
ಬೀದರ್:ಜೂ.6: ಇಂದು ವಿಶ್ವದೆಲ್ಲೆಡೆ ಪರಿಸರ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಬೀದರ್ ನಗರದಲ್ಲಿರುವ ಪತ್ರಕರ್ತರ ದೇಗುಲವಾಗಿರುವ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪರಿಸರ ದಿನ ಆಚರಿಸಲಾಯಿತು.
ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತ ಬಾಬು ವಾಲಿ ಸಸಿ ನೆಟ್ಟು, ನೀರುಣಿಸಿ ನಂತರ ಮಾತನಾಡಿ, ಜಿಲ್ಲೆಯ ಶಾಸಕರ, ಸಂಸದರ ಅನುದಾನ ಪಡೆದು ಪತ್ರಿಕಾ ಭವನ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ, ಪತ್ರಿಕಾ ಭವನ ಮುಂಭಾಗದಲ್ಲಿ ಸುಸಜ್ಜಿತ ಕಂಪೌಂಡ್ ಗೋಡೆ ನಿರ್ಮಿಸಿ, ಅದಕ್ಕೆ ಬಲಿಷ್ಟ ಗೇಟ್ ಅಳವಡಿಸಿ ಒಳಗಡೆ ಸುಂದರ ಕೈತೋಟ ನಿರ್ಮಿಸಲಾಗುವುದೆಂದರು.
ಸಮಿತಿಯ ಮತ್ತೋರ್ವ ಉಪಾಧ್ಯಕ್ಷರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಮಾತನಾಡಿ, ಇಂದು ಅಳಿವಿನ ಅಂಚಿನಲ್ಲಿರುವ ಪರಿಸರ ಸಂರಕ್ಷಣೆ ಈ ದೇಶದ ಪ್ರತಿಯೊಬ್ಬ ಜವಾಬ್ದಾರಿ ನಾಗರಿಕರದ್ದು. ಹಾಗಾಗಿ ಪತ್ರಿಕಾ ಭವನದ ಸುತ್ತ ಮುತ್ತ ವಿವಿಧ ರೀತಿಯ ಸಸಿಗಳು ನೆಟ್ಟು ಪರಿಸರ ಸಂರಕ್ಷಣೆಗೆ ಒತ್ತು ಕೊಡೋಣವೆಂದರು.
ಸಮಿತಿಯ ಹಿರಿಯ ಸದಸ್ಯರು ಹಾಗೂ ಐ.ಎಫ್.ಡಬ್ಲು??.ಜೆ ಸದಸ್ಯ ಅಪ್ಪಾರಾವ ಸೌದಿ ಹಾಗೂ ಮಾಳಪ್ಪ ಅಡಸಾರೆ ಮಾತನಾಡಿದರು. ಸಮಿತಿಯ ಸದಸ್ಯರು ಹಾಗೂ ಕೆ.ಯು.ಡ.ಬ್ಲು??.ಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನದ ಸಿಬ್ಬಂದಿ ರಾಮಣ್ಣ ಕೊಂಡಾ, ತುಳಜಮ್ಮ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.