ಅರ್ಚಕರ ಮನೆಗೆ ವಿದ್ಯುತ್ ಶಾರ್ಟ್ ಸಕ್ಯೂ9ಟ್ ಹಾನಿ

ಸೇಡಂ, ಸೆ, 06: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ನೃಪತುಂಗ ನಗರ ಸ್ಟೇಷನ್ ತಾಂಡದ ಹಂಗನಳ್ಳಿ ರಸ್ತೆಯಲ್ಲಿರುವ ಶ್ರೀ ಹಾರಕೂಡ ಚನ್ನಬಸಶ್ವೇರ ದೇವಸ್ಥಾನದ ಅರ್ಚಕರಾದ ಶಿವಕುಮಾರ ತಂದೆ ವೀರಯ್ಯ ಸ್ಥಾವರಮಠ ಅವರ ಮನೆಗೆ ಸುಮಾರು ರಾತ್ರಿ 1:00 ಘಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸಕ್ಯೂ9ಟ್ ನಿಂದ ಮನೆಯ ದಿನಬಳಕೆ ವಸ್ತುಗಳು, ಹಾಗೂ ಟಿವಿ, ಮೊಬೈಲ್, ಎಲೇಕ್ಟ್ರಿಕ್ ವಸ್ತುಗಳು,ನಗದು ಹಣ ಸುಟ್ಟು ಕರೆಯಲಾಗಿದ್ದು,ಇದಕ್ಕೆ ಸಂಬಂದಪಟ್ಟ ಸಕ್ಷಮ ಪ್ರಾಧಿಕಾರ ಅಧಿಕಾರಿಗಳು ಬಡ ಅರ್ಚಕನಿಗೆ ತುರ್ತಾಗಿ ನೇರವಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.