
ಸೈದಾಪುರ;ಫೆ.೧೨:ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಮುಖ್ಯಗುರು ಯಂಕಪ್ಪ ದೊಡ್ಡಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯಕ್ಕೆ ಪರಿಸರ ಅತಿ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಚಿಕ್ಕಂದಿನಿAದಲೇ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದಲಾದ ಜೀವನ ಪದ್ಧತಿಯಿಂದ ಪರಿಸರದಲ್ಲಿ ವಿವಿಧ ರೀತಿಯ ಮಾಲಿನ್ಯವನ್ನು ಕಾಣುವಂತಾಗಿದೆ. ಈ ದಿಸೆಯಲ್ಲಿ ಸರಕಾರ ವಿವಿಧ ಕಾರ್ಯಕ್ರಗಳ ಮೂಲಕ ಪರಸರದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಅತಿಥಿಗಳು ನೀಡುವ ಸಲಹೆ ಸೂಚನೆಗಳನ್ನು ಪಾಲನೆ ಮಾಡುವ ಮೂಲಕ ಪರಿಸರ ರಂಕ್ಷಣೆ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿದ್ಯಾ ವರ್ಧಕ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ಅಜೀಮ ಪ್ರೇಮಜಿ ಫೌಂಡೇಶನ ಶಿಕ್ಷಕ ಕಲಿಕೆ ಕೇಂದ್ರದ ಸಂಯೋಜಕ ಮಲ್ಲೇಶ.ಎನ್.ವಗ್ಗರ ಮಾತನಾಡಿದರು. ಶಿಕ್ಷಕರಾದ ದೀಪಿಕಾ, ಬಲರಾಮ, ಶ್ರೀದೇವಿ, ಗೀತಾ, ರತ್ನಮ್ಮ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಶಿಕ್ಷಕಿ ಶಾಂತಮ್ಮ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮಹಿಪಾಲರೆಡ್ಡಿ ನಿರೂಪಿಸಿದರು. ಶಿವಕಾಂತಮ್ಮ ವಂದಿಸಿದರು.

























