ಆತ್ಮಹತ್ಯೆಗೆ ಪ್ರಯತ್ನಿಸಿದ ಇಡೀ ಕುಟುಂಬ: ನಾಲ್ವರ ಸಾವು

ಭಾಲ್ಕಿ:ಸೆ.10:ತಾಲ್ಲೂಕಿನ ಮರೂರ ಗ್ರಾಮದ ದರ್ಗಾ ಮೀಪದ ಕಾರಂಜಾ ಕಾಲುವೆಗೆ ಮಂಗಳವಾರ ಇಡೀ ಕುಟುಂಬವೇ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಈ ದುರ್ಘಟನೆಯಲ್ಲಿ ಬೀದರ್ ನ ಮೈಲೂರಿನವರಾದ ಶಿವಮೂರ್ತಿ ಮಾರುತಿ ಬ್ಯಾನರ್ಜಿ (45) ಮೂವರು ಮಕ್ಕಳಾದ ಶ್ರೀಶಾಂತ (9), ರಿತಿಕ್ (7), ಏಳು ತಿಂಗಳು ಮಗುವಾದ ರಾಕೇಶ ಮೃತಪಟ್ಟಿದ್ದಾರೆ.

ಅದೃಷ್ಟವಶಾತ್ ಮೃತನ ಹೆಂಡತಿ ರಮಾಬಾಯಿ, ಮಗ ಶ್ರೀಕಾಂತ ಬದುಕುಳಿದಿದ್ದಾರೆ.

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದೇವೆ ಎಂದು ಮೃತನ ಹೆಂಡತಿ ತಿಳಿಸಿದ್ದಾಳೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಈ ಸಂಬಂಧ ಧನ್ನೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.