ಪರಿಸರ ಸಂರಕ್ಷಣೆ ಅತ್ಯವಶ್ಯ:ವೆಂಕಟೇಶ ಪುರ

ಸೈದಾಪುರ:ಜೂ.೨೪:ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ಅತ್ಯವಶ್ಯಕವಾಗಿದ್ದು ಅದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಲಾಯನ್ಸ್ ಕ್ಲಬ್ ಸೈದಾಪುರ ಅಧ್ಯಕ್ಷ ವೆಂಕಟೇಶ ಪುರಿ ಅವರು ಅಭಿಪ್ರಾಯ ಪಟ್ಟರು.
ಪಟ್ಟಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು, ನೀರೆರೆದು ಮಾತನಾಡಿದರು. ಒಂದು ಕುಟುಂಬದಿAದ ಕನಿಷ್ಠ ಒಂದು ಗಿಡ ನೆಟ್ಟು ಬೆಳೆಸಬೇಕು ಎಂಬ ದೃಢ ಸಂಕಲ್ಪ ಪರಿಸರ ದಿನಾಚರಣೆ ದಿನದಂದು ಮಾಡಬೇಕಿದೆ. ನಾವು ಎಷ್ಟು ಮರಗಳು ಉಳಿಸಿ ಬೆಳೆಸುತ್ತೇವೆ ಎಂಬುದು ಮುಖ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಕೆಂಡದAತೆ ಸುಡುತ್ತಿರುತ್ತದೆ ಇದನ್ನು ಕಡಿಮೆ ಮಾಡಲು ಹಸಿರು ಪರಿಸರ ನಿರ್ಮಾಣವಾಗಬೇಕು ಮತ್ತು ಗಿಡಮರಗಳನ್ನು ನೆಡುವುದರ ಜೊತೆಗೆ ಪೋಷಣೆ ಮಾಡುವುದು ಬಹಳ ಮುಖ್ಯವಾಗಿದೆ ಎಂದರು. ನಮ್ಮ ಕ್ಲಬ್‌ನ ಸದಸ್ಯರು ಪರಿಸರ ರಕ್ಷಣೆಗೆ ಕೈ ಜೋಡಿಸುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು.
ಈ ವೇಳೆ ಯಾದಗಿರಿ ಪ್ರಾಥಮಿಕ ಸಹಕಾರ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಬಸರೆಡ್ಡಿಗೌಡ ಹೆಗ್ಗಣಗೇರಾ, ನಾರಾಯಣಪೇಠ ಲಾಯನ್ಸ್ ಕ್ಲಬ್‌ನ ಆತ್ಮರಾಮ್, ಪಿ.ಕೃಷ್ಣಮೂರ್ತಿ, ಪಿ.ಐ ವಿನಾಯಕ, ಕ್ಲಬ್ ಕಾರ್ಯದರ್ಶಿ ಬನಯ್ಯಸ್ವಾಮಿ ಬದ್ದೇಪಲ್ಲಿ, ಕೋಶಾಧ್ಯಕ್ಷ ಲಕ್ಷಿö್ಮÃನಾರಾಯಣ ಪುರಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ್, ಶಿಕ್ಷಕ ಶರಣಬಸಪ್ಪ ಕಡೇಚೂರು, ಕೆ.ಪಿ ವಸಂತಕುಮಾರ, ಸಹ ಪ್ರಾದ್ಯಪಕ ಡಾ ಶರಬಯ್ಯಸ್ವಾಮಿ ಹಿರೇಮಠ, ನ್ಯಾಯವಾದಿ ಸಂತೋಷ ಬಾದಾಮಿ, ಶರಣು ಚಂದ್ರಗಿರಿ, ಪರಮೇಶ ವಾರದ್, ಸಂದೀಪಕುಮಾರ ದೋಕ, ಶಶಿಧರಸ್ವಾಮಿ ಹಿರೇಮಠ, ಆನಂದ ವಾರದ್, ಸಚೀನ ಪಾಟೀಲ್ ಕ್ಯಾತ್ನಾಳ್, ಭೀಮಣ್ಣ ಮಡಿವಾಳಕರ್, ಕೆ.ಪಿ ವೆಂಕಟೇಶ ಪುರಿ, ರಾಘವೇಂದ್ರ ಪತ್ತಿ, ಸಿದ್ದು ಪೂಜಾರಿ ಬದ್ದೇಪಲ್ಲಿ, ವಿಲಾಸ ಅಂಬರೀಶ ನಾಯಕ್ ಕೂಡಲೂರು, ಸೇರಿದಂತೆ ಇತರರಿದ್ದರು.