
ಕಲಬುರಗಿ; ಫೆ.2:ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯ ನಡೆಸುತ್ತಿದ್ದ ವಿವಿಧ ಪದವಿ ಕಾಲೇಜುಗಳಲ್ಲಿ ತಮ್ಮ 40 ವರ್ಷಗಳಿಗೂ ಹೆಚ್ಚು ವರ್ಷಗಳ ಸೇವೆಯನ್ನು ಪೂರೈಸಿ, ವೈಯಕ್ತಿಕ ಕಾರಣಗಳಿಂದ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಡಾ. ಎಸ್. ಜಿ. ಡೊಳ್ಳೇಗೌಡರಿಗೆ ಭಾವಪೂರ್ಣವಾಗಿ ಬೀಳ್ಕೊಡಲಾಯಿತು.
ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ತಮ್ಮ ಭಾಷಣದಲ್ಲಿ, ಸಂಘ ಮತ್ತು ಶರಣಬಸವೇಶ್ವರ ಸಂಸ್ಥಾನಕ್ಕೆ ಡಾ. ಡೊಳ್ಳೇಗೌಡರ್ ಅವರ ಸೇವೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ ಮತ್ತು ವಿವಿಧ ಪದವಿ ಕಾಲೇಜುಗಳಿಗೆ ಅವರ ಪರಿಣಿತಿಯೊಂದಿಗೆ ಓಂಂಅ ಮಾನ್ಯತೆ ಪಡೆಯುವಲ್ಲಿ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲಾಗುತ್ತದೆ. ಸಂಘಕ್ಕೆ ಅಗತ್ಯವಿದ್ದಾಗಲೆಲ್ಲಾ ತಮ್ಮ ಸೇವೆ ಮತ್ತು ಅಪಾರ ಅನುಭವವನ್ನು ಹಂಚಿಕೊಳ್ಳಲು ಡಾ. ಡೊಳ್ಳೇಗೌಡರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ವಿವಿಯ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಅವರು ತಮ್ಮ ಭಾಷಣದಲ್ಲಿ, ಎಲ್ಲಾ ಪದವಿ ಕಾಲೇಜುಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ಕøಷ್ಟಗೊಳಿಸಲು ಡಾ. ಡೊಳ್ಳೇಗೌಡರ್ ಅವರ ಕೊಡುಗೆಯನ್ನು ಮತ್ತು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರೊಂದಿಗಿನ ನಿಕಟ ಸಂಬಂಧವನ್ನು ಸ್ಮರಿಸಿದರು. ಡಾ. ಡೊಳ್ಳೇಗೌಡರ್ ಅವರು ಡಾ. ಅಪ್ಪಾಜಿ ವಹಿಸಿಕೊಟ್ಟ ಎಲ್ಲಾ ಕೆಲಸಗಳನ್ನು ಪೂರ್ಣ ತೃಪ್ತಿಯಿಂದ ನಿರ್ವಹಿಸುತ್ತಿದ್ದರು ಎಂದರು.
ಡಾ. ಡೊಳ್ಳೇಗೌಡರ್ ಅವರು ತಮ್ಮ ಭಾಷಣದಲ್ಲಿ, ತಮ್ಮ ವಿದ್ಯಾರ್ಥಿ ದಿನಗಳು ಮತ್ತು ಇಂಗ್ಲಿμï ಭಾμÉಯ ಮೇಲಿನ ಪ್ರೀತಿಯನ್ನು ನೆನಪಿಸಿಕೊಂಡರು. 25ನೇ ವಯಸ್ಸಿನಲ್ಲಿ ಪದವೀಧರರಾಗಿ ಗುಲ್ಬರ್ಗಕ್ಕೆ ಬಂದು ಸಂಘದ ಪದವಿ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿ ಸೇರಿಕೊಂಡು, ಮುಂದೆ ವಿವಿಧ ಅವಧಿಗಳಲ್ಲಿ ಐದು ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಯನ್ನು ಮತ್ತು ಶರಣಬಸವ ವಿಶ್ವವಿದ್ಯಾಲಯದಲ್ಲಿ ಭಾμÁ ಡೀನ್ ಹುದ್ದೆಯನ್ನು ಅಲಂಕರಿಸಿದ ಬಗ್ಗೆ ಮೆಲುಕು ಹಾಕಿದರು. ನಿವೃತ್ತಿಯಾದ ಬಳಿಕ ವಿವಿಯ ಕುಲಸಚಿವರ ಹುದ್ದೆಗೆ ಬಡ್ತಿ ಪಡೆದ ನಂತರ ಅವರು ತಮ್ಮ ಮಾರ್ಗದರ್ಶಕ ಮತ್ತು ಅವರ ಜೀವನದಲ್ಲಿ ಎಲ್ಲವೂ ಆಗಿದ್ದನ್ನು ನೆನಪಿಸಿಕೊಂಡರು.























