
ಕಲಬುರಗಿ,ಫೆ.25: ಆಸ್ಪತ್ರೆಗೆ ಬರುವ ಬಡವರು, ವಿಮೆ ವ್ಯಾಪ್ತಿಯಲ್ಲಿ ಬರುವ ಶ್ರಮಿಕ ವರ್ಗದ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಕಲಬುರಗಿ ಇ.ಎಸ್.ಐ.ಸಿ ಆಸ್ಪತ್ರೆ ಕಾರ್ಯ ಶ್ಲಾಘನೀಯವಾಗಿದೆ ಮತ್ತು ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಶಶಿಲ್ ಜಿ. ನಮೋಶಿ ಹೇಳಿದರು.
ಮಂಗಳವಾರ ಇಲ್ಲಿನ ಇ.ಎಸ್.ಐ.ಸಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಇ.ಎಸ್.ಐ.ಸಿ. ಯ 75ನೆ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 8 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ಪ್ರಾಂತ್ಯದಲ್ಲಿ 2014 ರಲ್ಲಿ 50 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರೆ, ಇಂದು ಇದರ ಸಂಖ್ಯೆ 2.50 ಲಕ್ಷಕ್ಕೆ ಏರಿದೆ. ಇದು ಇ.ಎಸ್.ಐ.ಸಿ ಸಂಸ್ಥೆ ಮತ್ತು ಆಸ್ಪತ್ರೆಯ ಕಾರ್ಯಕ್ರಮತೆ ಮತ್ತು ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗವು ಹೆಚ್ಚಾಗಿ ಬಡ , ಕಾರ್ಮಿಕದವರೆ ಹೆಚ್ಚಾಗಿದ್ದಾರೆ. ಸಣ್ಣ-ಪುಟ್ಟ ಚಿಕಿತ್ಸೆಗೆ ಜನ ಸೋಲಾಪುರ, ಹೈದ್ರಾಬಾದ್ ನತ್ತ ಜನ ಮುಖ ಮಾಡುತ್ತಾರೆ. ಇದನ್ನು ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಹೆಚ್.ಕೆ.ಇ. ಸಂಸ್ಥೆಯ ಎಂ.ಆರ್.ಎಂ.ಸಿ. ಮೆಡಿಕಲ್ ಕಾಲೇಜು ಇ.ಎಸ್.ಐ.ಸಿ ಆಸ್ಪತ್ರೆ ಜೊತೆಗೆ ಸೇರಿ ಕೆಲಸ ಮಾಡುವ ಪ್ರಸ್ತಾಪ ಇದೆ. ಅ ಮೂಲಕ ಪ್ರದೇಶದ ಜನರಿಗೆ ಗುಣಮಟ್ಟದ ಸೇವೆ ನೀಡುವುದು ತಮ್ಮ ಉದ್ದೇಶವಾಗಿದೆ ಎಂದರು.
ಚಿಂಚೋಳಿ ಶಾಸಕ ಅವಿನಾಶ ಜಾಧವ ಮಾತನಾಡಿ, ಜನರಲ್ಲಿ ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಅಳಕಿದೆ. ಇದನ್ನು ಹೋಗಲಾಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ. ಹಣ ಸುರಿಯುವ ಬದಲು ಇಂತಹ ಅಸ್ಪತ್ರೆಗಳಿಗೆ ಬಂದು ಜನ ವೈದ್ಯಕೀಯ ಸೇವೆ ಪಡೆಯಬೇಕು ಎಂದರು.
ಡ್ರಗ್ಸ್-ಕ್ರೈಮ್ ಮುಕ್ತ ನಗರಕ್ಕೆ ಕೈಜೋಡಿಸಿ:ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ ಸುಮಾರು 75 ವರ್ಷ ಸತತ ರೋಗಿಗಳ ಭರವಸೆ ಇಟ್ಟುಕೊಂಡು ಸಾಗುತ್ತಿರುವ ಇ.ಎಸ್.ಐ.ಸಿ ಸಂಸ್ಥೆ ಮತ್ತು ಅದರ ತಂಡದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಬುರಗಿ ನಗರವನ್ನು ಡ್ರಗ್ಸ್ ನತ್ತು ಸೈಬರ್ ಕ್ರೈಮ್ ಮುಕ್ತ ನಗರವನ್ನಾಗಿಸಲು ಪೆÇಲೀಸ್ ಇಲಾಖೆ ಪಣ ತೊಟ್ಟಿದ್ದು, ವಿದ್ಯಾರ್ಥಿ ವೃಂದ ಇದಕ್ಕೆ ಸಹಕಾರ ನೀಡಬೇಕು. ಮದ್ಯ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ 112 ಸಂಖ್ಯೆಗೆ, ಸೈಬರ್ ಕ್ರೈಮ್ ಪ್ರಕರಣದಲ್ಲಿ ಭಯವಿಲ್ಲದೆ 1930 ಸಂಖ್ಯೆಗೆ ಕರೆ ಮಾಡಿದಲ್ಲಿ ಪೆÇಲೀಸ್ ತಂಡ ನಿಮ್ಮ ನೆರವಿಗೆ ಬರಲಿದೆ ಎಂದು ಅಭಯ ಹಸ್ತ ನೀಡಿದರು.
ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಸ್.ವಿ.ಕ್ಷೀರಸಾಗರ ಪ್ರಸ್ತಾವಿಕವಾಗಿ ಮಾತನಾಡಿ, ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ತುಂಬಾ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ನೀಡಲಾಗುತ್ತಿದೆ. ಕಳೆದ ಜನವರಿ ಮಾಹೆಯಲ್ಲಿ 33,088 ರೋಗಿಗಳು ಓ.ಪಿ.ಡಿ ಸೇವೆ ಹಾಗೂ 1,732 ಜನ ಒಳರೋಗಿಯಾಗಿ ವೈದ್ಯಕೀಯ ಸೇವೆ ಪಡೆದಿದ್ದಾರೆ. ಓಪಿಡಿ ಭೇಟಿಗಳಲ್ಲಿ 11,638 ವಿಮಾ ಹೊಂದಿದ ಪ್ರಯೋಜನಾರ್ಥಿಗಳು ಇದ್ದರೆ, 21,450 ಸಾಮಾನ್ಯ ಸಾರ್ವಜನಿಕರು ಆಗಿದ್ದಾರೆ. ಒಳರೋಗಿ ಸೇವೆಗಳಲ್ಲಿ 721 ಮಂದಿ ವಿಮಾದಾರರಿದ್ದರೆ, 1,011 ಮಂದಿ ವಿಮಾ ರಹಿತ ರೋಗಿಗಳಿದ್ದಾರೆ. ಕಲಬುರಗಿ ಇಎಸ್‍ಐಸಿ ಕೇವಲ ವಿಮಾ ಹೊಂದಿದ ಕಾರ್ಮಿಕರμÉ್ಟೀ ಅಲ್ಲದೆ, ಸಾರ್ವಜನಿಕರಿಗೂ ಚಿಕಿತ್ಸೆ ನೀಡಲು ಲಭ್ಯವಿದೆ ಎಂದು ಅವರು ಒತ್ತಿ ಹೇಳಿದರು.
ವಿಮಾಧಾರಕರಿಗೆ ನಗದು ರಹಿತ ಚಿಕಿತ್ಸೆ ಲಭ್ಯವಿದ್ದು, ಸಾಮಾನ್ಯ ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ಸೇವೆಗಳು ಒದಗಿಸಲಾಗುತ್ತಿದೆ. ಉದಾಹರಣೆಗೆ ಸಿಬಿಸಿ ಸೇವೆಗೆ 11 ರೂ., ಎಕ್ಸ್-ರೇ ಸೇವೆಗೆ 14 ರೂ., ಅಲ್ಟ್ರಾಸೌಂಡ್ ಸೇವೆಗೆ 30 ರೂ., ಸಾಮಾನ್ಯ ಪ್ರಸವಕ್ಕೆ 1,272 ರೂ., ಮುತ್ತಿನ ಕಣ್ಣು ಶಸ್ತ್ರಚಿಕಿತ್ಸೆಗೆ 487 ರೂ. ಮಾತ್ರ ರೋಗಿಗಳಿಂದ ಪಡೆಯಲಾಗುತ್ತಿದೆ. ಇನ್ನು ಒಳರೋಗಿಗಳಿಗೆ ಪ್ರತಿ ದಿನದ ವಾರ್ಡ್ ಹಾಸಿಗೆ ಬಾಡಿಗೆಗೆ 75 ರೂ., ಐಸಿಯು ವಾರ್ಡ್ ನಲ್ಲಿದಲ್ಲಿ ದಿನಕ್ಕೆ 257 ರೂ. ಹಾಸಿಗೆ ಬಾಡಿಗೆ ಪಡೆಯುತ್ತಿದ್ದು, ಹೀಗೆ ಕೈಗೆಟುಕುವ ದರದಲ್ಲಿ ಸಮರ್ಪಿತ ಸೇವೆ ನೀಡಲಾಗುತ್ತಿದೆ ಎಂದರು.
ಚಿಕಿತ್ಸೆ ಪಡೆದ ರೋಗಿಗಳಿಗೆ ಸನ್ಮಾನ:ಇನ್ನು ಇ.ಎಸ್.ಐ.ಸಿ ಆಸ್ಪತ್ರೆ, ಡೆಂಟಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಒಡೆದು ಗುಣಮುಖರಾದ ರೋಗಿಗಳಿಗೆ ಸನ್ಮಾನಿಸಲಾಯಿತು. ಅಲ್ಲದೆ ದುರ್ಗಘಟನೆಯಲ್ಲಿ ಮೃತರಾದ ಐ.ಪಿ. ಕಾರ್ಮಿಕರ ಕುಟುಂಬಸ್ಥರಿಗೆ ಕುಟುಂಬ ಪಿಂಚಣಿ ಅದೇಶ ಪತ್ರ ಸಹ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಕೆ.ಕೆ.ಸಿ.ಸಿ.ಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪ, ಕಲಬುರಗಿ ಇ.ಪಿ.ಎಫ್.ಓ ಕಚೇರಿಯ ಪ್ರಾದೇಶಿಕ ನಿರ್ದೇಶಕ ಎಂ.ಸುಬ್ರಮಣ್ಯಂ, ಇ.ಎಸ್.ಯ.ಸಿ ಡೆಂಟಲ್ ಕಾಲೇಜು ಡೀನ್ ಡಾ.ಪ್ರಶಾಂತ ಪಾಟೀಲ, ಇ.ಎಸ್.ಐ.ಸಿ. ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಎಸ್.ವಿ.ಯುವರಾಜ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ಐ.ಅಮೃತಾ ಸ್ವಾತಿ, ಇ.ಎಸ್.ಯ.ಸಿ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಸಂತೋಷ ಬಿರಾದಾರ, ಇ.ಎಸ್.ಐ.ಸಿ ನಸಿರ್ಂಗ್ ಕಾಲೇಜು ಪ್ರಾಂಶುಪಾಲ ಡಾ.ಪಿ.ಎಂ.ಪ್ರತಿಭಾ, ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜು ಜಂಟಿ ನಿರ್ದೇಶಕ ಲಕ್ಷ್ಮೀ ನಾರಾಯಣ ಮೀನಾ ಸೇರಿದಂತೆ ಆಸ್ಪತ್ರೆಯ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು, ರೋಗಿಗಳು ಇದ್ದರು.



























