ಕರ್ಕಶ ಶಬ್ಧ ಮಾಡುವ ಸೌಂಡ್ ಸಿಸ್ಟಮ್‍ಗೆ ಜಿಲ್ಲೆಯೊಳಗೆ ಪ್ರವೇಶ ನಿಷಿದ್ಧ :ಎಸ್‍ಪಿ

ಬೀದರ್,ಆ.22-ಜಿಲ್ಲೆಯ ಎಲ್ಲಾ ಗಣೇಶ ಮಂಡಿಳಿಯವರು ಅತಿ ಹೆಚ್ಚು ವೆಚ್ಚÀದಲ್ಲಿ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟ್‍ಮಗಳು ಹೊರ ರಾಜ್ಯಗಳಿಂದ ಬುಕ್ ಮಾಡಿ ತರುತ್ತಿರುವುದರ ಬಗ್ಗೆ ಮಾಹಿತಿ ಇದ್ದು, ಹೊರ ರಾಜ್ಯಗಳಿಂದ ಬುಕ್ ಮಾಡಿ ತುರವ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟ್‍ಮಗಳನ್ನು ಜಿಲ್ಲೆಯ ಹೊರ ವಲಯದಲ್ಲೇ ನಿಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಣೇಶ ಮಂಡಳಿರವರು ವೃಥಾ ಖರ್ಚು ಮಾಡಿ ನಷ್ಟ ಮಾಡಿಕೊಳ್ಳಬೇಡಿ. ಗಣೇಶ ಹಬ್ಬವು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.