
ಬೀದರ್:ನ .26:ನಮ್ಮಲ್ಲಿ “ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವುದರಿಂದ ಕನ್ನಡ ಭಾಷೆಗೆ ಕುತ್ತು ಬರುತ್ತಿದೆ”, ಇದಕ್ಕೆ ತಾಜಾ ನಿದರ್ಶನ ರಾಜ್ಯದಲ್ಲಿ ಏಳು ಸಾವಿರ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರ ಹೇಳಿದರು.
ಅವರು ರವಿವಾರ ಸಂಗೊಳಗಿ ಗ್ರಾಮದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಗೊಳಗಿ ಗ್ರಾಮ ಘಟಕದ ವತಿಯಿಂದ ಆಯೋಜಿಸಿದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಹಾಗೂ ಶ್ರೀಮಂತ ಭಾಷೆ. ನಾವೆಲ್ಲರೂ ಆಂಗ್ಲ ಭಾಷೆಯ ವ್ಯಾಮೋಹ ಬಿಡಬೇಕು. ಬೇರೆ ರಾಜ್ಯದವರಂತೆ ತಮ್ಮ ತಾಯ್ನಾಡಿನ ಭಾಷೆಯನ್ನು ಪ್ರೀತಿಸಬೇಕು ಎಂದರು.
ಕನ್ನಡಸೇನೆ ರಾಜ್ಯ ಉಪಾಧ್ಯಕ್ಷ ಡಾ, ರವಿಸ್ವಾಮಿ ನಿರ್ಣಾ ಮಾತನಾಡಿ, ಕನ್ನಡ ಸೇನೆ ಕರ್ನಾಟಕ ಯಾವುದೇ ರಾಜಕೀಯ, ಧರ್ಮ ಅಥವಾ ಜಾತಿಗೆ ಸೀಮಿತವಾದ ಸಂಘಟನೆಯಲ್ಲ, ಇದು ಕನ್ನಡಗರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಂಘಟನೆ. ಮುಂದಿನ ದಿನಗಳಲ್ಲಿ ಸಂಗೊಳಗಿ ಗ್ರಾಮ ಘಟಕ ಸಹ ಕನ್ನಡಡಿಗರಿಗಾಗಿ ಸೇವೆ ಮಾಡಲಿದೆ. ಈಗಾಗಲೇ ನಮ್ಮ ಸಂಘಟನೆ 40 ವರ್ಷ ಪೂರೈಸಿದೆ ಬೀದರ ಜಿಲ್ಲೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಹೊಂದಿದೆ ಎಂದರು.
ಗ್ರಾಮಸ್ಥ ಚಂದ್ರಶೇಖರ ಚನ್ನಶೇಟ್ಟಿ ಮಾತನಾಡಿ, ಕನ್ನಡ ಅಭಿಮಾನಿದಿಂದ ಕನ್ನಡ ಸೇನೆ ಕರ್ನಾಟಕ ಸಂಗೊಳಗಿ ಗ್ರಾಮ ಘಟಕ ಸ್ಥಾಪನೆ ಮಾಡಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯ, ಇವರಿಂದ ಇನ್ನು ಹೆಚ್ಚಿನ ಕನ್ನಡದ ಕಂಪು ಪಸರಿಸುವಂತಾಗಲಿ ಎಂದರು.
ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿ ಮಾತನಾಡಿದ ಶ್ರೀ ನಾಗಲಿಂಗ ಮುತ್ಯಾ ಕಾಡಾಪೂರ ಮಠ,
ಶ್ರೀ ಶರಣಯ್ಯಾ ಮುತ್ಯಾ ಗಣೇಶ್ವರ ಕಮಲಮರ ಸಂಗೋಳಗಿ, ಶ್ರೀ ದೇವಾನಂದ ಸ್ವಾಮಿ ಕಮರಿಮಠ ರುದನೂರ, ರವರು ನಮ್ಮ ನಾಡು ದಾಸ ಸಾಹಿತ್ಯ, ವಚನ ಸಾಹಿತ್ಯ, ಸಂತರು ಶರಣರು, ಮಹಾಪುರುಷರು, ವೀರವನಿತೆಯರು, ಋಷಿಮುನಿಗಳು ಹುಟ್ಟಿ ನಡೆದಾಡಿದ ಶ್ರೇಷ್ಠ ನೆಲ. ಅನೇಕ ಜನರ ಹೋರಾಟದ ಫಲವಾಗಿ ಕನ್ನಡ ನಾಡು ಒಂದಾಗಿದೆ. ಆದ್ದರಿಂದ ಎಲ್ಲರೂ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಬೇಕು, ಕನ್ನಡವನ್ನು ಉಳಿಸಿ ಬೆಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ ಕೆನಡೆ, ರಾಜಶೇಖರ್ ಮಂಗಲಪೇಟ, ಕನ್ನಡ ಸೇನೆ ಕರ್ನಾಟಕ ಸಂಗೋಳಗಿ ಗ್ರಾಮ ಘಟಕ ಅಧ್ಯಕ್ಷ ಲಕ್ಷ್ಮಣ ಅಲ್ಲೂರೆ, ನಾಗಶೆಟ್ಟಿ ಸಜ್ಜನಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಹಿಂದಾ,ಗ್ರಾಮದ ಮುಖಂಡರಾದ ಚಂದ್ರಶೇಖರ ಚನ್ನಶೆಟ್ಟಿ,ಅನಿಲಕುಮಾರ ಮಾಲಿಪಾಟೀಲ,ಚಂದ್ರಶೇಖರ ಪೆÇಲೀಸ್ ಪಾಟೀಲ, ಚಂದ್ರಕಾಂತ್ ಜಮಾದಾರ, ವಿಜಯ ಕುಮಾರ ಮಂಡಗಿ, ಪಿಎ??? ಕಲ್ಲಪ್ಪಾ, ಸತೀಶಕುಮಾರ್ ತುಪ್ಪದ್, ಅನೇಕ ಗ್ರಾಮಸ್ಥರು ಕನ್ನಡ ಸೇನೆ ಕರ್ನಾಟಕ ಪದಾಧಿಕಾರಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಚಂದ್ರಕಾಂತ ಹಳ್ಳಿಖೇಡಕರ್ ನಿರೂಪಿಸಿದರು, ರವಿಸ್ವಾಮಿ ನಿರ್ಣ ಸ್ವಾಗತಿಸಿ, ವಂದಿಸಿದರು.

























