ಪದಾಧಿಕಾರಿಗಳ ಆಯ್ಕೆ

ಚನ್ನಮ್ಮನ ಕಿತ್ತೂರು,ಮೇ28: ಸಮೀಪದ ಖಾನಾಪೂರ ತಾಲೂಕಿನ ಕೆಯುಡಬ್ಲೂಜೆ ಸಂಘದ ಅಧ್ಯಕ್ಷರಾಗಿ ಕಾಶೀಮ್ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ವಾಸುದೇವ ಚೌಗಲೇ, ಕಾರ್ಯದರ್ಶಿಯಾಗಿ ಪ್ರಸನ್ನ್ ಕುಲಕರ್ಣಿ ಆಯ್ಕೆಯಾಗಿದ್ದಾರೆ.


ಅಧ್ಯಕ್ಷ ಹಟ್ಟಿಹೊಳ್ಳಿ ಸರ್ವಾನುಮತದಿಂದ ಆಯ್ಕೆಯಾದರು. ಇವರು ಸಂಯುಕ್ತ ಕರ್ನಾಟಕ ಗ್ರಾಮೀಣ ವರದಿಗಾರ. ಇವರು ಮಾತನಾಡಿ ನಮ್ಮ ಸಂಘದ ಸರ್ವಸದಸ್ಯರನ್ನು ಒಗ್ಗೂಡಿಸಿಕೊಂಡು ತಾಲೂಕಿನ ಪತ್ರಕರ್ತರ ಭವನದ ಸ್ಥಳ ಹಾಗೂ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಂಸದರು, ಶಾಸಕರು, ಮಾಜಿ ಶಾಸಕರು, ಸೇರಿದಂತೆ ಹಲವಾರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ. ತಕ್ಷಣ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು. ಸರ್ಕಾರದಿಂದ ಯಾವುದೇ ಯೋಜನೆ ಜಾರಿಯಾದರು ಅವುಗಳನ್ನು ನಮ್ಮ ಸಂಘದ ಸದಸ್ಯರಿಗೆ ಮುಟ್ಟಿಸುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆಂದರು.


ಮರಾಠಿ ಪುಡಾರಿ ಪತ್ರಿಕೆ ವರದಿಗಾರ ವಾಸುದೇವ ಚೌಗಲೇ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡು ಮಾತನಾಡಿ ಕರ್ನಾಟಕ ಸರ್ಕಾರದ ಸಾರ್ವಜನಿಕ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಇವರಿಗೆ ಭೇಟಿನೀಡಿ ಇಲ್ಲಿಯ ಸ್ಥಿತಿಗತಿ ಕುರಿತು ಸಂವಾದ ನಡೆಸಿ ತಾಲೂಕಿನ ಪತ್ರಕರ್ತರ ಸ್ಥಳ ಹಾಗೂ ಭವನದ ಕಟ್ಟಡ ನಿರ್ಮಾಣಕ್ಕೆ ನೀಮ್ಮನ್ನೆಲ್ಲರನ್ನು ಒಗ್ಗೂಡಿಸಿಕೊಂಡು ಮನವಿ ಪತ್ರ ಸಲ್ಲಿಸಿ ಬೇಗನೇ ಕಾರ್ಯರೂಪಕ್ಕೆ ತರಲು ಶ್ರಮೀಸುತ್ತೇನೆಂದರು.


ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ ಪ್ರಸನ್ನ್ ಕುಲಕರ್ಣಿ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ವಿಜಯ ಕರ್ನಾಟಕ ವರದಿಗಾರ ರುದ್ರೇಶ ಸಂಪಗಾಂವಿ ಮತ್ತು ಸದಸ್ಯರಾಗಿ ವಿಜಯವಾಣಿ ವರದಿಗಾರ ಕಿಶೋರ ಮಿಠಾರೆ, ಪೀರಾಜಿ ಕುರಾಡೆ, ಇನ್ ನ್ಯೂಸ್ ವರದಿಗಾರ ಅಲ್ತಾಫ್ ಬಸರಿಕಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸದಸ್ಯರು ಸಕಾಳ ಪತ್ರಿಕೆ ವರದಿಗಾರ ಸಂದೀಪ ಸುತಾರ, ಪುಡಾರಿ ಪತ್ರಿಕೆ ವರದಿಗಾರ ಶಂಕರ ದೇಸೂರಕರ, ಭರತ ಪಾಟೀಲ, ತರುಣ ಭಾರತ ಅಪ್ಪಾಜಿ ಪಾಟೀಲ, ರಾವುಜೀ ಬಿರ್ಜಿ, ಸೇರಿದಂತೆ ಇನ್ನಿತರರಿದ್ದರು.