
ಕಲಬುರಗಿ:ಮೇ.31: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಪ್ರಾದೇಶಿಕ ಕಛೇರಿಯಿಂದ ಪ್ರಯಾಸ ಯೋಜನೆ ಅಡಿಯಲ್ಲಿ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದ ಭವಿಷ್ಯ ನಿಧಿ ಸದಸ್ಯರಾದ ಪ್ರಕಾಶ, ಮಾನಸಿಂಗ, ಅಬ್ದುಲ್ ಮನ್ನನ್, ಕೃಷ್ಣಾಜಿ, ಸತ್ಯನಾರಾಯಣ, ಶಿವರುದ್ರಪ್ಪ, ಶಿವಕುಮಾರ ಹಾಗೂ ದೇಸು ಅವರಿಗೆ ನಿವೃತ್ತಿಯ ದಿನದಂದೇ ಪಿಂಚಣಿ ಪಾವತಿ ಆದೇಶವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಎಂ. ಸುಬ್ರಹ್ಮಣ್ಯಂ ವಿತರಿಸಿದರು.
ಕಾರ್ಯಕ್ರಮದಲ್ಲಿ ಲೆಕ್ಕಾದಿಕಾರಿ ಬಸವರಾಜ, ಸೌರಭ ತೋರಟ್, ಸವಿತಾ ಬಲಗಲಿ, ಯೂಸುಪ್ ಅಲಿ, ಕೇಶವರಾಜ ಕುಲಕರ್ಣಿ, ಪ್ರಶಾಂತ ಇಂಗಳೆಶ್ವರ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.