ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬ


ಗುಳೇದಗುಡ್ಡ,ಜು.೪: ನಗರದ ಡಿವಿಜನ್ ನಂ.೩ರಲ್ಲಿನ ತಳವಾರ ಓಣಿಯ ರಸ್ತೆ ಪಕ್ಕದಲ್ಲಿನ ಸಿಮೆಂಟ್ ವಿದ್ಯುತ್ ಕಂಬವೊAದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿ ನಿಂತಿದೆ. ವಿದ್ಯುತ್ ಕಂಬವೊAದು ನೆಲಮಟ್ಟದಿಂದ ಸುಮಾರು ಎರೆಡು ಅಡಿಯ?ÀÄ್ಟ ಎತ್ತರ ಸಿಮೆಂಟ್ ಕಾಂಕ್ರೀಟ್ ಉದುರಿಬಿದ್ದು ಕಬ್ಬಿಣದ ರಾಡ್‌ಗಳು ಅಸ್ಥಿಪಂಜರದAತೆ ಕಾಣುತ್ತಿವೆ. ಗಾಳಿಬಿಟ್ಟರೆ ಕಂಬಗಳು ಅಲುಗಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಿಥಿಲಗೊಂಡು ಸಿಮೆಂಟ್ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.


ಈ ರಸ್ತೆಯ ಮೂಲಕವೇ ಜನರು, ಮಕ್ಕಳು, ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಿದ್ದು, ಅಪಾಯಕಾರಿಯಾದ ವಿದ್ಯುತ್ ಕಂಬದಿAದ ಜನರು ಭಯದಿಂದ ಸಂಚರಿಸು ವಂತಾಗಿದೆ. ಓಣಿಯ ಮಕ್ಕಳು ಇಲ್ಲಿಯೇ ಆಟ ಆಡುತ್ತಿದ್ದು, ಏನಾದರೂ ಅಪಾಯ ಸಂಭವಿಸಿದರೆ ಹೇಗೆ ಎಂಬುದು ಇಲ್ಲಿನ ಸಾರ್ವಜನಿಕರ ಕಳಕಳಿಯಾಗಿದೆ. ದುಸ್ಥಿತಿಯಲ್ಲಿರುವ ಈ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಹೊಸ ಕಂಬವನ್ನು ಅಳವಡಿಸುವಂತೆ ಸಾರ್ವಜನಿಕರು ಸಾಕ?ÀÄ್ಟ ಬಾರಿ ಹೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎಂದು ರಾಘವೇಂದ್ರ ಗೋವಿನಕೊಪ್ಪ, ರಾಮಣ್ಣ ಚಂದರಗಿ, ಬೈಲಪ್ಪ ಆಲಗುಂಡಿ, ಶಂಕರ ಉಣಚಗಿ, ಶಿವಪ್ಪ ಉಣಚಗಿ, ಗಣಪತಿ ತಳವಾರ, ಎಲ್.ಎಸ್. ಬೀಳಗಿ, ಯಲ್ಲಪ್ಪ ಕೊಳ್ಳಿ ಸಿಂಧೂರ ಆಲಗುಂಡಿ, ಭೀಮಪ್ಪ ಚೂರಿ, ಹನಮಂತ ಗಳಾಗಂಟಿ, ಶಾವಕ್ಕ ತಳವಾರ ಮತ್ತಿತರರು ದೂರಿದ್ದು, ಶೀಘ್ರವೇ ಶಿಥಿಲಗೊಂಡಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಹೊಸ ಕಂಬ ಅಳವಡಿಸುವಂತೆ ಹೆಸ್ಕಾಂ ಇಲಾಖೆಗೆ ಆಗ್ರಹಿಸಿದ್ದಾರೆ.