ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಥ್ನಿಕ್ ಡೇ ಸಂಭ್ರಮ

ಬೀದರ್:ಅ.18: ಇತ್ತಿಚೇಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನ ಮೂರನೇ ವರ್ಷದ “ಅಗಸ್ತ್ಯನ್ಸ್” ವಿದ್ಯಾರ್ಥಿಗಳು, ಕಾಮಧೇನು ಕನ್ನಡ ಸಂಘದ ಸಹಯೋಗದಲ್ಲಿ ವೈಭವ 2025 – ಎಥ್ನಿಕ್ ಡೇಯನ್ನು ಅದ್ದೂರಿಯಾಗಿ, ಸಾಂಸ್ಕøತಿಕ ವೈಭವ ಮತ್ತು ಪಾರಂಪರಿಕ ಸೊಬಗಿನಿಂದ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಬಸವರಾಜ ಭಾತಮುರಗೇ, ಆಡಳಿತ ಮಂಡಳಿ ಸದಸ್ಯರು – ವಿದ್ಯಾರ್ಥಿಗಳ ಕಲಾ, ಕರಕುಶಲ ಹಾಗೂ ವೈವಿಧ್ಯಮಯ ಪಾರಂಪರಿಕ ವಸ್ತ್ರಧಾರಣೆಯನ್ನು ಮೆಚ್ಚಿ, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ತೋರಿದ ತೊಡಗಿಕೆಯನ್ನು ಪ್ರಶಂಸಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಾಜಕುಮಾರ ಹೆಬ್ಬಾಳೆ, ಕಾರ್ಯದರ್ಶಿ, ಭಾರತೀಯ ಜನಜಾತಿ ಜನಪದ ಮಂಡಳಿ – ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಸಂಘಗಳ ಅಗತ್ಯತೆಯನ್ನು ಒತ್ತಿಹೇಳಿ, ತಮ್ಮ ಮೂಲಗಳನ್ನು ಮರೆಯದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಎ.ಟಿ. ರಾಮಚಂದ್ರ ನಾಯಕ – ವಿದ್ಯಾರ್ಥಿ-ಬೋಧಕ ಸಿಬ್ಬಂದಿಗಳ ಒಟ್ಟಿನ ಶ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಕೆ. ತಾಂಡಲೆ, ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್ – ಬೋಧಕರು ಹಾಗೂ ವಿದ್ಯಾರ್ಥಿಗಳು ಪಾರಂಪರಿಕ ಉಡುಪಿನಲ್ಲಿ ಭಾಗವಹಿಸಿದ್ದನ್ನು ಮೆಚ್ಚಿ, ಅಲಂಕಾರ, ಕಾರ್ಯಕ್ರಮ ನಿರ್ವಹಣೆ ಹಾಗೂ ಎಲ್ಲರ ಸಹಭಾಗಿತ್ವವನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಪ್ರಸಿದ್ಧ ಗಾಯಕಿ ಸೌ. ಪ್ರಿಯಾಂಕಾ ಗುರು ಮತ್ತು ಗಾಯಕ ಶ್ರೀ ಗುರುದೇವ ಅವರ ನಾದಗೀತೆಯೊಂದಿಗೆ ಪ್ರಾರಂಭಿಸಿ, ಕಾಮಧೇನು ಕನ್ನಡ ಸಂಘದ ಸಂಯೋಜಕರಾದ ಡಾ. ಚನ್ನಪ್ಪಗೌಡ ಬಿರಾದಾರ ಸ್ವಾಗತ ಭಾಷಣ ಮಾಡಿದರು. ಭರತನಾಟ್ಯ, ಕೊಲಾಟ, ವಿವಿಧ ನೃತ್ಯಗಳು ಹಾಗೂ ಬೋಧಕ-ಅಬೋಧಕ ಸಿಬ್ಬಂದಿ ಮತ್ತು ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಂದ ಯಾರ್ಂಪ್ ವಾಕ್ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಡಾ. ಕೋಟ್ರೇಶ್ ಪ್ರಸಾದ್ ವಂದನೆ ಸಲ್ಲಿಸಿದರು, ಸವಿತಾ ಕೆ ವಿದ್ಯಾರ್ಥಿಗಳ ಸಮನ್ವಯ ನೋಡಿಕೊಂಡರು, ರಾಮೇಶ್ ಲೋಕೂರೆ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಮದನ್, ಶರಣಬಸವ ಸಕ್ರಿಯವಾಗಿ ಪಾಲ್ಗೊಂಡರು.
ಕೊನೆಯಲ್ಲಿ “ಅಗಸ್ತ್ಯನ್ಸ್” ತಂಡ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯೊಂದಿಗೆ ಸಮೂಹ ಫೆÇೀಟೋ ಸೆಷನ್ ನಡೆಯಿತು. ಈ ನೆನಪುಗಳು ಏಕತೆ, ಸಂಸ್ಕೃತಿ ಮತ್ತು ಸಂತಸದ ಸಂಕೇತಗಳಾಗಿ ಉಳಿದವು. ವೈಭವ 2025 ಯಶಸ್ವಿಗೆ ನೇರ-ಪರೋಕ್ಷವಾಗಿ ಕೈಜೋಡಿಸಿದ ಎಲ್ಲರಿಗೂ ಸಂಘಟಕರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.