ಅಫಜಲಪುರ ;ಅ.10: ರಾಜ್ಯದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ತುರ್ತು ಆರೋಗ್ಯ ಸೇವೆ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಸಂಚಾರಿ ಆರೋಗ್ಯ ಘಟಕ ಶುರುಮಾಡಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ವೈ. ಪಾಟೀಲ್ ಹೇಳಿದರು.
ಹೈಕೋರ್ಟ್ ಬಳಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಂಚಾರಿ ಆರೋಗ್ಯ ಘಟಕಕ್ಕೆ
ಚಾಲನೆ ನೀಡಿ ಮಾತನಾಡಿದ ಅವರು, ಸಂಚಾರಿ ಆರೋಗ್ಯ ಘಟಕಗಳಲ್ಲಿ ಗುಣಮಟ್ಟದ
ಆರೋಗ್ಯ ಸಂಬಂಧಿತ ವೈದ್ಯಕೀಯ ಉಪಕರಣಗಳು ಮತ್ತು ಹೊರರೋಗಿಗಳಿಗೆ ದೊರೆಯುವ ಎಲ್ಲ ಸೌಲಭ್ಯ
ಇವೆ. ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಕಾರ್ಮಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಬದ್ಧವಾಗಿದೆ ಎಂದರು. ಸಾರ್ವಜನಿಕರಿಗೆ ಮೂಲ ಸೌಲಭ್ಯಗಳಾದ ಶಿಕ್ಷಣ, ರಸ್ತೆ, ಕುಡಿವ ನೀರಿ, ವಿದ್ಯುತ್ ಕಲ್ಪಿಸುವುದರ ಜತೆಗೆ ಜೀವನಮಟ್ಟ ಸುಧಾರಣೆಗೆ ಶ್ರಮಿಸಲಾಗುತ್ತಿದೆ. ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳು ಜಾರಿ ಮಾಡಿದ್ದು, ಉತ್ತಮ ಶಿಕ್ಷಣದೊಂದಿಗೆ ಮಕ್ಕಳನ್ನು
ವಿದ್ಯಾವಂತರನ್ನಾಗಿಸಬೇಕು ಎಂದು ತಿಳಿಸಿದರು ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್.ಹಳಿಮನಿ ಮಾತನಾಡಿ, ಸಂಚಾರಿ ವಾಹನದಲ್ಲಿ ಒಬ್ಬ ವೈದ್ಯ,
ನರ್ಸ್, ಪ್ರಯೋಗಾಲಯ ಸಿಬ್ಬಂದಿ ಹಾಗೂ ವೈದ್ಯಕೀಯ, ಪ್ರಯೋಗಾಲಯದ ಉಪಕರಣಗಳಿವೆ. ಕಾರ್ಮಿಕರು ಗಂಭೀರ ಸಮಸ್ಯೆಗಳಿದ್ದರೆ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ, ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಪ್ರಮುಖರಾದ ಯಾಸೀನ್, ಡಾ.ಪರಿಕ್ಷಿತ ಜೋಷಿ, ವಿಜಯಕುಮಾರ ಡೋಳೆ, ಲಕ್ಷ್ಮಣ ರಾಠೋಡ್, ರೂಪಾ ಕೋರಳ್ಳಿ, ರಾಣಿ ಸಗರ,ಅಣವೀರ ಮಠಪತಿ ಇತರರಿದ್ದರು.
























