ಪರಿಸರದ ಸಮೃದ್ಧಿಯು ಆರೋಗ್ಯಕರ ಜೀವನದ ಅಸ್ತಿತ್ವಕ್ಕೆ ಕಾರಣ: ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ

ಬೀದರ್:ಜೂ.6: ಹಸಿರು ಪರಿಸರ ನಿರ್ಮಾಣಕ್ಕೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರ್ ಹಲವಾರು ಉಪಕ್ರಮಗಳನ್ನು ಕೈಗೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಅಭಿಪ್ರಾಯ ಪಟ್ಟರು.
ಗುರುವಾರ ನಗರದ ಬಿ.ವಿ.ಬಿ ಮಹಾವಿದ್ಯಾಲಯದ ಪರಿಸರದಲ್ಲಿರುವ ಬಸವೇಶ್ವರ ಬಿ.ಇ.ಡಿ ಕಾಳೆಝೂ ಆಔಋನಧರ್ಳಳೀ ¥S್ಪ್ಲಜಿಶರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಕೇವಲ ಮಾನವರಿಗಷ್ಟೇ ಅಲ್ಲ ಇತರೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯೆಗಳಿಗಾಗಿ ಪರಿಸರ ಅವಲಂಬಿಸಿದೆ ಎಂದರೆ ತಪ್ಪಾಗಲಾರದು. 2025ರ ಘೋಷ ವಾಕ್ಯವಾದ “ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು”ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು, ಅಕ್ರಮ ವನ್ಯಜೀವಿ ವ್ಯಾಪಾರ, ಪ್ಲಾಸ್ಟಿಕ್ ಮಾಲಿನ್ಯ, ಸುಸ್ಥಿರವಲ್ಲದ ಬಳಕೆ ಮುಂತಾದವು ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ನಾವು ಕುಡಿಯುವ ನೀರು, ಆಹಾರ ನಮ್ಮ ದೇಹದಲ್ಲಿ ಸೇರುತ್ತಿವೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅತ್ಯಂತ ಸುಂದರವಾದ ದೃಶ್ಯವೆಂದರೆ ನಮ್ಮ ಪರಿಸರ, ಆದ್ದರಿಂದ ಅದು ಹೆಚ್ಚು ಬೆಳೆಯುವುದನ್ನು ನೋಡಲು ಅದನ್ನು ರಕ್ಷಿಸಿ ಮತ್ತು ಸಂರಕ್ಷಿಸಲು ನಾವು ಕಾರ್ಯಪ್ರವೃತರಾಗಬೇಕು. ಜೊತೆಗೆ ಯಾವ ವಸ್ತುವನ್ನು ಪುರ್ನಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬೇಡಿ ಎಂದು ಹೇಳಿದರು.
ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ವೀಣಾ ಎಸ್. ಜಲಾದೆ ಪ್ರಸ್ತಾವಿಕ ಮಾತನಾಡಿ, ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ ಸಜ್ಜನ್, ಶಿಲ್ಪಾ ಹಿಪ್ಪರಗಿ, ರಾಜಕುಮಾರ ಸಿಂಧೆ, ಡಾ. ಸಿದ್ದರಾಮ ಎಸ್. ನೆಂಗಾ, ಪಾಂಡುರಂಗ ಕುಂಬಾರ ಹಾಗೂ ಸಿಬ್ಬಂದಿ ವರ್ಗದವರಾದ ಸಂಗೀತಾ ಪಾಟೀಲ, ಸುವರ್ಣಾ ಪಾಟೀಲ, ಪುಷ್ಪಾವತಿ, ರೇವಣಪ್ಪಾ ಮತ್ತುಬಿ.ಎಡ್ ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.