ಸಮಾಜದ ಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಬೇಕು


ಧಾರವಾಡ,ಅ.೩: ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ೧೪೩ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಧಾರವಾಡ ಕೃಷಿ ವಿ.ವಿ. ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು ಎಂದರು.


ನಿವೃತ್ತ ಸೇನಾ ಮೇಜರ್ ಬಸವರಾಜ ಗುರುಸಿದ್ಧಪ್ಪ ಗಿಲಗಂಚಿ ಮಾತನಾಡಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕಾರ್ಯಾಧ್ಯಕ್ಷ ಆರ್. ಯು. ಬೆಳ್ಳಕ್ಕಿ ಲಿಂಗಾಯತ ಸಮಾಜಕ್ಕಾಗಿ ಸೇವೆಸಲ್ಲಿಸಿದ ಮಹನೀಯರ ತ್ಯಾಗ ಸೇವೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾAತ ಮಟ್ಟಿ, ಸಂಸ್ಥೆಯು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದ ಅವರು, ವಿಶ್ವಗುರು ಬಸವೇಶ್ವರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಂಸ್ಥೆಯು ಕಾರ್ಯರ್ನಿಹಿಸುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಉದ್ಯಮಿಯಾದ ರವೀಂದ್ರ ಪಂಡಿತ, ಸಂಸ್ಥೆಯ ಉಪಾಧ್ಯಕ್ಷರಾದ ವಿ. ಬಿ. ಯಳಲಿ, ಜಂಟಿ ಕಾರ್ಯದರ್ಶಿ ಎಸ್. ಎಂ. ಅಗಡಿ, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್. ತಾಳಿಕೋಟಿ, ಎಂ.ಆರ್. ಇಂಡಿ, ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಹಾಗೂ ಸಂಸ್ಥೆಯ ಸದಸ್ಯರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.