ನೌಕರರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ರಾಠೋಡ:ಸಂಘಟನಾ ಕಾರ್ಯದರ್ಶಿ ಮಂಜುಳಾ ನಾಮನಿರ್ದೇಶನ

ಸೇಡಂ , ಡಿ ,೨೨: ತಾಲೂಕಿನ ಸಹಾಯಕ ನಿರ್ದೇಶಕ ಕಚೇರಿಯ ಕೃಷಿ ಅಧಿಕಾರಿಗಳಾದ ಪ್ರಕಾಶ್ ರಾಠೋಡ ಅವರನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕಿ ಮಂಜುಳಾ. ಪಿ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ
ನಾಮನಿರ್ದೇಶನ ಮಾಡಿ ಜಿಲ್ಲಾಧ್ಯಕ್ಷರಾದ ಬಸವರಾಜ ಬಳೂಂಡಗಿ ಅವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ವೇಳೆಯಲ್ಲಿ ಯಾದಗಿರಿ ಜಿಲ್ಹಾ ಕೃಷಿ ಉಪನಿರ್ದೇಶಕರಾದ ವೈ.ಎಲ್. ಹಂಪಣ್ಣ ,ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕ್ರಯ್ಯ ಸ್ವಾಮಿ, ಸೇಡಂ ಸರಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರು ಶಿವಶರಣಪ್ಪ ಮುಗನೂರ ಇದ್ದರು.