
ಕಾಳಗಿ : ಜೂ.6:ವಿಶ್ವ ಪರಿಸರ ದಿನಾಚರಣೆ ಒಂದು ದಿನದ ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು, ವರ್ಷದ 365 ದಿನವೂ ಪರಿಸರದ ಪ್ರಜ್ಞೆ ಹೊಂದಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ರೈತ ಸಂಘ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಹೇಳಿದರು.
ಪ್ರಾದೇಶಿಕ ಅರಣ್ಯ ವಿಭಾಗ ಕಲಬುರ್ಗಿ ಉಪ ವಿಭಾಗ ಮತ್ತು ರೈತ ಸಂಘಟನೆ ಕಾಳಗಿ ರವರ ಸಂಯುಕ್ತ ಆಶ್ರಯದಲ್ಲಿ ರೇವಣಸಿದ್ದೇಶ್ವರ ದೇವಸ್ಥಾನದ ಆವರಣ ರೇವಗ್ಗಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.
ಪರಿಸರ ರಕ್ಷಣೆ ಕೇವಲ ಇಲಾಖೆಯ ಕೆಲಸವಲ್ಲ. ಅದು ಪ್ರತಿಯೊಬ್ಬರ ಕೆಲಸ ಮತ್ತು ಜವಾಬ್ದಾರಿ. ಶಾಲಾ ಕಾಲೇಜು ಉದ್ಯೋನ ಆವರಣ ಮತ್ತು ನಾಗರಿಕರು ತಮ್ಮ ತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಅವುಗಳನ್ನು ಸಂರಕ್ಷಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಈ ವೇಳೆಯಲ್ಲಿ ಪೂಜ್ಯ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ, ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಕಲಬುರ್ಗಿ ಸುನಿಲಕುಮಾರ ಚವ್ಹಾಣ, ಆರ್. ಎಫ್.ಓ ಚಿಂಚೋಳಿ ಜಗನ್ನಾಥ ಕೊರಳ್ಳಿ, ಗುರುಸ್ವಾಮಿ ಕಂಠಿ, ಚಂದ್ರಶೇಖರಯ್ಯ ಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ , ರುದ್ರ ಶೆಟ್ಟಿ ಗುರುಮಿಟ್ಕಲ್ ರಟಕಲ್, ವಿಶಾಲ್ ದೇವರಮನಿ, ಶಾಂತಪ್ಪಗೌಡ ರೇವಗ್ಗಿ, ಚೆನ್ನಪ್ಪ ಪಾಟೀಲ, ಸಿದ್ದರಾಮ ಪೆÇೀಲಾರ್, ಪ್ರಾಚಾರ್ಯ ಕಲಾವತಿ, ನಾಗವೇಣಿ ರಾಠೋಡ, ಚಂದ್ರಕಲಾ ಸಿಂಗೆ, ಮಂಜುನಾಥ ಮುಚ್ಚೆಟ್ಟಿ, ಕಾಶಿನಾಥ ಗೋಗಿ, ಸಾಗರ ದೊಡ್ಡಮನಿ, ಸಿದ್ದು ಗೊಣಗಿ, ಮಲ್ಲು ಅರಣಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.































