Home ಜಿಲ್ಲೆ ಕಲಬುರಗಿ ಪ್ರತಿಯೊಬ್ಬರು ಧರ್ಮ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು

ಪ್ರತಿಯೊಬ್ಬರು ಧರ್ಮ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು

ಕರಜಗಿ :ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಬೇಕಾದರೆ ದೇವರ ಸಾನ್ನಿಧ್ಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳ ನಿರ್ಮಾಣ ಔಚಿತ್ಯವಾಗಿದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು
ಅವರು ತಾಲೂಕಿನ ಮಣ್ಣೂರ ಗ್ರಾಮದ
ಮಲ್ಲಿಕಾರ್ಜುನ ಚಣೇಗಾಂವ ಅವರು ತಮ್ಮ ತೋಟದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿ ದೇವಸ್ಥಾನ ನಿರ್ಮಾಣ, ದೇವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಪವಿತ್ರ ಕಾರ್ಯಕ್ರಮಗಳಾಗಿವೆ.ದೇವಾಲಯದ ಶಿಖರದಲ್ಲಿರುವ ಕಳಸವು ದೇವರೊಂದಿಗೆ ನಮ್ಮ ಸಂಪರ್ಕದ ಸಂಕೇತವಾಗಿದೆ.ನಮಗೆ ಸಂಸ್ಕøತಿ, ಸಂಸ್ಕಾರ ದೊರೆಯಬೇಕಿದ್ದರೆ ಅದು ದೇವಾಲಯದಲ್ಲಿ ಮಾತ್ರ.ಮನುಷ್ಯ ಜೀವನದಲ್ಲಿ ಪುಣ್ಯದ ಕೆಲಸ ಮಾಡಬೇಕು.ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಸಮಾಜ ಸುಸಂಸ್ಕೃತವಾಗುತ್ತದೆ.ಮಲ್ಲಿಕಾರ್ಜುನ ಚಣೇಗಾಂವ ಅವರು ತಮ್ಮ ತೋಟದಲ್ಲಿ ಸ್ವಂತ ಖರ್ಚಿನಿಂದ ವಿಠ್ಠಲ ರುಕ್ಮಿಣಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
ನಮ್ಮೆಲ್ಲರಿಗೂ ವಿಠ್ಠಲ ರುಕ್ಮಿಣಿ ದರ್ಶನ ಮಾಡಿಸಿದ ಚಣೇಗಾಂವ ಪರಿವಾರದವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು
ಸಾನಿಧ್ಯ ವಹಿಸಿದ್ದ ಅಫಜಲಪುರ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ ಗುರುಗಳ ಸಾನ್ನಿಧ್ಯದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಜ್ಞಾನ, ವಿದ್ಯೆ ಮತ್ತು ಸಂಸ್ಕಾರ ದೊರಕಬೇಕು. ವಿನಯವಿಲ್ಲದ ವಿದ್ಯೆಯಿಂದ ಸಂಸ್ಕಾರ ಬೆಳೆಯುವುದಿಲ್ಲ; ಮಕ್ಕಳು ಮುಖ್ಯವಾಗಿ ಶೈಕ್ಷಣಿಕವಾಗಿ ಸುಧಾರಣೆ ಹೊಂದುವುದಲ್ಲದೆ ಅವರಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಸಬೇಕು
ಎಲ್ಲಿ ನಿಷ್ಕಲ್ಮಶ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಅಭಿನವ ಬಸವಲಿಂಗ ಮಹಾ ಸ್ವಾಮಿಗಳು ನಾಗಣಸೂರ ವೇದಮೂರ್ತಿ ಹಾಲಯ್ಯ ಹಿರೇಮಠ ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮಾದಾರ ಶಿವಾನಂದ ಗಾಡಿಸಾಹುಕಾರ ಜಿಲ್ಲಾ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ ,ಮಹಾದೇವಪ್ಪ ಕರೂಟಿ ರಾಚಪ್ಪ ಕೊಪ್ಪಾ ಮಲ್ಲಿಕಾರ್ಜುನ ಚಣೇಗಾಂವ ಸಿದ್ರಾಮಪ್ಪ ಹಿರೇಕುರುಬರ ಹಣಮಂತ ಖಂಡೇಕಾರ ಶಿವಶರಣಪ್ಪ ರೋಡಗಿ ಶರಣಗೌಡ ಪಾಟೀಲ ರಾಮಚಂದ್ರ ಜಹಾಗಿರದಾರ ಚಂದ್ರಶೇಖರ ಹೊಸೂರಕರ ವಿಶ್ವನಾಥ ಕರೂಟಿ ಚೋಳಪ್ಪ ಆಲೂರ ವಿಶ್ವನಾಥ ಅಜಗೊಂಡ ಸಿದ್ದಪ್ಪ ಹತ್ತರಕಿ ಅಡಿವೆಪ್ಪ ಕರಜಗಿ ಅಣ್ಣಾರಾವ ಮುಜಗೊಂಡ ಕಲ್ಲಪ್ಪ ಅಲ್ಲಾಪೂರ ಡಾ!! ಮಲ್ಲಿಕಾರ್ಜುನ ಪೂಜಾರಿ ಶಾಮರಾವ ಲಾಳಸಂಗಿ ಕಾಶಿನಾಥ ಚಣೇಗಾಂವ ವಿಶ್ವನಾಥ ಚಣೇಗಾಂವ ತುಕಾರಾಮ ಚಣೇಗಾಂವ ಯಶ್ವಂತ ಕರೂಟಿ ಸಿದ್ದಪ್ಪ ಶಿವೂರ ಬಾಷಾಸಾಬ ಗೌರ ಪಂಡಿತ ಬಂಡಗಾರ ಸುಭಾಷ ವಾಲಿ ಬಸವರಾಜ ಕರೂಟಿ ಬಸವರಾಜ ವಾಯಿ ಅಪ್ಪಾಸಾಬ ಹೊಸೂರಕರ ಮಹಾಂತೇಶ ಕರೂಟಿ ನಿಖಿಲ ಚಣೇಗಾಂವ ಪೀರಪ್ಪ ನಿವರಗಿ ದತ್ತಪ್ಪ ಡೊಂಬಾಳೆ ವೇಣುಮಾಧವ ಅವಧಾನಿ ಸಂತೋಷ ಅಲ್ಲಾಪೂರ ಶ್ರೀಕಾಂತ ನಿವರಗಿ ರಾಜಶೇಖರ ಪ್ಯಾಟಿ ನಾಗಪ್ಪ ಭಾಸಗಿ ಶ್ರೀಶೈಲ ಭುಯ್ಯಾರ ನಾಮದೇವ ಚೋಪಡೆ ಪಾಂಡುರಂಗ ಚೋಪಡೆ ಅನೀಲ ಚಣೇಗಾಂವ ಯಲ್ಲಾಲಿಂಗ ಚಣೇಗಾಂವ ಸುನೀಲ ಚಣೇಗಾಂವ ರಾಹುಲ ಚಣೇಗಾಂವ ಇತರರಿದ್ದರು