ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು:ಯು.ನಿಸಾರ ಅಹಮದ್

ಬೀದರ್:ನ.5: ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಒತ್ತು ಕಾಳಜಿ ನೀಡುವಂತೆ ಅಲ್ಪಸಂಖ್ಯಾತರ ಅಯೋಗದ ಅಧ್ಯಕ್ಷರಾದ ಯು.ನಿಸಾರ ಅಹಮದ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ವಿವಿಧ ಸಮುದಾಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಮುಸ್ಲಿಂ ಹಾಗೂ ಸಿಖ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಮಕ್ಕಳು ಶಾಲೆಯಿಂದ ಹೆಚ್ಚು ಹೊರಗುಳಿದವರಾಗಿದ್ದು ಈ ಬಗ್ಗೆ ಅಧಿಕಾರಿಗಳು ಗಮನ ನೀಡುವಂತೆ ತಿಳಿಸಿದರು.
2011ರ ಜನಗಣತಿ ಪ್ರಕಾರ ಶೇ.43 ರಷ್ಟು ಮುಸ್ಲಿಂ ಜನಸಂಖ್ಯೆ ಅಶಿಕ್ಷಿತರಾಗಿದ್ದು, ಶೇ.15% ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸಮೀಕ್ಷೆ ಪ್ರಕಾರ ಶೇ.6 ರಷ್ಟು ಮಕ್ಕಳು 10ನೇ ತರಗತಿಗೆ ದಾಖಲಾಗಿರುತ್ತಾರೆ. ಡಿಡಿಪಿಐ ಹಾಗೂ ಮಹಿಳಾ ಮಕ್ಕಳ ಅಧಿಕಾರಿಗಳು ಸಮಗ್ರ ಶಿಕ್ಷಣ ಯೋಜನೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ತಿಳಿಸಿದರು.
ಅಂಗನವಾಡಿಯಿಂದ ಪ್ರಾಥಮಿಕ ಶಾಲೆಗೆ ಮಕ್ಕಳು ಕಡ್ಡಾಯವಾಗಿ ದಾಖಲಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಬೀದರ ಜಿಲ್ಲೆಯ ಬಿದರಿ ಕಲೆ, ಗೋಮಿತ್ರಿ ಸೀರೆ ನೇಕಾರರು ಹಾಗೂ ಸಿಕ್ಕಲಗಾರರ ಸಮುದಾಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಯೋಜನಾ ವರದಿಯೊಂದನ್ನು ಶೀಘ್ರವೇ ರೂಪಿಸಿ ಆಯೋಗಕ್ಕೆ ಕಳುಹಿಸುವಂತೆ ಅಧ್ಯಕ್ಷರು ತಿಳಿಸಿದರು.
ಬಿದರ ಕಲೆಯನ್ನು ಹೆಚ್ಚೆಚ್ಚು ಪೆÇ್ರೀತ್ಸಾಹಿಸಲು ಸಾಕಷ್ಟು ಅವಕಾಶವಿದ್ದು, ಈ ನಿಟ್ಟಿನಲ್ಲಿ 6 ತಿಂಗಳ ವಿಶೇಷ ಕೋರ್ಸ ಒದಗಿಸುವ ಯೋಜನೆಯನ್ನು ಆಯೋಗದಿಂದ ಆರಂಭಿಸುವ ಬಗ್ಗೆ ಚಿಂತಿಸಲಾಗುವುದೆಂದು ಆಯೊಗದ ಅಧ್ಯಕ್ಷರಾದ ಯು.ನಿಸಾರ ಅಹಮದ್ ತಿಳಿಸಿದರು.
ಬಸವಕಲ್ಯಾಣದಲ್ಲಿ ಗೋಮಿತ್ರಿ ಸೀರೆಗಳನ್ನು (ಜರದೋಜಿ) ನೇಯುವ ಅಲ್ಪಸಂಖ್ಯಾತರ ನೇಕಾರರ ಸಮುದಾಯವಿದ್ದು ಅವರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಅಧ್ಯಕ್ಷರ ಗಮನಕ್ಕೆ ತಂದರು. ಅಲ್ಲದೇ ಸಿಕ್ಕೆಲಗಾರರ ಎಂಬ ಚಾಕು, ಚೂರಿ ಹರಿತಗೊಳಿಸುವ ಸಮುದಾಯದ ಅಭಿವೃದ್ಧಿಗೂ ಸಹ ಯೋಜನೆವೊಂದನ್ನು ರೂಪಿಸಲಾಗುವುದು ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಬಿವೃದ್ಧಿ ಕಾಪೆರ್Çೀರೇಶನ್ ಕೌಶಲ್ಯ ಅಭಿವೃದ್ಧಿ ಅಧಿಕಾರಿ, ಜವಳಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸೇರಿ ಬಿದರಿ, ಗೋಮಿತ್ರಿ ಹಾಗೂ ಸಿಕ್ಕೆಲಗಾರ ಕ್ಲಸ್ಟರ್ ನಿರ್ಮಿಸಲು ಯೋಜನೆಯೊಂದನ್ನು ನಿರ್ಮಿಸಿದಲ್ಲಿ ಮುಂಬರುವ ಬಜೇಟನಲ್ಲಿ ವಿಶೇಷ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಈ ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ವಿವಿಧ ಸದಸ್ಯರುಗಳು ಹಾಗೂ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು