ಕಾನೂನಿನ ಮುಂದೆ ಎಲ್ಲರೂ ಸಮಾನರು ಅಪರಾಧಕ್ಕೆ ಶಿಕ್ಷೆ ಖಚಿತ : ಎಸ್ಪಿ ಪೃಥ್ವಿಕ್ ಶಂಕರ

ಕೆಂಭಾವಿ :ಜ.11:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಶನಿವಾರ ಜಿಲ್ಲಾ ಪೆÇಲೀಸ್
ಇಲಾಖೆಯಿಂದ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಕುಂದುಕೊರತೆ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು,
ನಮ್ಮ ದೇಶದ ಕಾನೂನು ಬಲಿಷ್ಠವಾಗಿದ್ದು ಕಾನೂನು ಮೀರಿ ಅಪರಾಧ ಕೃತ್ಯ ಮಾಡುವ ಯಾವುದೆ ವ್ಯಕ್ತಿ ಸಮಾಜದಲ್ಲಿ ಎಷ್ಟೆ ದೊಡ್ಡವರಾಗಿದ್ದರೂ ಅವರ ವಿರುದ್ಧ ದೂರು ಬಂದರೆ ಅವರನ್ನು ಬಂಧಿಸುವ ಅಧಿಕಾರ ಪೆÇಲೀಸ್ ಇಲಾಖೆಗೆ ಇದೆ ಎಂದು ಹೇಳಿದರು.

21ನೇ ಶತಮಾನಕ್ಕೆ ನಾವು ಕಾಲಿಟ್ಟಿದ್ದರೂ ಇಂದಿನ ಪ್ರತಿಯೊಂದು ರಂಗದಲ್ಲಿ ಜಾತಿ ವ್ಯವಸ್ಥೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ, ತಿರುಗಾಡುವ ವಾಹನಗಳಲ್ಲಿ, ಮನೊರಂಜನೆ ನೀಡುವ ವಿವಿಧ ಕ್ಷೇತ್ರಗಳಲ್ಲಿ ಇನ್ನೂ ಜಾತಿ ವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 2025-
26ನೇ ಸಾಲಿನಲ್ಲಿ 84 ಪ್ರಕರಣಗಳು ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ
ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ ಅತೀ ಹೆಚ್ಚು ಲೈಂಗಿಕ ದೌರ್ಜನ್ಯ (ಪೆÇಕ್ಸೊ) ಪ್ರಕರಣ ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ಒಂದು ಸಮುದಾಯದ ಅಥವಾ ಒಂದು
ಜಾತಿಯ ವ್ಯಕ್ತಿಗಳಿಂದ ಅಥವಾ ಹಲವರಿಂದತೊಂದರೆಯಾಗುತ್ತಿದ್ದರೆ ಅಂತವರು ಧೈರ್ಯದಿಂದ ಮುಂದೆ
ಬಂದು ಸಂಬಂಧಿಸಿದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ
ಮುಲಾಜಿಲ್ಲದೆ ಅಂಥಾ ಪ್ರಕರಣಕ್ಕೆ ನಮ್ಮ ಇಲಾಖೆ ಕಾನೂನು ರೀತಿ
ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ದಲಿತ ಮುಖಂಡರುಗಳು ಮತ್ತು
ವಾಲ್ಮೀಕಿ ಸಮುದಾಯದ ಮುಖಂಡರುಗಳು ಮಾತನಾಡಿ ಕೆಂಭಾವಿ
ವಲಯದ ಹಲವು ಗ್ರಾಮಗಳಲ್ಲಿ ಇನ್ನೂ ಅಸ್ಪ್ರಶ್ಯತೆ ಮತ್ತು ದಲಿತರಿಗೆ ಸ್ಮಶಾನ ಭೂಮಿಯ ಸಮಸ್ಯೆ ಜೀವಂತವಿದ್ದು ಇದನ್ನು ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿಯೂ ಇಂಥಾ ಸಭೆಗಳು
ಪೆÇಲೀಸ್ ಇಲಾಖೆಯಿಂದ ಆಯೋಜನೆ ಮಾಡಬೇಕು ಎಂದು ಮನವಿ
ಮಾಡಿದರು.

ಡಿವೈಎಸ್‍ಪಿ ಜಾವೇದ ಇನಾಮದಾರ, ಸಿಪಿಐ ರವಿಕುಮಾರ, ಗ್ರೇಡ್-2
ತಹಸೀಲ್ದಾರ ಮಲ್ಲಯ್ಯ ದಂಡು, ಎಸ್.ಸಿ, ಎಸ್.ಟಿ ತಡೆಕಾಯ್ದೆ ಸಮಿತಿ
ಸದಸ್ಯರಾದ ಮರೆಪ್ಪ, ನಿಂಗಪ್ಪ, ಅಪರಾಧ ವಿಭಾಗದ ಪಿಎಸ್‍ಐ
ಹಣಮಂತ ಸಿದ್ದಾಪೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಪ್ಪು
ರಾಠೋಡ, ತಾಪಂ ಅಧಿಕಾರಿ ನಾಗರಾಜ, ಪುರಸಭೆ ಸಿಬ್ಬಂದಿ ಸಿದ್ರಾಮಯ್ಯ ಇಂಡಿ ಇದ್ದರು. ಪಿಎಸ್‍ಐ ಅಮೋಜ ಕಾಂಬಳೆ ಸ್ವಾಗತಿಸಿದರು. ಪಿಸಿ
ರೇಖಾ ನಿರೂಪಣೆ ಮಾಡಿದರು.