
ಔರಾದ್ : ಜ.27:ಮನೆಯಲ್ಲಿ ಪೆÇೀಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಕಲಿಸಬೇಕು. ಪ್ರತಿಯೊಬ್ಬರು ರಾಷ್ಟ್ರದ ಬಗ್ಗೆ ಅಪಾರ ಗೌರವವನ್ನು ಹೊಂದಬೇಕು ಎಂದು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮ ಹೇಳಿದರು.
ತಾಲೂಕಿನ ನಾಗೂರ(ಎಂ)ದಲ್ಲಿ ವಿಎಚ್‍ಪಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಮಾದಪ್ಪ ಮಾನೂರೆ ಅವರ ಅಭಿಮಾನ ಬಳಗದವರಿಂದ ಸೋಮವಾರ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋರಕ್ಷಣೆ ಮತ್ತು ದೇಶದ ರಕ್ಷಣೆಗಾಗಿ ಎಲ್ಲರು ಬದ್ದರಾಗಬೇಕು. ರಾಷ್ಟ್ರ ಸುಭದ್ರವಾಗಿರಬೇಕೆಂದರೇ ಎಲ್ಲರು ಒಗ್ಗಟ್ಟಿನ ಮಂತ್ರದಿಂದ ಮುನ್ನಡೆಯಬೇಕು. ಸೇವಾ, ಸುರಕ್ಷೆ , ಸಂಸ್ಕಾರವೆಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಯುವಕರಲ್ಲಿ ದೇಶಭಕ್ತಿ, ಧರ್ಮ ಶೃದ್ಧೆಯನ್ನು ಮೂಡಿಸಿ , ಅವರನ್ನು ರಾಷ್ಟ್ರ ಕಾರ್ಯದಲ್ಲಿ ತೋಡಗಿಸುವ ಕಾರ್ಯಕ್ಕೆ ಎಲ್ಲರು ಕೈಜೋಡಿಸಬೇಕಾಗಿದೆ ಎಂದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಯದಲಾಪೂರೆ ಮಾರ್ಮೀಕವಾಗಿ ಮಾತನಾಡಿ, ಹಿಂದು ಧರ್ಮದ ರಕ್ಷಣೆ, ಸಮಾಜವನ್ನು ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಶಕ್ತ ಮಾಡಲು ಪಣ ತೋಡಬೇಕು. ಸತ್ಸಂಗ, ಸಂಸ್ಕಾರ, ಸೇವೆ ಸುರಕ್ಷೆ ನೀಡಲು ಸದಾಬದ್ದರಾಗಬೇಕು. ದೇವಾಲಯ, ಗೋಮಾತೆ ಹಾಗು ಮಾತೆಯರ ರಕ್ಷಣೆಗಾಗಿ ಶ್ರಮಿಸಬೇಕು. ಜಾತಿ, ಮತ, ಭಾಷೆ, ಪ್ರಾಂತ, ಅಸ್ಪ್ರಶ್ಯತೆ ಮೀರಿದ ಸಾಮರಸ್ಯ ಸಮಾಜದ ನಿರ್ಮಾಣಕ್ಕಾಗಿ ಯುವಕರು ಸದಾಸಿದ್ದರಿರಬೇಕು ಎಂದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯಕಾರಣಿ ಸದಸ್ಯ ರಾಜಕುಮಾರ ನಾಯ್ಕ ಮಾತನಾಡಿ, ಧರ್ಮೋ ರಕ್ಷಿತಿ ರಕ್ಷಿತಃ ಅನ್ನುವ ಹಾಗೆ ಯುವಕರು ದೇಶ ರಕ್ಷಣೆಗೆ ಪುರುಷ ಸಿಂಹರಾಗಿ ಬಂಡೆಯಂತೆ ಸ್ಥಿರವಾಗಿ ನಿಲ್ಲಬೇಕಾಗಿದೆ. ಆವಾಗ ಮಾತ್ರ ಧರ್ಮದ ವಿಜಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಚಂದ್ರಕಾಂತ ಜೋಶಿ, ಭಜರಂಗದಳ ತಾಲೂಕು ಸಂಯೋಜಕ ಕೇಶವ ಹಕ್ಕೆ, ಸಂಗಮೇಶ ಕೌಟಗೆ, ವೀರಶೆಟ್ಟಿ ಬಿರಾದರ್, ಬೀರಪ್ಪ, ಭೀಮರಾವ ಪೆÇಲೀಸಪಾಟೀಲ, ರಾಜಕುಮಾರ ಬಿರಾದರ್, ಸಂಜುಕುಮಾರ ಬಿರಾದರ್, ಸುನೀಲ ಮಾಲಿಪಾಟೀಲ, ಪ್ರಭು ಖಾಶೆಂಪೂರೆ, ಬಾಬುರಾವ ಪೆÇಲೀಸಪಾಟೀಲ್, ಶಿವಶರಣಪ್ಪ ಬಿರಾದರ, ಗಣಪತಿ ಎಕ್ಕಂಬೆ, ಗಣಪತಿ ಮೇತ್ರೆ, ಸಂಗಪ್ಪ ಶೇರಿಕಾರ, ಕುಶಲರಾವ ಮಾನೂರೆ, ಸಂತೋಷ ಮಾನೂರೆ, ಕಪೀಲ, ಅನೀಲ ಮಡಿವಾಳೆ, ಸತೀಷ ನಾಗೂರೆ, ಪತ್ರಕರ್ತ ಮಲ್ಲಪ್ಪ ಗೌಡ ಸೇರಿದಂತೆ ಇನ್ನಿತರರಿದ್ದರು.























