
ಹುಮನಾಬಾದ :ಜೂ.5: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವ ಮೂಲಕ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ತಾ.ಪಂ ಎಡಿ ಜಗನ್ನಾಥ್ ತಿಳಿಸಿದರು.
ಮಂಗಳವಾರ ತಾಲ್ಲೂಕಿನ ಧೂಮ್ಮನಸೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆರೆ ಹೊಳೆತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದವರು,
ಒಂದು ಆರ್ಥಿಕ ವರ್ಷದಲ್ಲಿ 100 ದಿವಸ ಕೂಲಿ ಕೆಲಸ ನೀಡುವುದರ ಜೊತೆಗೆ ಫಲಾನುಭಾವಿಗಳ ಜೀವನಧಾರಕ್ಕೆ ನೆರವಾಗುವ ವ್ಯಯಕ್ತಿಕ ಕಾಮಗಾರಿಗಳಿನ್ನು 5 ಲಕ್ಷ ರೂ. ಯೋಜನೆಯಡಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ಆದ್ಯತೆ ನೀಡುವುದು. ತಾಯಿ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳಿಗಾಗಿ ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೂಸಿನ ಮನೆ ಸ್ಥಾಪನೆ ಮಾಡಲಾಗಿದೆ ಹಾಗಾಗಿ ತಾವು ಕೆಲಸಕ್ಕೆ ಬರುವ ಸಮಯದಲ್ಲಿ ತಮ್ಮ ಮಕ್ಕಳನ್ನು ಆ ಕೇಂದ್ರದಲ್ಲಿ ಬಿಟ್ಟು ಬರಬೇಕೆಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷ ವೀರಪ್ಪ ಭೂತಲೆ,ಪಿಡಿಓ ಮಲ್ಲಿಕಾರ್ಜುನ ಸಾಗರ್ , ತಾಂತ್ರಿಕ ಸಹಾಯಕರು ಆದರ್ಶ ಪಾಟೀಲ್, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕಾಯಕ ಬಂಧುಗಳು, ಕೂಲಿ ಕಾರ್ಮಿಕರು ಮತ್ತು ಇನ್ನಿತರರು ಭಾಗಿಯಾಗಿದ್ದರು.