ಭಜನೆಯಿಂದ ಭಾವನಾತ್ಮಕ ಬೆಸುಗೆ

ಬೀದರ:ಜ.೨೨:ಕಲೆ ಸಾಹಿತ್ಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿ ಭಜನೆ ಮಾಡಿ ಸಂಬAಧಗಳು ಬೆಸೆಯಲು ಇದು ಪೂರಕ ಎಂದು ಪೂಜ್ಯ ಶ್ರೀ ಡಾ ಗಂಗಾAಬಿಕಾ ಅಕ್ಕ ನುಡಿದರು.

೨೪ ನೇ ವಚನ ವಿಜಯೋತ್ಸವ ಪ್ರಯುಕ್ತಬಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಜಿಲ್ಲಾ ಮಟ್ಟದ ವಚನ ಭಜನೆ ಸ್ಪರ್ಧೆಯ ಉದ್ಘಾಟನೆ ಪ್ರೊ ಲೀಲಾವತಿ ಚಾಕೋತೆ ಜ್ಯೋತಿ ಬೆಳಗಿಸಿ ಮಾತನಾಡಿ ನೂರಾರು ಹಳ್ಳಿಯ ದೇವಾಲಯ, ಸಮುದಾಯ ಭವನದಲ್ಲಿ ಹೆಣ್ಣು ಮಕ್ಕಳು ಪ್ರತಿ ಸೋಮವಾರ, ಹುಣ್ಣಿಮೆಗಳಂದು ಸಾಮೂಹಿಕ ಭಜನೆ ಮಾಡುವುದು ಒಂದು ಒಳ್ಳೆಯ ಪರಂಪರೆ. ಈ ಸಂಸ್ಕೃತಿ ಬೆಳೆಸದಿದ್ದರೆ ತುಂಬಾ ಹಾನಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಸಂಗೀತ ಹಾಗೂ ಸಾಂಸ್ಕೃತಿಕ ಬದುಕಿಗೆ ಪ್ರೇರಣೆ ನೀಡಲು ಭಜನಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು. ಡಾ ಸರಿತಾ ಭದಭದೆ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಇಂದು ಇಲ್ಲಿ ಜಿಲ್ಲೆಯಿಂದ ಸುಮಾರು ಹದಿನಾರು ತಂಡ ಭಾಗವಹಿಸುತ್ತಿರುವುದು ಸಂತಸವನ್ನುAಟು ಮಾಡಿದೆ.

ಇಲ್ಲಿ ವಿಶೇಷವಾಗಿ ವಚನಗಳು ಹಾಡಲು ಅವಕಾಶ ಕಲ್ಪಿಸಿದೆ. ಹಾರ್ಮೋನಿಯಂ ಹಾಗೂ ತಬಲಾದೊಂದಿಗೆ ಸುಶ್ರಾವ್ಯ ವಾಗಿ ಹಾಡಿದವರಿಗೆ ಪ್ರಥಮ ಬಹುಮಾನ ೧೫,೦೦೦ ದ್ವಿತೀಯ ಬಹುಮಾನ ೧೦,೦೦೦ ತೃತೀಯ ಬಹುಮಾನ ೫೦೦೦ ಕೊಡಲಾಗುತ್ತಿದೆ. ಇದರ ಲಾಭ ಜೊತೆ ಭಕ್ತಿ ಭಾವ ಬೆಳೆಸಲು ಇದು ಪೂರಕವಾಗುತ್ತದೆಂದರು. ಅಧ್ಯಕ್ಷತೆ ವಹಿಸಿದ ಜ್ಞಾನದೇವಿ ಬಬಛಡೆ ಮಾತನಾಡಿ ವಿಜೇತರಿಗೆ ದಿನಾಂಕ ೧.೨.೨೦೨೬ ಮಧ್ಯಾಹ್ನ ಪ್ರಶಸ್ತಿ ಪ್ರಮಾಣ ಪತ್ರ ಹಾಗು ನಗದು ಹಣ ನೀಡಲಾಗುತ್ತದೆ ಎಂದರು. ಪ್ರಥಮ ಬಹುಮಾನ ಅಲ್ಲಮಪ್ರಭು ಭಜನಾ ತಂಡ ಗುಂಪಾ, ದ್ವಿತೀಯ ಬಹುಮಾನ ಧ್ಯಾನಮಂದಿರ ಸತ್ಸಂಗ ಭಜನಾ ತಂಡಕ್ಕೆ ಹಾಗೂ ತೃತೀಯ ಬಹುಮಾನ ಅಕ್ಕನಬಳಗ ಭಜನಾತಂಡಕ್ಕೆ ಆಯ್ಕೆ ಯಾಗಿದ್ದಾರೆ ಎಂದು ಪ್ರೊ ಸಂಗ್ರಾಮ ಎಂಗ್ಳೆ ಸಂಯೋಜಕ ಪ್ರಕಟಿಸಿದರು. ಇಲ್ಲಿ ನಿರ್ಣಾಯಕ ರಾಗಿ ರಾಜಕುಮಾರ ಹಿರೇಮಠ, ಸಂಗ್ರಾಮ ಎಂಗ್ಳೆ, ಪ್ರೊ. ರೇಣುಕಾ ಮಳ್ಳಿ, ರೇವಣಪ್ಪ ಮೂಲಗೆ ಆಗಮಿಸಿ ತೀರ್ಪು ನೀಡಿದ್ದರು. ಸ್ವಾಗತವನ್ನು ಶರಣಮ್ಮ ಪವಾಡಶೆಟ್ಡಿ ಮಾಡಿದರೆ ಶೈಲಜಾ ಕುಂಬಾರ ನಿರೂಪಣೆ ಮಾಡಿದರೆ ಡಾ ಚೆನ್ನಮ್ಮ ಬಿರಾದಾರ ಗುರುಪೂಜೆ ನಡೆಸಿ ಕೊಟ್ಟರು.