ಪದಾಧಿಕಾರಿಗಳ ಆಯ್ಕೆ


ಗುಳೇದಗುಡ್ಡ,ಆ.೨೨: ಗುಳೇದಗುಡ್ಡ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಯಲ್ಲಪ್ಪ ಮನ್ನಿಕಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸೋಮಶೇಖರ ಕಲಕೇರಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ವಿಶ್ವಛಾಯಾಗ್ರಹಣ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಆಯ್ಕೆಮಾಡಲಾಯಿತು. ವಿದ್ಯಾಧರ ಹೇಮಾದ್ರಿ, ಚನ್ನಪ್ಪ ಅನ್ನಂ ಸಂಘದ ಗೌರವಾಧ್ಯಕ್ಷರಾಗಿ, ಪ್ರಧಾನಕಾರ್ಯದರ್ಶಿಯಾಗಿ ಜುಮ್ಮಣ್ಣ ಜುಮ್ಮಣ್ಣವರ, ಖಜಾಂಚಿಯಾಗಿ ಸುರೇಶ ವಗ್ಗಾ, ಸಹಕಾರ್ಯದರ್ಶಿಯಾಗಿ ಸಮೀರ ಹಣಗಿ, ಸಂಘಟನಾ ಕಾರ್ಯದರ್ಶಿಯಾಗಿ ವೀರೇಶ ಹಿರೇಮಠ ಹಾಗೂ ನಿರ್ದೇಶಕರುಗಳಾಗಿ ಪ್ರಶಾಂತ ಉದ್ನೂರ, ಶಿವಕುಮಾರ ರಂಜನಗಿ, ಇಬ್ರಾಹಿಂ ಅಮಿನಗಡ, ಶಿವಾನಂದ ಗೋತಗಿ, ದಾನೇಶ ಸಿನ್ನೂರ, ಶೌಕತ್ ಹುನಕುಂಟಿ, ಮಲ್ಲಿಕಾರ್ಜುನ ಬೆಳವಣಿಕಿ ಹಾಗೂ ಸಲಹಾ ಸಮಿತಿಯ ಸದಸ್ಯರಾಗಿ ಸಂಗಮೇಶ ಕೋಡಬಳಿ, ಶಿವುಕುಮಾರ ಜಮಖಂಡಿ, ವಿಜಯ ಕಟ್ಟಿಮಠ, ಡೊಂಗರಸಾ ಪವಾರ, ಉಮಾಶಂಕರ ಶಿವನಗೌಡರ ಮುಂದುವರಿಯುವರು. ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ೧೮೯ನೇ ವಿಶ್ವಛಾಯಾಗ್ರಹಣ ಆಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಹಾಗೂ ಚೆಂಡು ಎಸೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ವಿನೋದ ಕಿತ್ತಲಿ, ಮಹೇಶ ಸೂಳಿಭಾವಿ, ವಿನೋದ ಆಲೂರ, ನಾಗರಾಜ ತಳವಾರ, ಮಹಿಬೂಬ ಅಮೀನಗಡ, ವಿಜಯಾನಂದ ಹನಮಸಾಗರ, ರಮೇಶ ಅಡಕಿ, ಪ್ರಕಾಶ ಅಚನೂರ, ಗಣೇಶ ಗಂಟಿ, ಆದರ್ಶ ಹುಬ್ಬಳ್ಳಿ, ಮಲ್ಲಪ್ಪ ಗಾಣಿಗೇರ, ಸಂಗಮೇಶ ಹಂಡಿ, ಮತ್ತಿತರರು ಇದ್ದರು.