ಅಥಣಿ : ಅ.1:ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎ.ಹುದ್ದಾರ , ಉಪಾಧ್ಯಕ್ಷರಾಗಿ ಆರ್.ಪಿ. ಹಗೇದ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸಿ.ಕೆ.ಬಾಗಿ, ಖಜಾಂಚಿಯಾಗಿ ಜಿ.ಡಿ.ಹಿರೇಮಠ, ಕಾರ್ಯದರ್ಶಿಯಾಗಿ ಎನ್.ಪಿ.ಬಾಬರ ಚುನಾವಣೆಯಲ್ಲಿ ಆಯ್ಕೆಯಾದರೆ ಪ್ರಹಿಳಾ ಪ್ರತಿನಿಧಿಯಾಗಿ ನ್ಯಾಯವಾದಿ ಗೀತಾ ಕಾಂಬಳೆ ಅವಿರೋಧವಾಗಿ ಎಂದು ಚುನಾವಣಾಧಿಕಾರಿ ಬಿ.ಎಸ್.ಅಂಬಿ ಘೋಷಿಸಿದರು.
ನಂತರ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಅಭಿನಂದಿಸಿದರು. ಈ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಎ.ಎ.ಹುದ್ದಾರ ಮಾತನಾಡಿ, ಈಗಾಗಲೇ ಮಂಜುರಾದ 36 ಕೋಟಿ ರೂ. ಮೊತ್ತದ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನ್ಯಾಯವಾದಿ ಸಂಘದ ಹಿಂದಿನ ಅಧ್ಯಕ್ಷರು ಸಾಕಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾನು ಕೂಡ ಅವರಂತೆಯೇ ಸಂಘದ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತೇನೆ. ಸಂಘದ ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ಗೆಲುವಿಗೆ ಶ್ರಮಿಸಿದ ಮತ್ತು ಬೆಂಬಲಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರ್.ಪಿ.ಹಗೇದ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಚಿರಋಣಿ ಎಂದ ಅವರು ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದರು.
ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ನ್ಯಾಯವಾದಿ ಎಸ್.ಎ.ಪಾಟೀಲ(ಹುಲಗಬಾಳ), ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ, ನಿಕಟ ಪೂರ್ವ ಅಧ್ಯಕ್ಷ ನಿಂಗಪ್ಪ ಖೋಕಲೆ ಸೇರಿದಂತೆ ಇನ್ನಿತರರು ಮಾತನಾಡಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಸ್.ಎ.ಪಾಟೀಲ, ಬಸವರಾಜ ಢಂಗಿ, ಸುನೀಲ ಸಂಕ, ಧರೆಪ್ಪ ಠಕ್ಕಣ್ಣವರ, ಬಸವರಾಜ ಅಂಬಿ, ಎಮ್.ಡಿ.ಗುಂಜಿಗಾಂವಿ, ಎ.ಆರ್.ಮಾಳೋಜಿ, ಎಲ್.ಡಿ.ಹಳಿಂಗಳಿ, ವಿನಯ ಪಾಟೀಲ ಹೀರಿದಂತೆ ನೂರಾರು ವಕೀಲರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸಿಹಿ ಹಂಚಿ ಸಂಭ್ರಮಿಸಿದ ವಕೀಲರು..!
ಅಥಣಿ : ತೀವ್ರ ಕುತೂಹಲ ಮೂಡಿಸಿದ್ದ ಅಥಣಿ ನ್ಯಾಯವಾದಿಗಳ ಸಂಘದ ಚುನಾವಣೆ ಬುಧವಾರ ಜರುಗಿತು. 400 ಕ್ಕೂ ಅಧಿಕ ಸದಸ್ಯತ್ವ ಬಲ ಹೊಂದಿರುವ ಅಥಣಿ ನ್ಯಾಯವಾದಿಗಳ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೆÇೀಟಿ ಏರ್ಪಟ್ಟಿತ್ತು. ಎರಡು ವರ್ಷದ ಅಧ್ಯಕ್ಷ ಸ್ಥಾನದ ಅವಧಿಗೆ ಸ್ಪರ್ಧಿಸಿದ್ದ ಹಿರಿಯ ನ್ಯಾಯವಾದಿ ಎ. ಎ. ಹುದ್ದಾರ 199 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ ಪ್ರತಿಸ್ಪರ್ಧಿ ನ್ಯಾಯವಾದಿ ಕೆ ಎಚ್ ಅವಟಿ 196 ಮತಗಳನ್ನು ಪಡೆದು ಪ್ರಭಾವಗೊಂಡರು. 399 ಜನ ಮತದಾನ ಮಾಡಿದರೆ, ನಾಲ್ಕು ಮತಗಳು ಕುಲಗೆಟ್ಟು ತಿರಸ್ಕøತಗೊಂಡವು. ಎ. ಎ. ಹುದ್ದಾರ ಕೇವಲ ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಅವರ ಅಭಿಮಾನಿ ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು.
ಅಥಣಿ ನ್ಯಾಯಾಲಯ ಸಂಕೀರ್ಣದ ಕಟ್ಟಡ ಕಾಮಗಾರಿಗೆ ಈಗಾಗಲೇ 36 ಕೋಟಿ ರೂ . ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಈ ಕಟ್ಟಡ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನ್ಯಾಯವಾದಿ ಸಂಘದ ಹಿಂದಿನ ಅಧ್ಯಕ್ಷರು ಸಾಕಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಂತೆ ನಾನು ಕಾರ್ಯನಿರ್ವಹಿಸುತ್ತೇನೆ. ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲ ಹಿರಿಯ, ಕಿರಿಯ ವಕೀಲರಿಗೆ ಯಾವತ್ತು ಚಿರಋಣಿಯಾಗಿದ್ದೇನೆ.
- ಎ. ಎ. ಹುದ್ದಾರ, ನೂತನ ಅಧ್ಯಕ್ಷರು, ನ್ಯಾಯವಾದಿಗಳ ಸಂಘ ಅಥಣಿ.






























