ಹಸಿ ಬರದಿಂದ ಸಂಪೂರ್ಣ ಬೆಳೆ ನಾಶ:ನಡಹಳ್ಳಿ

ತಾಳಿಕೋಟೆ:ಅ.೧೫: ಸತತ ಮಳೆಯಿಂದ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ, ಒಳಗೊಂಡು ಇನ್ನಿತರ ಎಲ್ಲ ಬೆಳೆಗಳು ನೀರಿನಲ್ಲಿ ನಾಶವಾಗಿ ಹೋಗಿದ್ದರೂ ಕೂಡಾ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಜಂಟಿ ಸಮಿಕ್ಷೆಯ ನೆಪದ ಮೇಲೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಇಳಿದಿದ್ದಾರೆಂದು ಬಿಜೆಪಿ ರೈತಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಆರೋಪಿಸಿದರು.
ತಾಲೂಕಿನ ಮೂಕೀಹಾಳ, ಬಾವೂರ, ಕೊಣ್ಣೂರ ಮತ್ತು ತಮ್ಮದಡ್ಡಿ ಗ್ರಾಮದ ಜಮೀನುಗಳಿಗೆ ಬೆಟ್ಟಿ ನೀಡಿ ಬೆಳೆಗಳನ್ನು ವಿಕ್ಷೀಸಿ ನಂತರ ತಮದಡ್ಡಿ ಗ್ರಾಮದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಮುದ್ದೇಬಿಹಾಳ ತಾಲೂಕಿನಲ್ಲಿ ರೈತರ ಕಷ್ಟಗಳನ್ನು ಕೇಳಲಿಕ್ಕೆ ಸ್ಥಳೀಯ ಶಾಸಕರು ಹೋಗದಿರುವದು ದುರದೃಷ್ಠಕರವಾಗಿದೆ ನಾನು ರೈತರ ವಿಷಯದಲ್ಲಿ ರಾಜಕಾರಣ ಮಾಡಲು ಎಂದೂ ಹೋಗುವದಿಲ್ಲಾ ಸತತ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು ಕಣ್ಣಿಗೆ ಕಾಣುತ್ತಿದ್ದರೂ ಕೂಡಾ ಶಾಸಕ ನಾಡಗೌಡರು ಅಧಿಕಾರಿಗಳಿಂದ ಜಂಟಿ ಸಮಿಕ್ಷೆ ನಡೆಯುತ್ತಿದೆ ವರಧಿ ಬಂದ ಬಳಿಕ ಸರ್ಕಾರದ ನಿಯಮದ ಪ್ರಕಾರ ಪರಿಹಾರ ರೈತರಿಗೆ ಸಿಗುತ್ತದೆ ಎಂದು ಹೇಳುತ್ತಾ ಸಾಗಿದ್ದಾರೆ ಯಾವ ಅಧಿಕಾರಿಗಳಿಗೂ ರೈತರ ಎಲ್ಲ ಜಮೀನುಗಳಿಗೆ ಬೆಟ್ಟಿ ನೀಡಿ ಸಮಿಕ್ಷೆ ಮಾಡಲು ಆಗುವದಿಲ್ಲಾ ಇದು ಶಾಸಕರ ಗಮನದಲ್ಲಿ ಮೊದಲು ಇರಬೇಕು ಅಧಿಕಾರಿಗಳು ಯಾವ ರೀತಿ ಸಮಿಕ್ಷೆ ಮಾಡಿದ್ದಾರೆಂದರೆ ಪಂಚಾಯ್ತಿ ವ್ಯಾಪ್ತಿಯ ಒಂದೆರಡು ರೈತರ ಜಮೀನುಗಳಿಗೆ ಬೆಟ್ಟಿ ನೀಡಿ ಜಿಪಿಎಸ್ ಮಾದರಿ ಮಾಡಿ ಆಯ್ದ ರೈತರ ಜಮೀನುಗಳಲ್ಲಿ ೧ ಗುಂಟೆ, ೨ ಗುಂಟೆ ಬೆಳೆ ನಾಶವಾಗಿದೆ ಎಂದು ಲಿಸ್ಟಗಳನ್ನು ತಯಾರಿಸಿ ಆಯಾ ಗ್ರಾಂಪA ಕಚೇರಿಯ ಮುಂದೆ ಹಚ್ಚುತ್ತಾ ಸಾಗಿದ್ದಾರೆ ಯಾಕೆಂದರೆ ರೈತರ ಎಲ್ಲ ಜಮೀನುಗಳಿಗೆ ಬೆಟ್ಟಿ ನೀಡಲು ಕಂದಾಯ ಅಧಿಕಾರಿಗಳಿಗೆ ಮತ್ತು ಕೃಷಿ ಅಧಿಕಾರಿಗಳಿಗೆ ಆಗುತ್ತಿಲ್ಲಾ ಇಡೀ ಬೆಳೆಯನ್ನು ವಿಕ್ಷೀಸಲು ಜಮೀನುಗಳಿಗೆ ಹೋದರೆ ಅಧಿಕಾರಿಗಳಿಗೆ ಜಮೀನುಗಳಲ್ಲಿ ತುರುಗಾಡಲು ಬರದ ರೀತಿಯಲ್ಲಿ ಹಸಿ ಬರ ಬಿದ್ದಿದೆ ಜಮೀನಿನಲ್ಲಿ ಕಾಲಿಟ್ಟರೆ ಕಾಲುಗಳೇ ಸಿಲುಕಿಕೊಳ್ಳುತ್ತಿವೆ ಆ ರೀತಿಯಾದ ಹಸಿ ಬರ ಇನ್ನೂ ಇದೆ ಹೀಗಿರುವಾಗ ಜಂಟಿ ಸಮಿಕ್ಷೆ ಮಾಡಲು ಹೇಗೆ ಸಾದ್ಯ ತೊಗರಿ ಹತ್ತಿ ಬೆಳೆಗಳು ನೀರಿನಲ್ಲಿ ಕೆಂಪರೋಗದಿAದ ಒಣಗುತ್ತಿವೆ ಇನ್ನೂ ಜಮೀನುಗಳಲ್ಲಿ ಹಸಿಯೂ ಕೂಡಾ ಹಾಗೆ ಇದೆ ತೊಗರಿ ಗಿಡಗಳು ಹತ್ತಿ ಗಿಡಗಳು ಹೂವು ಬಿಡುತ್ತಿಲ್ಲಾ ಹತ್ತಿ ಗಿಡಗಳಲ್ಲಿಯ ಕಾಯಿಗಳು ಒಡೆಯುತ್ತಿಲ್ಲಾ ಹತ್ತಿಗಿಡಗಳು ತಾಮ್ರರೋಗಕ್ಕೆ ತುತ್ತಾಗಿ ಒಣಗುತ್ತಾ ಸಾಗಿದ್ದರೂ ಶಾಸಕ ನಾಡಗೌಡರು ಇನ್ನೂ ದೀಪಾವಳಿ ವರೆಗೂ ಮಳೆ ಇದೆ ಸಮಿಕ್ಷೆ ನಡೆಯುತ್ತಿದೆ ಅಲ್ಲಿಯವರೆಗೂ ನೋಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ನಾನು ಈಗಾಗಲೇ ಮತಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿಯ ರೈತರ ಜಮೀನುಗಳಿಗೆ ಬೆಟ್ಟಿ ನೀಡುತ್ತಾ ಸಾಗಿದ್ದೇನೆ ಎಲ್ಲಿ ನೋಡಿದರೂ ಹಸಿ ಬರದಿಂದ ಬೆಳೆ ನಾಶವಾಗಿರುವದು ಕಣ್ಣಿಗೆ ಕಾಣುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚೀವ ಎಂ.ಬಿ.ಪಾಟೀಲರು ವೈಮಾನಿಕ ಸಮಿಕ್ಷೆ ಮಾಡಿದ್ದಾರೆ ಕೆಳಗಡೆ ಇರುವ ಹಸಿ ಬರ ಅವರಿಗೆ ಕಾಣಲು ಹೇಗೆ ಸಾದ್ಯವೆಂದು ಪ್ರಶ್ನೀಸಿದ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯವರೇ ಇದ್ದಾರೆ ರೈತರ ಸಂಕಷ್ಟದ ಬಗ್ಗೆ ಅರೀತುಕೊಂಡು ಸಂಪೂರ್ಣ ಬೆಳೆ ನಾಶವಾಗಿದ್ದರ ಬಗ್ಗೆ ಘೋಷಿಸಬೇಕು ಇದರಿಂದ ರೈತರ ಬಧುಕಿಗೆ ಅರ್ಥ ಸಿಕ್ಕಂತಾಗುತ್ತದೆ ಎಂದ ಅವರು ರೈತರು ಈಗಾಗಲೇ ಕೆಲವೆಡೆ ತೊಗರೆ ಬೆಳೆಯನ್ನು ಹರಗಿ ಸ್ವಚ್ಚಗೊಳಿಸುತ್ತಿದ್ದಾರೆ ಇದ್ದನ್ನಾದರೂ ನೋಡಿ ಶಾಸಕ ನಾಡಗೌಡರು ನೋಡಿ ಸರ್ಕಾರಕ್ಕೆ ಸ್ಪಷ್ಟವಾದ ಸಂಪೂರ್ಣ ಬೆಳೆ ನಾಶದ ಬಗ್ಗೆ ವರಧಿ ಕಳುಹಿಸುವಂತಹ ಕೆಲಸ ಅಧಿಕಾರಿಗಳಿಂದ ಮಾಡಿಸಬೇಕು ಮತಕ್ಷೇತ್ರದ ಯಾವುದೋ ಒಂದು ಹೊಲದಲ್ಲಿ ನಿಂತು ಪೋಜುಕೊಟ್ಟು ಹೋಗುವ ಕಾರ್ಯವನ್ನು ಶಾಸಕರು ಬಿಡಬೇಕೆಂದ ಅವರು ನಾನು ಶಾಸಕನಾಗಿದ್ದ ಅವಧಿಯಲ್ಲಿ ಡೋಣಿ ನಧಿಗೆ ಹೊಂದಿಕೊAಡಿರುವ ಎಲ್ಲ ರೈತರಿಗೆ ಪ್ರವಾಹದ ಸಮಯದಲ್ಲಿ ಸರ್ಕಾರದಿಂದ ಪರಿಹಾರವನ್ನು ಕೊಡಿಸಿದ್ದೇನೆ ನಾನು ಈ ರೈತರ ವಿಷಯದಲ್ಲಿ ರಾಜಕಾರಣ ಮಾಡಲು ಹೋಗುವದಿಲ್ಲಾ ನಿಜವಾಗಿ ರೈತರ ಪರ ಕಾಳಜಿ ಎಂಬುದು ಇದ್ದರೆ ಜಿಲ್ಲೆಯ ಎಲ್ಲ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಶಾಸಕರು ಮಾಡಲಿ ಎಂದರು.

ಈ ಸಮಯದಲ್ಲಿ ಮುಖಂಡರಾದ ಸೋಮನಗೌಡ ಕವಡಿಮಟ್ಟಿ, ಬಿಜೆಪಿ ರೈತಮುರ್ಚಾ ಮಂಡಲ ಅಧ್ಯಕ್ಷ ಸಂಗಣ್ಣ ಹತ್ತಿ, ಗಿರಿಶ ಪಾಟೀಲ, ಒಳಗೊಂಡು ರೈತಾಪಿ ಜನರು ಉಪಸ್ಥಿತರಿದ್ದರು.

ರೈತರು ಬಿತ್ತನೆ ಮಾಡಿದ ತೊಗರಿ ಮತ್ತು ಹತ್ತಿ ಅಲ್ಲದೇ ಉಳ್ಳಾಗಡ್ಡಿ ಒಳಗೊಂಡು ಎಲ್ಲ ಬೆಳೆಗಳು ಸತತ ಮಳೆಗೆ ತುತ್ತಾಗಿ ಹಸಿ ಬರದಿಂದ ಎಲ್ಲ ರೈತರ ಬೆಳೆಗಳು ಒಣಗುತ್ತಾ ಸಾಗಿವೆ ಹಾನಿಗೀಡಾದ ರೈತರ ಲಿಸ್ಟಗಳನ್ನು ಹಚ್ಚಿದ್ದೆವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಅದರಲ್ಲಿ ಗುಂಟೆ ಲೆಕ್ಕದಲ್ಲಿ ಹಾನಿ ಎಂದು ತೊರಿಸಿದ್ದಾರೆ ಇದರಿಂದ ಸಂಪೂರ್ಣ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಮುಟ್ಟಲು ಹೆಗೆ ಸಾದ್ಯ ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದೇವೆ ಈಗ ಬೆಳೆಯೂ ಇಲ್ಲಾ ಪರಿಹಾರವು ಇಲ್ಲದಂತಾಗಿದೆ ಬೆಳೆ ನಾಶವೆಂದು ಘೋಷಣೆ ಮಾಡಿದರೆ ಕನಿಷ್ಠ ಇನ್ಸೂರೇನ್ಸ್ ಆದರೂ ಬರುತ್ತಿತ್ತು ಅದು ಸಹ ಸಿಗದಂತೆ ಅಧಿಕಾರಿಗಳು ಸಮಿಕ್ಷೆ ಮಾಡಿದ್ದಾರೆಂದು ರೈತ ಬಸನಗೌಡ ತಮದಡ್ಡಿ ಅವರು ತಮ್ಮ ಅಳಲನ್ನು ತೋಡಿಕೊಂಡರು.

ಈಗಾಗಲೇ ಮುದ್ದೇಹಾಳ ಮತಕ್ಷೇತ್ರದ ಪ್ರತಿ ರೈತರ ಜಮೀನುಗಳಿಗೆ ಬೆಟ್ಟಿ ನೀಡಿ ಹಾನಿಯಾದ ಬೆಳೆಗಳನ್ನು ವಿಕ್ಷಣೆ ಮಾಡಿದ್ದೇನೆ ಹಸಿಬರಕ್ಕೆ ತುತ್ತಾದ ತೋಗರಿ, ಹತ್ತಿ, ಉಳ್ಳಾಗಡ್ಡಿ ಒಳಗೊಂಡು ಪ್ರತಿ ಹಂತದ ತೋಟಗಾರಿಕ ಬೆಳೆಗಳು ಸಹ ಒಣಗುತ್ತಾ ಸಾಗಿವೆ ಈ ರೈತರ ವಿಷಯದಲ್ಲಿ ಶಾಸಕ ನಾಡಗೌಡರು ರಾಜಕಾರಣ ಮಾಡದೇ ಸಂಪೂರ್ಣ ಬೆಳೆ ನಾಶವಾಗಿದ್ದರ ಬಗ್ಗೆ ವರದಿ ಕಳಿಸಲು ಅದಿಕಾರಿಗಳಿಗೆ ಸೂಚಿಸಬೇಕು.
ಎ.ಎಸ್.ಪಾಟೀಲ ನಡಹಳ್ಳಿ
ಬಿಜೆಪಿ ರೈತ ಮುರ್ಚಾ ರಾಜ್ಯಾದ್ಯಕ್ಷರು.