
ಬೀದರ್: ತುರ್ತು ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆತರೆ ಜೀವಕ್ಕೆ ಎದುರಾಗುವ ಗಂಭೀರ ಅಪಾಯಗಳನ್ನು ತಡೆಯುವುದರ ಜೊತೆಗೆ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಬೀದರ್ ನಗರದ ಗುದಗೆ ಆಸ್ಪತ್ರೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಬೀದರ್ ನಗರದ ಶಹಾಗಂಜ್ ನಿವಾಸಿ ನವೀನ್ ತಂದೆ ನರಸಿಂಗ ವಯಸ್ಸು (33) ಎಂಬ ಯುವಕನಿಗೆ ಅಕ್ಟೋಬರ್ 12ರಂದು ಬೆಳಗಿನ ಜಾವ 4 ಗಂಟೆಗೆ ದೇಹದ ಬಲಭಾಗದ ಕೈ ಮತ್ತು ಕಾಲುಗಳನ್ನು ಚಲಿಸಲು ಸಾಧ್ಯವಾಗದ ಗಂಭೀರ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡ ಸಂಬಂಧಿಕರು ತಡಮಾಡದೆ ಯುವಕನನ್ನು ಗುದಗೆ ಆಸ್ಪತ್ರೆಗೆ ಕರೆತಂದರು.
ಆ ಯುವಕನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ತಕ್ಷಣ ಚಿಕಿತ್ಸೆಗೆ ಮುಂದಾಗಿ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಪರಿಣಾಮ ಯುವಕನ ಕೈಕಾಲುಗಳ ಚಲನೆ ಸುಧಾರಿಸಿದ್ದು, ಸದ್ಯ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ಖ್ಯಾತ ಗುದಗೆ ಆಸ್ಪತ್ರೆಯ ನರ ರೋಗ ತಜ್ಞರಾದ ಡಾ. ಪ್ರಶಾಂತ್ ಅಲ್ಲೆ ಅವರು ತಿಳಿಸಿದ್ದಾರೆ.
ಯುವಕನ ಬಲಭಾಗದ ಕೈ ಮತ್ತು ಕಾಲುಗಳ ಚಲನೆ ನಿಂತುಹೋಗಿದ್ದ ಸಂದರ್ಭದಲ್ಲಿ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆತಂದ ನಿರ್ಧಾರ ಮಹತ್ವದ್ದಾಗಿತ್ತು. ತುರ್ತು ವೈದ್ಯಕೀಯ ನೆರವು ದೊರೆತ ಹಿನ್ನೆಲೆಯಲ್ಲಿ ನವೀನ್ ತಂದೆ ನರಸಿಂಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರ ಸಂಬಂಧಿಕರು ವೈದ್ಯರ ಸಮಯೋಚಿತ ಚಿಕಿತ್ಸೆ ಮತ್ತು ಆಸ್ಪತ್ರೆಯ ಸೇವೆಯನ್ನು ಪ್ರಶಂಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಾಶ್ರ್ವವಾಯು (ಲಕ್ವಾ) ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ ದೇಹದ ಒಂದು ಭಾಗದ ಕೈ ಅಥವಾ ಕಾಲು ಇದ್ದಕ್ಕಿದ್ದಂತೆ ದುರ್ಬಲವಾಗುವುದು, ಮುಖ ಒಂದು ಕಡೆ ವಾಲುವುದು, ಮಾತನಾಡಲು ತೊಂದರೆಯಾಗುವುದು ಅಥವಾ ನಡೆಯಲು ಸಾಧ್ಯವಾಗದಿರುವುದು ಪಾಶ್ರ್ವವಾಯು (ಸ್ಟ್ರೋಕ್) ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ಮನೆಯಲ್ಲೇ ಕಾಯದೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಲಕ್ಷಣಗಳು ಕಡಿಮೆಯಾದರೂ ವೈದ್ಯಕೀಯ ಪರೀಕ್ಷೆ ಅಗತ್ಯ ಎಂದು ಡಾ. ಪ್ರಶಾಂತ್ ಅಲ್ಲೆ ಅವರು ತಿಳಿಸಿದ್ದಾರೆ.
ಪಾಶ್ರ್ವವಾಯುವಿನ (ಲಕ್ವಾ) ಸಂದರ್ಭದಲ್ಲಿ ಪ್ರತಿ ನಿಮಿಷವೂ ಮಹತ್ವದ್ದಾಗಿರುತ್ತದೆ. ಆದ್ದರಿಂದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ತಕ್ಷಣ ಆಸ್ಪತ್ರೆಗೆ ತಲುಪುವುದು ರೋಗಿಯ ಚೇತರಿಕೆಗೆ ನೆರವಾಗಬಹುದು.
ನವೀನ್ ತಂದೆ ನರಸಿಂಗ ವಯಸ್ಸು (33) ಅವರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆತು ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುವುದು ಅವರ ಕುಟುಂಬಕ್ಕೆ ನೆಮ್ಮದಿ ತಂದಿದೆ. ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಸಮಯೋಚಿತ ವೈದ್ಯಕೀಯ ಸೇವೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
























