
ಬೀದರ್:ಜು.೨: ದಕ್ಷಿಣ ಕ್ಷೇತ್ರದ ಕೋಳಾರ ಬಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ ಈ ನಿಮಿತ್ತ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಧಿಕಾರಿಗಳೊಂದಿಗೆ ಸಂತ್ರಸ್ತ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ವ್ಯಯಕ್ತಿಯ ಸಹಾಯಧನ ನೀಡಿ ಸರ್ಕಾರದಿಂದ ಪರಿಹಾರ ಒದಗಿಸುವದಾಗಿ ಭರವಸೆ ನೀಡಿದರು.
ಭಾನುವಾರ ಸಂಜೆ ಹೊತ್ತಿಗೆ ಕೋಳಾರ ಬಿ ಗ್ರಾಮದ ಮಮತಾ ಗಂಡ ಶ್ರಿನಿವಾಸ ಹಲಗೆ ಅವರ ಮನೆಯೇ ಬೆಂಕಿಗೆ ಆಹುತಿಯಾಗಿರುವುದು ಕುಟುಂಬಸ್ಥರು ಮನೆಯ ಹೊರಗೆ ಇದ್ದಾಗ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಶೇಖರಿಸಿಟ್ಟಿದ ಅಪಾರ ಪ್ರಮಾಣದ ಜೋಳ, ಕಡಲೆ, ದವಸ ಧಾನ್ಯಗಳು ಮನೆಯಲ್ಲಿದ್ದ ವಸ್ತುಗಳು ಬೆಂಕಿಯಿAದ ಸುಟ್ಟುಹೋಗಿವೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅವಘಡ ಸಂಭವಿಸಿದ ವೇಳೆ ಸಾರ್ವಜನಿಕರು , ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬೆAಕಿಗೆ ಆಹುತಿಯಾದ ಮನೆ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಲಕ್ಷಾಂತರ ರೂ. ಮೌಲ್ಯದ ದವಸ, ಧಾನ್ಯ ಸುಟ್ಟಿದೆ ಪರಿಹಾರ ನೀಡಬೇಕು ಎಂದು ಸಂತ್ರಸ್ತ ಮಹಿಳೆ ಶಾಸಕರೆದರು ಅಳಲು ತೋಡಿಕೊಂಡರು. ಶಾಸಕರು ಪರಿಶೀಲನೆ ನಡೆಸಿ ಹಾನಿಯಾದ ವಸ್ತುಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳದಲ್ಲಿದ್ದ ಜೆಸ್ಕಾಂ ಎಇಇ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ವಿಜಯಕುಮಾರ ಪಾಂಚಾಳ, ಮುಖಂಡರಾದ ಹಣಮಂತರಾವ ಮೈಲಾರೆ, ಶಿವಶಂಕರ ಬುಳ್ಳಾ, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ ಕೊಳಾರೆ, ಕಾಶಿನಾಥ ಮೇತ್ರೆ, ರೇವಣ್ಣಪ್ಪ ಚಿಲ್ಲರ್ಗಿ, ರಾಜಶೇಖರ ನೌಬಾದೆ, ಸಂತೋಷ ರೆಡ್ಡಿ, ಸಂತೋಷ ಸೋರಳ್ಳಿ, ಬಸವರಾಜ ಪಟೋದಿ, ಸತೀಶ ಹೊಕ್ರಾಣೆ, ಅಮರ ಚಾಂಬಳೆ, ರುಕ್ಮೋದಿನ್ನ, ಲಕ್ಷ್ಮಿಬಾಯಿ ಮತ್ತಿತರರು ಉಪಸ್ಥಿತರಿದ್ದರು.