ಜಾತಿವಾರು ಸಮೀಕ್ಷೆಯಲ್ಲಿ ಒಕ್ಕಲಿಗರೆಂದು ನಮೂದಿಸಿ

ಮುಳಬಾಗಿಲು.ಸೆ,೨೧-ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿವಾರು ಸಮೀಕ್ಷೆಯಲ್ಲಿ ಒಕ್ಕಲುತನ ಮಾಡುವ ಒಕ್ಕಲಿಗರು ತಪ್ಪದೆ ಒಕ್ಕಲಿಗರು ಎಂದು ಬರಸಬೇಕೆಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲಂಗೂರ್ ಶಿವಶಂಕರ್ ಕರೆ ನೀಡಿದರು.


ನಗರದ ಒಕ್ಕಲಿಗರ ಭವನದಲ್ಲಿ ಸಮುದಾಯದ ಸಭೆಯಲ್ಲಿ ಮಾತನಾಡಿ, ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲೂ ಸಮುದಾಯ ಮುಂದುವರೆಯಬೇಕಾದರೆ ಸತ್ಯಾಂಶವನ್ನು ಸಮೀಕ್ಷೆಯಲ್ಲಿ ಬಳಸಬೇಕು ಜೊತೆಗೆ ಯಾವುದೇ ಉಪಜಾತಿಗಳನ್ನು ನಮೂದಿಸದೆ ಒಕ್ಕಲಿಗರು ಎಂದೇ ನಮೂದಿಸಬೇಕೆಂದು ಕಿವಿಮಾತು ಹೇಳಿದರು.


ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಮುದಾಯದವರು ಸೋಲತ್ತುಗಳನ್ನು ಪಡೆದುಕೊಳ್ಳಲು ಜಾತಿ ಸಮೀಕ್ಷೆ ಬಹು ಮುಖ್ಯ ಪಾತ್ರ ವಹಿಸುತ್ತದೆ ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗರು ಎಂದು ಬರೆಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದೆಂದು ತಿಳಿಸಿದರು. ಒಕ್ಕಲಿಗರ ಸಂಘದ ಕಾರ್ಯದರ್ಶಿ ವಕೀಲ ಬಿ ನಾಗರಾಜ್, ಉತ್ತನೂರು ಶ್ರೀನಿವಾಸ್, ಮುಖಂಡರಾದ ಆರ್ ಆರ್ ರಾಜೇಂದ್ರ ಗೌಡ, ಡಾಕ್ಟರ್ ದೊಡ್ಡಪತ್ರೆಗೌಡ, ಗೊಲ್ಲಹಳ್ಳಿ ಪ್ರಭಾಕರ್, ಗೊನ್ನಹಳ್ಳಿ ಜಗದೀಶ್, ಶಂಕರ್, ತಾವರೆಕೆರೆ ನಾರಾಯಣ ರೆಡ್ಡಿ, ಎಂ ಗೋಪಾಲ್, ಶಿವರಾಜ್, ಸಿದ್ದಘಟ್ಟ ಮುನಿಸ್ವಾಮಿಗೌಡ, ತ್ರಿವೇಣಮ್ಮ, ವರದಪ್ಪ, ಸರ್ವಜ್ಞ ಗೌಡ, ಸಿ.ವಿ.ಶ್ರೀನಾಥ್ ಇದ್ದರು.