ನಿಜಗುಣರ ಪ್ರತಿ ಅವತಾರವೇ ಶ್ರೀ ಖಾಸ್ಗತ:ವೇ.ಸಿದ್ದಯ್ಯಶಾಸ್ತ್ರೀ

ತಾಳಿಕೋಟೆ:ನ.14: ಗ್ರಂಥ ಬರೆದ ಸ್ಥಾನಗಳಾಗಿದ್ದರೂ ಕೆಲವು ಪ್ರಚಾರಕ್ಕೆ ಹೊರಬಂದಿಲ್ಲ ಆದರೆ ಈ ಭಾಗದಲ್ಲಿ ತತ್ವಚಿಂತನೆ ಎಂಬುದು ಉಳಿಯಬೇಕಾದರೆ ಹುಬ್ಬಳ್ಳಿ ಬಿಟ್ಟರೆ ತಾಳಿಕೋಟೆಯಲ್ಲಿ ನಡೆದಿದೆ ಯಾಕೆಂದರೆ ನಿಜಗುಣ ಶಿವಯೋಗಿಗಳವರ ಪ್ರತಿ ಅವತಾರವೇ ಶ್ರೀ ಖಾಸ್ಗತರೆಂದೇ ತಿಳಿದಿದ್ದೇವೆಂದು ಸೋಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ತೋಳನೂರ ಸಿದ್ದಾರೂಡಮಠದ ಶ್ರೀ ವೇ.ಸಿದ್ದಯ್ಯಶಾಸ್ತ್ರೀಗಳು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ನಿಜಗುಣ ಶಿವಯೋಗಿಗಳ ಆನಂದಾಶ್ರಮದ ವತಿಯಿಂದ ಶ್ರೀ ನಿಜಗುಣ ಶಿವಯೋಗಿಗಳವರ ಜಯಂತ್ಯೋತ್ಸವದ ಅಂಗವಾಗಿ ಸಾಗಿಬಂದ 9 ದಿನಗಳವರೆಗೆ ಜರುಗಿದ ಪ್ರವಚನ ಕಾರ್ಯಕ್ರಮದ ಮಹಾ ಮಂಗಲೋತ್ಸವದಲ್ಲಿ ತಾವು ನೀಡಿದ ಪ್ರವಚನದ ಮೂಲಕ ಮುಂದುವರೆದು ಮಾತನಾಡಿ ಗ್ರಂಥಗಳು ಸಾಕಷ್ಠಿವೆ ಅವು ಕೇವಲ ಕಾರ್ಯರೂಪಕ್ಕೆ ಬರಬೇಕಾದರೆ ಹುಬ್ಬಳ್ಳಿಯಿಂದ ತಾಳಿಕೋಟೆಗೆ ಬಂದಿವೆ ಮಾನವರಾದ ನಾವು ಅವುಗಳನ್ನು ಅರೀತು ನಡೆಯಬೇಕಾಗಿದೆ ಎಂದರು. ದೇಹವೆಂಬುದು ಪಂಚಭೂತಗಳಲ್ಲಿ ಲೀನವಾಗಲಿದೆ ಕಾರಣ ಜನ್ಮ ಇರುವತನಕ ಮುಖ್ಯಗುರಿ ನಮ್ಮದೇನೆಂಬುದು ಅರ್ಥೈಸಿಕೊಳ್ಳಬೇಕು ಪ್ರಪಂಚವೆಂಬುದರಲ್ಲಿ ದೇಹವನ್ನು ಹೊತ್ತುಕೊಂಡಿದ್ದೇವೆ ಆದರೆ ಲಕ್ಷವೆಂಬುದು ಹಾಗೂ ಜ್ಞಾನವೆಂಬುದು ಪರಮಾತ್ಮನಲ್ಲಿರಬೇಕು ಇದುವೇ ಸನ್ಮಾರ್ಗತೋರುವದಾಗಿದೆ ಎಂದು ಆನಂದ ಆಶ್ರಮದ ಶಾಸ್ತ್ರ ಸಮಿತಿಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸೇವಾ ಕಾರ್ಯ ಕುರಿತು ಮೇಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಸಭಾ ಅಧ್ಯಕ್ಷರಾದ ಶ್ರೀ.ಷ.ಬ್ರ.ಮುರುಘೇಂದ್ರ ಶಿವಯೋಗಿಗಳು ಮಾತನಾಡಿ ನಿಜಗುಣ ಶಿವಯೋಗಿಗಳ ಗ್ರಂಥಗಳು ಸನ್ಮಾರ್ಗತೋರುತ್ತವೆ ಅವರ ಜ್ಞಾನ ಅನ್ನುವಂತಹದ್ದು ಹೇಗಿತ್ತೆಂಬುದನ್ನು ಅರೀತುಕೊಳ್ಳಬೇಕಾದರೆ ಅವರು ಬರೆದಂತಹ 6 ಗ್ರಂಥಗಳಲ್ಲಿ ಆನಂದ ಕೈವಲ್ಯ ಶಿವನ ಕೃಪಾಕ್ಷೆ ಪಡೆಯಬೇಕು ಸತ್ಸಂಗದಿಂದ ಮನಸ್ಸು ಪರಿವರ್ತನೆಯಾಗಲಿದೆ ಬೇಸರವಿಲ್ಲದೇ ದಿನನಿತ್ಯ ಆನಂದಾಶ್ರಮದಲ್ಲಿ ಸಾಗಿಬರುತ್ತಿರುವ ಸತ್ಸಂಗದಿಂದ ಆದ್ಯಾತ್ಮೀಕ ಚಿಂತನೆ ಎಂಬುದು ಹೆಚ್ಚಾಗಿ ಭಕ್ತಿಮಾರ್ಗ ತೋರುತ್ತಾ ಸಾಗಿರುತ್ತದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಯಾದ ವೇ,ಮುರುಘೇಶ ವಿರಕ್ತಮಠ ಅವರು ಮಾತನಾಡಿ ನಿಜಗುಣ ಶಿವಯೋಗಿಗಳ ಜಯಂತಿಯನ್ನು ಆನಂದಾಶ್ರಮದ ವತಿಯಿಂದ ಪ್ರತಿವರ್ಷ ಆಚರಿಸುತ್ತಾ ಸಾಗಿಬರಲಾಗಿದೆ ಶ್ರೀ ನಿಜಗುಣರ ಹಾಗೂ ಶ್ರೀ ಖಾಸ್ಗರ ಆಶಿರ್ವಾದದ ಫಲವೇ ಈ ಉತ್ಸವಗಳು ನಡೆಯಲು ಕಾರಣವಾಗಿದೆ ಪ್ರತಿನಿತ್ಯ ಆನಂದಾಶ್ರಮದಲ್ಲಿ ಸಾಗಿಬರುತ್ತಿರುವ ಶಾಸ್ತ್ರವೆಂಬುದು ಬಹಳೇ ಪ್ರಸಿದ್ದಿ ಪಡೆದಿದೆ ಇಲ್ಲಿಯ ವಿಷಯ ಅನ್ಯರು ತಿಳಿದುಕೊಳ್ಳುವದು ಕೂಡಾ ಅಗತ್ಯವಾಗಿದೆ ಶಾಸ್ತ್ರ ಸಮಿತಿಯ ಕಾರ್ಯ ಇನ್ನೂ ಹೆಚ್ಚಿಗೆ ಪ್ರಚಾರ ಪಡೆದುಕೊಂಡರೆ ಆದ್ಯಾತ್ಮದತ್ತ ಒಲವು ನೋಡುಗರಲ್ಲಿ ಕೇಳುಗರಲ್ಲಿ ಬರಲಿದೆ ಆ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಅಗ್ನಿ ಶರಣರು, ಹಾಗೂ ಗಡಿಸೋಮನಾಳದ ಶಾಂತಿಪಿತಾ ಸ್ವಾಮಿಜಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿದರು.
ಆನಂದಾಶ್ರಮದ ಅಧ್ಯಕ್ಷರಾದ ವೇ.ಸಿದ್ರಾಮಯ್ಯಸ್ವಾಮಿಗಳು ಬೇನಾಳಮಠ ಅವರು ಆಶ್ರಮ ನಡೆದುಬಂದ ದಾರಿ ಕುರಿತು ದಿನನಿತ್ಯ ನಡೆಯುತ್ತಿರುವ ಕಾರ್ಯವೈಖರ್ಯಗಳ ಕುರಿತು ವಿವರಿಸಿದರು.
ಆಶ್ರಮದ ಹಿರಿಯರಾದ ಶ್ರೀಮತಿ ಉಮಾ ಘೀವಾರಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಕಾರ್ಯಕ್ರಮದ ಮೊದಲಿಗೆ ಆನಂದಾಶ್ರಮದಿಂದ ಶ್ರೀ ನಿಜಗುಣ ಶಿವಯೋಗಿಗಳ ಮಹಾಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಅಲ್ಲದೇ ಅಲಂಕಾರ ಜರುಗಿತ್ತಲ್ಲದೇ ನಂತರ ನೂತನವಾದ ಫಲಕ್ಕಿ ಉತ್ಸವವು ನಿಜಗುಣ ಶಿವಯೋಗಿಗಳವರ ಉತ್ಸವದೊಂದಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಖಾಸ್ಗತ ಮಠಕ್ಕೆ ತೆರಳಿ ಮರಳಿ ಅದೇ ಮಾರ್ಗದಿಂದ ಮೇರವಣಿಗೆ ಆಶ್ರಮ ತಲುಪಿ ಸಭೆಯಾಗಿ ಮಾರ್ಪಟ್ಟಿತು.
ನಂತರ ಆಶ್ರಮದ ಸೇವಾ ಕಾರ್ಯ ಚಟುವಟಿಕೆಯ ಕಾರ್ಯದಲ್ಲಿ ಭಾಗವಹಿಸಿ ವಿವಿಧ ರೀತಿಯಿಂದ ಸಹಾಯ ಹಸ್ತಕಲ್ಪಿಸಿದ ಮಹಾಧಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಆನಂದಾಶ್ರಮದ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಪ್ಪರಗಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಆರ್.ಬಿ.ದಾನಿ ನಿರೂಪಿಸಿ ವಂದಿಸಿದರು.