
ಜಮಖಂಡಿ:ಡಿ.26:ಮಕ್ಕಳನ್ನು ಕೇವಲ ಪಠ್ಯಕ್ಕೆ
ಸೀಮಿತ ಗೊಳಿಸದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು
ಪಾಲಕರು ಪೆÇ್ರೀತ್ಸಾಹಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ
ಹೇಳಿದರು.
ನಗರದ ಬಸವ ಭವನದಲ್ಲಿ ಗುರುವಾರ ಸಂಜೆ
ನೂಪುರ ನೃತ್ಯ ವಿದ್ಯಾಮಂದಿರದ ನೃತ್ಯ ವೈಭವ ಹಾಗೂ ಪ್ರತಿಭಾ
ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಕ್ಕಳನ್ನು
ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತ ಗೊಳಿಸದೇ ಶಾಸ್ತ್ರಿಯ
ಸಂಗೀತ, ನೃತ್ಯ, ಭಾರತೀಯ ಕಲಾಪ್ರಕಾರಗಳನ್ನು ಕಲಿಯಲು
ಪೆÇ್ರೀತ್ಸಾಹಿಸಬೇಕು ಇದರಿಂದ ದೇಶದ ಸಂಸ್ಕøತಿಯನ್ನು ಉಳಿಸಿ
ಬೆಳೆಸಿದಂತಾಗುತ್ತದೆ ಎಂದು ಹೇಳಿದರು. ಮಕ್ಕಳಿಗೆ ದೈಹಿಕ ಮಾನಸಿಕ ಬೆಳವಣಿಗೆಗೆ ನೃತ್ಯ ಪೂರಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಾಂಶುಪಾಲೆ. ಡಾ. ಸುನಂದಾ ಎಸ್.ಶಿರೂರ್ ಮಾತನಾಡಿ, ಮೊಬೈಲ್ ಗೀಳಿಂದಾಗಿ
ಮಕ್ಕಳು ಚಟುವಟಿಕೆ ರಹಿತರಾಗಿದ್ದಾರೆ. ಸಂಗೀತ ನೃತ್ಯದಲ್ಲಿ ಪಾಲ್ಗೊಳ್ಳುವ ಮಕ್ಕಳು ಮಾನಸಿಕ, ದೈಹಿಕವಾಗಿ
ಸದೃಢರಾಗುತ್ತಾರೆ. ನೃತ್ಯದ ಭಂಗಿಗಳು ಯೋಗಸಾಧನ ವಿದ್ದಂತೆ, ಇದರಿಂದ ಮಾನಸಿಕ ಬಲ ದೊರೆಯುತ್ತದೆ ಎಂದು ಹೇಳಿದರು.
ಮಕ್ಕಳ ಕ್ರಿಯಾಶೀಲತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಂದು ತಿಳಿಸಿದರು.
ಡಾ.ಲಕ್ಷ್ಮೀ ತುಂಗಳ ಮಾತನಾಡಿ ನೃತ್ಯ ಸಂಗೀತ ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತ ಗೊಳಿಸುವ ಮಾಧ್ಯಮವಾಗಿದೆ. ದೇಶದ ಸನಾತನ ಸಂಸ್ಕೃತಿಯಾಗಿರುವ ಪುರಾತನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಶಾಸ್ತ್ರಿಯ ಕಲೆಗಳು ತಪಸ್ಸು ಇದ್ದಂತೆ ಇದರಿಂದ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಸಾಂಸ್ಕೃತಿಕ ಅಭಿವೃದ್ಧಿಯಾಗುತ್ತದೆ ಇದಕ್ಕಿಂತ
ಮಿಗಿಲಾದ ಕಲಾ ಪ್ರಸಂಗಳಿಲ್ಲ ಎಂದು ತಿಳಿಸಿದರು.
ಡಾ. ಎಚ್.ಜಿ.ದಡ್ಡಿ ಮಾತನಾಡಿ ಪಾಲಕರು ಮಕ್ಕಳಿಗೆ ಸಂಸ್ಕಾರ
ಕೊಡಬೇಕು, ಯಾವ ವಸತಿ ಶಾಲೆಗಳು ಸಂಸ್ಕಾರವನ್ನು
ಕಲಿಸುವದಿಲ್ಲ ಎಂದು ಹೇಳಿದರು. ಮನೆಯಲ್ಲಿ ಪಾಲಕರು ಸಂಸ್ಕಾರವಂತರಾಗಿ ಮಕ್ಕಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಗೋವಿಂದ ಪಿ.ಭಂಗ
ಮಾತನಾಡಿದರು.
ಡಾ.ಜಿ.ಎನ್ ಸನದಿ, ಉಪನ್ಯಾಸಕ ಎಸ್.ಎಂ.ಕುಂಬಾರ, ಕಲಾವಿದ ಜಗನ್ನಾಥ ದೇಸಾಯಿ,, ನೂಪುರ ನೃತ್ಯ ವಿದ್ಯಾ ಮಂದಿರದ ನಿರ್ದೇಶಕಿ ವಿದುಷಿ ಜಯೇಶ್ವರಿ.ಎಂ. ನಾಯಕ ವೇದಿಕೆಯಲ್ಲಿದ್ದರು.
ನೃತ್ಯಕಲೆಯಲ್ಲಿ ಸಾಧನೆಗೈದು ವಿದ್ವತ್ ಪೂರ್ಣ ಗೊಳಿಸಿದ ಶಿವಾನಿ
ಕುಂಚನೂರ ಹಾಗೂ ನೃತ್ಯಕಲಾ ವಿದ್ಯಾರ್ಥಿಗಳಾದ ರಂಜಿತಾ ಪಟ್ಟಣಶೆಟ್ಟಿ, ಸಂಜನಾ ವಾಲಿ, ವಿಜಯಲಕ್ಷ್ಮಿ ಮೇತ್ರಿ,
ಛಾಯಾ ಹಿಕಡಿ, ಮೇಘನಾ ಬೆಳಗಲಿ, ಗೀತಾಂಜಲಿ ಓದಿಕಾರ, ಅಮೂಲ್ಯಾ ಕಾಂಬ್ಳೆ, ಮೇಘಾ ಪತ್ತಾರ, ಸಹನಾ ಗುರವ,
ಸುವರ್ಣಾ ಜಿರಲಿ, ಸುಧಿಕ್ಷಾ ಜಕಾತಿ, ವಿಶ್ವಶ್ರೀ ಕಂಬಾರ, ಕಾವ್ಯಾಂಜಲಿ ಭಾಕಸಕೇಡೆ, ನವ್ಯಾ ಬಸವನಾಳ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು,
ಹಾಡುಗಾರಿಕೆ ಸಾಗರದ ವಿದ್ವಾನ ಅಶೋಕ ಹೆಗ್ಗೊಡು, ಹೊನ್ನಾವರದ
ವಿದ್ವಾನ ಪದ್ಮರಾಜ ಭಟ್ಟ ಮೃದಂಗ, ಧಾರವಾಡದ ವಿದ್ವಾನ ಶಂಕರ ಕಬಾಡಿ ವೈಲಿನ್, ಧಾರವಾಡದ ವೈಭವ ಭಟ್ಟ್
ಕೊಳಲಿನಲ್ಲಿ ಸಾಥ ನೀಡಿದರು. ಶ್ರೀನಿವಾಸ ಕಟ್ಟಿಮನಿ, ರತ್ನಾ ಅಮೀತ ಸೇಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






















