ಇಎಸ್‍ಐಸಿ ಆಸ್ಪತ್ರೆ ಸೇವೆ ಇನ್ಮುಂದೆ ಅಸಂಘಟಿತ ಕಾರ್ಮಿಕರಿಗೂ ಲಭ್ಯ: ಶೋಭಾ ಕರಂದ್ಲಾಜೆ

ಕಲಬುರಗಿ,ಡಿ.23: ದೇಶದಲ್ಲಿ ಪ್ರಸ್ತುತ ಇರುವ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಅವಲಂಭಿಕತರಿಗೆ ಉಚಿತ ಸೇವೆ ನೀಡುತ್ತಿದ್ದು, ಇನ್ಮುಂದೆ ಕೃಷಿ, ಗಿಗ್, ಗಾಮೆರ್ಂಟ್ಸ ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗದವರಿಗೂ ಇ.ಎಸ್.ಐ.ಸಿ ಆಸ್ಪತ್ರೆ ಸೇವೆ ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಇಂದು ಇ.ಎಸ್.ಐ.ಸಿ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಿದ ಅಂತರ್ಜಲ ಹೆಚ್ಚಳ ಕ್ರೀಡಾ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟಿತ ಮತ್ತು ಅಸಂಘಟಿತ ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸಬೇಕೆಂಬ ಪ್ರಧಾನಮಂತ್ರಿಗಳ ಇಚ್ಛಾಶಕ್ತಿಯಂತೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕಲಬುರಗಿಯ ಇ.ಎಸ್.ಐ.ಸಿ ಕಾಲೇಜು 560 ಹಾಸಿಗೆಯ ಆಸ್ಪತ್ರೆಯಾಗಿದ್ದು, ಕೇವಲ್ ಐ.ಪಿ., ಸಂಘಟಿತ ಕಾರ್ಮಿಕ ವರ್ಗಕ್ಕೆ ಸೀಮಿತವಾಗಿದ್ದರಿಂದ ಪೂರ್ಣ ಪ್ರಮಾಣ ಹಾಸಿಗೆ ಭರದತಿಯಾಗುತ್ತಿಲ್ಲ. ಹೀಗಸಗಿ ಸಿ.ಜಿ.ಎಚ್.ಎಸ್ ಯೋಜನೆ ಈ ಆಸ್ಪತ್ರೆಗೆ ವಿಸ್ತರಣೆ ಹೀಗಿದ್ದಾಗಿಯೂ ಶೇ.50ಕ್ಕಿಂತ ಹೆಚ್ಚಿನ ಬೆಡ್ ತುಂಬುತ್ತಿಲ್ಲ ಎಂದರು.
ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲೆಂದೇ ದೇಶದಾದ್ಯಂತ 10 ಮೆಡಿಕಲ್ ಜಾಲೇಜು ತೆರೆಯಲಾಗುತ್ತಿದೆ. ಅದರೆ ಕರ್ನಾಟಕದಲ್ಲಿ ಪ್ರಸ್ತುತ ಎರಡು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜು ಇರುವುದರಿಂದ ಹೊಸ ಕಾಲೇಜಿಗೆ ಪ್ರಸ್ತಾವನೆ ಇಲ್ಲ ಎಂದ ಅವರು, ಬ್ರಿಟೀಷ್ ಕಾಲದಿಂದ ಬಂದಿದ್ದ 27 ವಿವಿಧ ಕಾಯ್ದೆಗಳನ್ನು ರದ್ದುಪಡಿಸಿ ಹೊಸದಾಗಿ 4 ಕಾರ್ಮಿಕ ಕಾಯ್ದೆ ರೂಪಿಸಿದ್ದು, ಅದು ಕಾರ್ಮಿಕರ ಹಿತ ಕಾಯಲಿದೆ ಎಂದರು.
ಇಂದಿಲ್ಲಿ ಜಿಮ್, ವಾಲಿಬಾಲ್, ಕ್ರಿಕೆಟ್ ಮೈದಾನ ತುಂಬಾ ಸಂತೋಷದಿಂದ ಉದ್ಘಾಟಿಸಿದ್ದೇನೆ. ಶಿಕ್ಷಣದ ಜೊತೆದೆ ವ್ಯಕ್ತಿ ವಿಕಸನಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿತ ಸದೃಢತೆಗೆ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಕ್ಷೀರಸಾಗರ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಗೆ ಕಾಲೇಜು ಪೂರಕ ಕಾರ್ಯಕ್ರಮಗಳು ಹಾಕಿಕೊಂಡಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮತ್ತು ಅಸ್ಪತ್ತೆ ಗುಣಮಟ್ಟದ ಸೇವೆ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಇ.ಎಸ್.ಐ.ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಡ್ಲಿಮಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮಜಾ ಇ.ಎಸ್.ಐ.ಸಿ ಜಂಟಿ ನಿರ್ದೇಶಕ ಎಸ್.ವಿ.ಯುವರಾಜ, ಪ್ರಾದೇಶಿಕ ನಿರ್ದೇಶಕ ಎಂ.ಸುಬ್ರಮಣ್ಯಮ್, ಮುಖಂಡರಾದ ಶಿವರಾಜ ಪಾಟೀಲ ರದ್ದೆವಾಡಗಿ, ಮಹಾದೇವ ಬೆಳಗುಂಪಿ ಸೇರಿದಂತೆ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಇದ್ದರು.