
ಯಡ್ರಾಮಿ:ಫೆ.21:ಸರ್ವಜ್ಞರು ಸಹಸ್ರಾರು ವಚನಗಳನ್ನು ರಚಿಸಿದ್ದು, ಅವರ ವಚನಗಳಲ್ಲಿ ಇರುವ ಸಾರವನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಮೃತ್ ಡಿ ದೊಡ್ಮನಿ ಯಡ್ರಾಮಿ ತಾಲೂಕು ಕನ್ನಡ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷರು ಹೇಳಿದರು.
ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉಪನ್ಯಾಸಕರಾಗಿ ಮಾತನಾಡಿದ ಅವರು, ಸರ್ವಜ್ಞರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ. ಸಾಧನೆ ಮಾಡುವುದಕ್ಕೆ ಛಲ, ಮನಸ್ಸು ಹಾಗೂ ಆಸಕ್ತಿ ಇರಬೇಕು ಎಂದು ಹೇಳಿದರು.
ಸರ್ವಜ್ಞನ ಇತಿಹಾಸವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳುವುದು ಬಹಳ ಮುಖ್ಯ, ಅವರು ನಮಗೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಸರ್ವಜ್ಞ ನಂತಹವರು ನಮ್ಮ ಹೆಮ್ಮೆ ಅಂತಹವರ ಜಯಂತಿ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.
ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.ನೈತಿಕ,ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಸೇರಿಸಿದ್ದಾರೆ. ಅದನ್ನು ನೀವು ತಿಳಿದುಕೊಳ್ಳಬೇಕು.
ಡಾ.ಬಸವರಾಜ ಕುಂಬಾರ ಸಮಾಜದ ತಾಲೂಕು ಅಧ್ಯಕ್ಷರು ಮಾತನಾಡಿ, ಸರ್ವಜ್ಞ ಸರ್ವ ವ್ಯಾಪಿ ಎಂಬುದು ಸರ್ವ ಸತ್ಯ. ಅವರ ಒಂದು ಅಂಶವನ್ನಾದರೂ ಅಳವಸಿಡಿಕೊಂಡು ಸಾಧನೆ ಮಾಡಬೇಕು ಎಂದರು.
ಸರ್ವ ವ್ಯಾಪ್ತಿಯಾಗಿ ಎಲ್ಲದರ ಬಗ್ಗೆಯೂ ಸರ್ವಜ್ಞ ತಿಳಿದು ಬರೆದಿದ್ದಾರೆ. ಸಮಾಜದ ಅಂಕುಡೊoಕುಗಳನ್ನು ಹೇಳುವುದರ ಮೂಲಕ ಮೂಢನಂಬಿಕೆಯನ್ನು ತೊಡೆದುಹಾಕಿ ಇಡೀ ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಎಂದು ಅವರು ತಿಳಿಸಿದರು.
ಸರ್ವಜ್ಞ ಎಂಬ ಮಾತು ಎಲ್ಲರ ಬಾಯಲ್ಲಿ ಬರುವಂತ ವಿಚಾರ. ಇವರು ಶಿಕ್ಷಣದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಇವರು ಶಿಕ್ಷಣಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು, ಸಾರ್ವಜನಿಕರ ಸೇವೆಯಲ್ಲಿ ಅವರನ್ನು ಅವರು ತೊಡಗಿಸಿಕೊಂಡಿದ್ದಾರೆ ಎಂದರೆ ಅದು ಅವರು ಪಡೆದಂತ ಶಿಕ್ಷಣ, ಸಂಸ್ಕಾರ ಇವೆಲ್ಲವೂ ಸಹಕಾರ ಆಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂಬ ಕರೆಯನ್ನು ನಮಗೆ ಕೊಟ್ಟಿದ್ದಾರೆ ಅದನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಸರ್ವಜ್ಞ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ನಡೆದುಕೊಂಡು ಬಂದ ತತ್ವಗಳು ನಮಗೆ ಪಾಲನೆಯಾಗಬೇಕು. ಅವರ ಒಂದು ಅಂಶಗಳನ್ನು ನಮ್ಮಲ್ಲಿ ಮತ್ತೆ ನಮ್ಮ ಮಕ್ಕಳಲ್ಲಿ ಅಳವಡಿಸಬೇಕು.
ಸರ್ವಜ್ಞರು ಎಲ್ಲರಿಗೂ ಮಾದರಿ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜ್ಞರ ಜಯಂತಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರ ಆದರ್ಶ ಮತ್ತು ತತ್ವಗಳನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಮಾಡಬೇಕು.
ಬರಿ ಜಯಂತಿಗೆ ಸೀಮಿತವಾಗದೆ ಅವರ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಿ ಅವರ ವಚನಗಳು ಹಾಗೂ ಚಿಂತನೆಗಳ ಚರ್ಚೆ ಪ್ರಾರಂಭವಾಗುವಂತೆ ಮಾಡಬೇಕು. ಸರ್ವಜ್ಞನ ವಚನಗಳು ಸಾರ್ವಜನಿಕವಾಗಿ ಮುಂದಿನ ಜನಾಂಗಗಳಿಗೆ ತಲುಪಿಸಬೇಕು ಎಂದು ಅವರು ಹೇಳಿದರು.
ಕುಬಾರ ಸಮಾಜದ ನಿವೃತ್ತ ಬಂಡಯ್ಯ ಕೆಲ್ಲೂರ ಸಿದ್ರಾಮಪ್ಪ ವಡಗೇರಿ ಗೊಲ್ಲಾಳಪ್ಪ ಯಡ್ರಾಮಿ ಸರಕಾರಿ ನೌಕರರಿಗೆ ಸನ್ಮಾನ ಮಾಡಲಾಯಿತ್ತು
ಈ ಸಂದರ್ಭದಲ್ಲಿ ಯಲ್ಲಪ್ಪ ಸುಬೇದಾರ ತಾಲೂಕು ದಂಡಾಧಿಕಾರಿಗಳು ಯಡ್ರಾಮಿ,ದರೇಪ್ಪ ದಾದಾಗೊಳ ಶಿಕ್ಷಕರು ಯಡ್ರಾಮಿ,ಅಯ್ಯಣ್ಣ ಕಂಬಾರ, ದಂಡಪ್ಪ ಜವಳಗಿ,ಅರ್ಜುನ ಅಂಕಲಗಿ,ಗುರು,ಚಂದ್ರು ವಡಗೇರಿ, ಪ್ರಭು ಕಾಚಾಪುರ,ಈರಣ್ಣ ಜಲಪೂರ, ದೇವಿಂದ್ರಅರಳಗುಂಡಗಿ,ಬಸವರಾಜ ಈರಗಂಟಿ,ಸಿದ್ದು ಮಾಗಣಗೇರಿ,ಚಂದ್ರಕಾಂತ,ವಿರೇಶ, ದೇವೇಂದ್ರ,ಶರಣು ಬಿ,ಸಂಗಮೇಶ,ಶರಣು ಸುಂಬಡ ಇತರರು ಇದ್ದರು.

























