
ಕಲಬುರಗಿ ;ಡಿ.24: ಧರ್ಮದ ಕಾರಣಕ್ಕೆ ಬೇರೆಯವನ್ನು ಕೊಂದವರು ಜಿಹಾದಿಗಳು ಜಾತಿಯ ಕಾರಣಕ್ಕೆ ಮಗಳನ್ನೇ ಕೊಂದವರು ನೀವ್ಯಾರು? ಮನುಷ್ಯತ್ವ ಇಲ್ಲದ ಮೃಗಗಳನ್ನು ಸೃಷ್ಟಿಸುವ ಧರ್ಮ, ದೇವರುಗಳು ಎಷ್ಟಿದರೇನು? ಭಾರತದ ಮೇಲೆ ಮನುಸ್ಮೃತಿ ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಜನರನ್ನು ಮರ್ಯಾದೆಗೇಡು ಅಂತಹ ಕೌರ್ಯಕ್ಕೆ ಸಿದ್ದಗೊಳಿಸುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟಿಸಲು ಮತ್ತು ಜಾತಿ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ಹತ್ಯೆ ದಾಳಿಗಳನ್ನು ತಡೆಯಲು ಪರಿಶಿಷ್ಟರ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಲು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಸಮಿತಿ ಸರ್ಕಾರಕ್ಕೆ ಅಗ್ರಹಪಡಿಸುತ್ತಿದೆ.
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ವಿವೇಕಾನಂದ ಎಂಬ ದಲಿತ ಹುಡುಗ ಲಿಂಗಾಯತ ಜಾತಿಯ ಮಾನ್ಯ ಎಂಬಾಕೆಯೊಂದಿಗೆ ಜೊತೆ ಮದುವೆಯಾದ ಕಾರಣಕ್ಕೆ ಹುಡುಗಿಯ ತಂದೆ ಪ್ರಕಾಶ ಗರ್ಬಿಣಿ ಮಗಳನ್ನು ಜಾತಿಯ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದಿರುವುದು ದುರದುಷ್ಟಕರ.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಾರಿ ಹರಳಯ್ಯ -ವಧುವರಸರ ಮಕ್ಕಳಿಗೆ ಮದುವೆ ಮಾಡಿಸಿ ಅಂತರ್ಜಾತಿ ಮದುವೆಗೆ ಮುನ್ನುಡಿ ಬರೆದರು.ಇದನ್ನು ಸಹಿಸದ ಸಮಾಜಘಾತುಕ ವರ್ಗದವರು ಅವರ ಕಣ್ಣುಗಳನ್ನು ಕಿತ್ತಿ ಆನೆ ಕಾಲಿಗೆ ಕಟ್ಟಿ ಎಳೆದು ಅಟ್ಟಹಾಸ ಮೆರೆದರು.ಅದನ್ನೆ ಮುಂದುವರೆಸಿರುವ ಇಂದಿನ ಸಮಾಜಘಾತುಕರು ಚಾತುರ್ವರ್ಣ ವ್ಯವಸ್ಥೆಯ ಕಡೆಗೆ ಲಿಂಗಾಯದ ಸಮುದಾಯವು ವಾಲುತ್ತಿರುವುದು ನೋವಿನ ಸಂಗತಿಯಾಗಿದೆ.
ಇನಾಂ ವೀರಾಪುರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಅಮಾನವೀಯ ಪ್ರಕರಣಗಳು ನಡೆಯದಂತೆ ಸರ್ಕಾರವು ಮೌಲ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಖಿಲ ಕರ್ನಾಟಕ ದಲಿತ ಸೇನೆ ಸಮಿತಿಯ ಪದಾಧಿಕಾರಿಗಳಾದ ಗೌರವಾಧ್ಯಕ್ಷರಾದ ಆನಂದರಾಯ ಗಾಯಕವಾಡ ಆಳಂದ ತಾಲೂಕ ಅಧ್ಯಕ್ಷರಾದ ಗಾಯಕವಾಡ, ಭೋಜರಾಜ ಜುಭ್ರೆ, ಜಯಕಾಂತ ವಾಘಮೋರೆ, ಬಸವರಾಜ ಕಾಂಬಳೆ, ದತ್ತಾ ಕೋಚಿ, ದೆವೀಂದ್ರ ಹಂಗರಗಿ, ಲಕ್ಷಣ ಕೊಂಡಲಹಂಗರಗಾ, ದೀಲಿಪ ಬಂಡಾರೆ, ರಾಜಕುಮಾರ್ ಸಿಂಗೆ, ಶರಣು ಜಿಡಗಾ, ಪ್ರವೀಣ್ ಕಾಂಬಳೆ, ಬಾಳಪ್ಪ ತಳೇಕರ್, ಮಾಹಂತೇಶ ಬನ್ನಿಗಿಡ, ರವಿ ಮೇಲಿನಕೇರಿ ಸರ್ಕಾರಕ್ಕೆ ಅಗ್ರಹ ಪಡಿಸಿದ್ದಾರೆ.
























