ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ

ಕಲಬುರಗಿ,ಅ.31-ಭಾರತದ ನ್ಯಾಶನಲ್ ಆಂಟಿ ಕರಪ್ಶನ್ ಮತ್ತು ಕಾರ್ಯಾಚರಣೆ ಸಮಿತಿ ಕರ್ನಾಟಕ ವತಿಯಿಂದ ಬೆಂಗಳೂರಿನ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಜಿಲ್ಲೆಗಳ ಉದ್ಘಾಟನೆ ಯೊಂದಿಗೆ ಪದಾಧಿಕಾರಿಗಳ ಸಮಾವೇಶ ಮತ್ತು ಶಪಥ ಗ್ರಹಣ ಕಾರ್ಯಕ್ರಮ ನೆರವೇರಿತು.
ಸಮಾರಂಭದ ಉದ್ಘಾಟನೆಯನ್ನು ನಿಶ್ಚಲಾನಂದ ಸ್ವಾಮಿಯವರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಡಾ.ರಾಜೇಶ್ ಶುಕ್ಲಾರವರು ಅತಿಥಿ ಗಣ್ಯರೊಂದಿಗೆ ನೆರವೇರಿಸಿದರು.
ಸಂಘಟನೆಯ ಬಲವರ್ಧನೆ ಮತ್ತು ಪರಿಣಾಮಕಾರಿ ಕಾರ್ಯಾಚರಣೆಯಿಂದ ಭ್ರಷ್ಟಾಚಾರ ಮತ್ತು ಅತ್ಯಾಚಾರದಂತಹ ದುಷ್ಟ ಕೃತ್ಯಗಳನ್ನು ತಡೆಗಟ್ಟುವದಷ್ಟೇ ಅಲ್ಲ ನಿರ್ಮೂಲನೆ ಮಾಡಬಹುದೆಂದು ಸಮಾವೇಶದಲ್ಲಿ ಅಭಿಪ್ರಾಯ ಪಡಲಾಯಿತು.
ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಡಾ.ರಾಜೇಶ್ ಶುಕ್ಲಾ ಮತ್ತು ಡಾ. ಎಸ್ ಭದ್ರಶೆಟ್ಟಿಯವರು ಶಪಥವನ್ನು ಬೋಧಿಸಿದರು. ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಇಡೀ ಭಾರತ ದೇಶದಲ್ಲಿಯೇ ಹೆಚ್ಚು ಸಾಧನೆಗೈದ ಡಾ.ಎ.ಎಸ್ ಭದ್ರಶೆಟ್ಟಿಯವರಿಗೆ ಪ್ರಥಮ ಸ್ಥಾನದ ಪ್ರಶಸ್ತಿ, ಶಾಮರಾವ್ ಪ್ಯಾಟಿ, ದಯಾನಂದ, ಶಿವಕುಮಾರ, ರುದ್ರಪ್ಪ, ಸುರೇಶ ಕಲಶೆಟ್ಟಿ ಮತ್ತು ವಿಜಯಕುಮಾರ ಬಿರಾದಾರ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಲಬುರಗಿಯ ಬಿ.ಆರ್. ಚವ್ಹಾಣ, ಶರಣಬಸಪ್ಪ ರಾಂಪುರೆ, ಸೂರ್ಯ ಕುಮಾರ್ ಮತ್ತು ಸಂಜು ಕುಮಾರ ಸಹಿತ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಒಟ್ಟಾರೆ ಸಮಾರಂಭ ಅತಿ ಯಶಸ್ವಿಯಾಗಿ ನೆರವೇರಿತು.