ನವದೆಹಲಿ,ಅ.೨೩- ಬಿಹಾರದಲ್ಲಿ ನಡೆದ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಕುಖ್ಯಾತ ದರೋಡೆಕೋರರನ್ನು ದೆಹಲಿಯ ರೋಹಿಣಿಯಲ್ಲಿ ದೆಹಲಿ ಹಾಗೂ ಬಿಹಾರ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬಿಹಾರ ವಿಧಾಸಭೆಯ ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿರುವಾಗ ಈ ಘಟನೆ ನಡೆದಿದೆ.
ಹತ್ಯೆಗೀಡಾದ ದರೋಡೆಕೋರರನ್ನು ರಂಜನ್ ಪಾಠಕ್, ವಿಮ್ಲೇಶ್ ಮಹ್ತೊ, ಮನೀಶ್ ಪಾಠಕ್ ಮತ್ತು ಅಮನ್ ಠಾಕೂರ್ ಎಂದು ಗುರುತಿಸಲಾಗಿದೆ. ಎಲ್ಲರೂ ಬಿಹಾರದ ನಿವಾಸಿಗಳಾಗಿದ್ದು ಇವರ ಮೇಲೆ ಕೊಲೆಗಳು, ಸುಲಿಗೆ ಸೇರಿದಂತೆ ಘೋರ ಅಪರಾಧಗಳಿಗೆ ಬೇಕಾಗಿದ್ದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಖ್ಯಾತ ಕ್ರಿಮಿನಲ್‌ಗಳು ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದೆಹಲಿ ಮತ್ತು ಬಿಹಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಈ ಎನ್‌ಕೌಂಟರ್ ನಡೆದಿದ್ದು, ದೆಹಲಿ ಮತ್ತು ಬಿಹಾರ ಪೊಲೀಸರ ಜಂಟಿ ತಂಡ ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿತ್ತು. ಹಲವಾರು ದಿನಗಳಿಂದ ದೆಹಲಿಯಲ್ಲಿ ಅಡಗಿಕೊಂಡಿದ್ದ ಆಧರಿಸಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿಗಳು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು ಎಂದು ಹೇಳಲಾಗಿದ್ದು, ಪ್ರತೀಕಾರದ ಕ್ರಮವಾಗಿ ನಾಲ್ವರು ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ತೀವ್ರವಾಗಿ ಗಾಯಗೊಂಡ ನಾಲ್ವರು ಆರೋಪಿಗಳನ್ನು ದೆಹಲಿಯ ರೋಹಿಣಿಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಗ್ಯಾಂಗ್‌ನ ಕಿಂಗ್‌ಪಿನ್ ರಂಜನ್ ಪಾಠಕ್ ಬಿಹಾರ ಮತ್ತು ಪಕ್ಕದ ರಾಜ್ಯಗಳ ಕೆಲವು ಭಾಗಗಳಲ್ಲಿ ಸಂಘಟಿತ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- ಬಿಹಾರ ವಿಧಾನಸಭೆಗೆ ಕೆಲವೆ ದಿನಗಳು ಬಾಕಿ ಹಿನ್ನೆಲೆ
- ಕೊಲೆ ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರ ಏನ್ ಕೌಂಟರ್
- ದೆಹಲಿ ಮತ್ತು ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏನ್ ಕೌಂಟರ್
- ಮೃತರನ್ನು ರಂಜನ್ ಪಾಠಕ್, ವಿಮ್ಲೇಶ್ ಮಹ್ತೊ, ಮನೀಶ್ ಪಾಠಕ್ ಮತ್ತು ಅಮನ್ ಠಾಕೂರ್ ಗುರುತು ಪತ್ತೆ
- ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ತಲೆ ಮರೆಸಿಕೊಂಡ ಖಚಿತ ಮಾಹಿತಿ ಆಧರಿಸಿ ದಾಳಿ
- ದಾಳಿಯ ಮೇಲೆ ಪೊಲೀಸರು ಮೇಲೆ ಗುಂಡಿನ ದಾಳಿ
- ಪೊಲೀಸರಿಂದಲೂ ಪ್ರತಿಯಾಗಿ ಗುಂಡಿನ ದಾಳಿ
- ತೀವ್ರಗಾಯಗೊಂಡಿದದ್ ನಾಲ್ವರನ್ನು ರೋಹಿಣಿ ಆಸ್ಪತ್ರೆಗೆ ದಾಖಲು
- ಚಿಕಿತ್ಸೆ ಫಲಕಾರಿಯಾಗದೆ ದರೋಡೆಕೋರರ ಸಾವು
























