್ಜಲ ಮಟ್ಟ ಹೆಚ್ಚಿಸಲು ಹೊಸ ಯೋಜನೆ ಅನುಷ್ಠಾನ:
ತಾಲೂಕಿನ ಪೂರ್ವ ಭಾಗದ ಹಳ್ಳಿಗಳಲ್ಲಿ ಸು.೧೪೦ ಕೋಟಿ ರೂ. ವೆಚ್ಚದ ೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ, ಅದರ ಜೊತೆಗೆ ೨೫ ಕೋಟಿ ರೂ. ವೆಚ್ಚದಲ್ಲಿ ಹೊಸ ಮಾದರಿ ಯೋಜನೆಯನ್ನು ಜಾರಿಗೆ ತಂದು ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದರು. ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ ೭೬ ಲಕ್ಷ ಟನ್ ಕಬ್ಬನ್ನು ಅಥಣಿ ತಾಲೂಕಿನಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಯೋಜನೆಗಳು ಪ್ರಗತಿಯಾದ ನಂತರ ಮುಂಬರುವ ದಿನಗಳಲ್ಲಿ ೧ ಕೋಟಿ ಟನ್ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಗ್ರಾಮೀಣ ಪ್ರದೇಶದ ರೈತರನ್ನು ಸ್ವಾವಲಂಬಿ ಹಾಗೂ ಸದೃಢ ಮಾಡುವುದು ನನ್ನ ಸಂಕಲ್ಪ ಎಂದರು.

ಮಹಾರಾಷ್ಟ್ರದಿಂದ ೨ ಟಿಎಂಸಿ ನೀರು :
ಹಿಪ್ಪರಗಿ ಬ್ಯಾರೇಜ್ ನ ಆಣೆಕಟ್ಟಿನ ಗೇಟ್ ಮುರಿದು ೨ ಟಿಎಂಸಿ ನೀರು ನದಿಯಲ್ಲಿ ಕಡಿಮೆಯಾಗಿದ್ದು, ಬರುವ ಬೇಸಿಗೆ ಕಾಲದಲ್ಲಿ ನೀರನ ಆತಂಕ ತಾಲೂಕಿನ ಜನರಲ್ಲಿದೆ. ೩೫ ಕೋಟಿ ರೂ ವೆಚ್ಚದಲ್ಲಿ ಹೊಸ ಗೇಟ್ಗಳನ್ನು ಅಳವಡಿಸಲು ಪ್ರಸ್ತಾಪನೆ ಸಲ್ಲಿಸಲಾಗಿದೆ. ಮಹಾರಾಷ್ಟ್ರದಿಂದ ೨ ಟಿಎಂಸಿ ನೀರು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಮಾನವೀಯತೆ ಆಧಾರದ ಮೇಲೆ ನೀರು ಪಡೆದುಕೊಳ್ಳುತ್ತೇವೆ ಇಲ್ಲದಿದ್ದರೆ ೮ ಕೋಟಿ ರೂ. ಮಹಾರಾಷ್ಟ್ರ ಸರ್ಕಾರಕ್ಕೆ ತುಂಬಿ ಕೃಷ್ಣಾ ನದಿ ಪಾತ್ರದ ಜನರಿಗೆ ನೀರು ತರುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಾಲೂಕಾ ದಂಡಾಧಿಕಾರಿ. ತಹಶೀಲ್ದಾರ್ ಸಿದರಾಯ ಭೋಸಗಿ ಮಾತನಾಡಿ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದದ್ದು. ನಮಗೆಲ್ಲರಿಗೂ ಸಮಾನತೆ ಕಲ್ಪಿಸಿದ ನಮ್ಮ ಸಂವಿಧಾನವೇ ನಮ್ಮೆಲ್ಲರ ಬದುಕಿಗೆ ಭದ್ರ ಬುನಾದಿಯಾಗಿದೆ. ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾಲೂಕಾ ಆಡಳಿತವು ಸದಾ ಬದ್ಧವಾಗಿದೆ.” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ತಾಲೂಕಾ ಪಂಚಾಯತ್ ಆಡಳಿತ ಅಧಿಕಾರಿ ಬಸವರಾಜ ಹೆಗ್ಗನಾಯಕ ಇವರು ಗಣರಾಜ್ಯೋತ್ಸವ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ, ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಅಧಿಕಾರಿಗಳಾದ ಅಶೋಕ ಗುಡಿಮನಿ, ಬಸಗೌಡ ಕಾಗೆ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ ಮಗದುಮ್ಮ. ವೆಂಕಟೇಶ್ ಕುಲಕರ್ಣಿ. ಮಂಜುನಾಥ್ ಸೌಂದಲಗೀಕರ. ರವೀಂದ್ರ ಮುರಗಾಲಿ. ಮಾಜಿ ಸೈನಿಕ ಸಂಘದ ಅಧ್ಯಕ್ಷ ಎ. ಎಸ್. ಪಾಟೀಲ, ಪಂಚ ಗ್ಯಾರೆಂಟಿ ಯೋಜನೆಯ ಸಮಿತಿ ತಾಲೂಕಾ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಪುರಸಭೆಯ ಸದಸ್ಯರಾದ ಸಂತೋಷ ಸಾವಡಕರ, ರಾಜು ಗುಡೊಡಗಿ, ಕಲ್ಲೇಶ ಮಡ್ಡಿ. ಮಲ್ಲೇಶ ಹುದ್ದಾರ, ಪ್ರಮೋದ ಬಿಳ್ಳೂರ, ವಿಲಿನರಾಜ ಯಳಮಲ್ಲೆ, ರಿಯಾಜ ಸನದಿ, ಉದಯ ಸೊಳಸಿ, ಮೃಣಾಲಿನಿ ದೇಶಪಾಂಡೆ, ಸುನಿತಾ ಬಡಕಂಬಿ, ನಾಮನಿರ್ದೇಶಿತ ಸದಸ್ಯ ರಾಮನಗೌಡ ಪಾಟೀಲ, ಮುಖಂಡರಾದ ರಾಮಣ್ಣಾ ಧರಿಗೌಡರ, ಆಶೀಪ್ ತಾಂಬೋಳಿ, ರವಿ ಬಡಕಂಬಿ, ಅನೀಲ ಸೌದಾಗರ, ರವಿ ಬಾಸಿಂಗಿ, ಸೇರಿದಂತೆ ಹಲವು ಗಣ್ಯರು ಹಾಗೂ ಇನ್ನುಳಿದ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪಟ್ಟಣದ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ ಸ್ವಾಗತಿಸಿದರು. ಸಂಗಮೇಶ ಹಚಡದ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ ವಂದಿಸಿದರು.