
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨:ಶಾಲಾ ಹಂತದಲ್ಲಿಯೇ ಚುನಾವಣೆಯ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವದರಿಂದ ಶಾಲಾ ಮಕ್ಕಳು ವಿದ್ಯಾರ್ಥಿ ದೆಸೆÀಯಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಾಲಾ ಸಂಸತ್ ಚುನಾವಣೆಗಳು ವಿದ್ಯಾರ್ಥಿಗಳ ನಾಯಕತ್ವದ ವ್ಯಕ್ತಿತ್ವಕ್ಕೆ ಪೂರಕ ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ಮಂಗಳವಾರ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಚುನಾವಣೆ ಪ್ರಯುಕ್ತ ಚುನಾವಣೆ ಅಧಿಕಾರಿಯಾಗಿ ವಿದ್ಯಾರ್ಥಿಗಳಿಂದ ನಾಮಪತ್ರವನ್ನು ಸ್ವೀಕರಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಸಾಹಿತಿ, ಪ್ರೊ. ಎ. ಎಚ್. ಕೊಳಮಲಿ ಮಾತನಾಡಿ, ಇವತ್ತಿನ ಮಕ್ಕಳೇ ನಾಳಿನ ಸುಭದ್ರವಾದ ರಾಷ್ಟ್ರವನ್ನು ನಿರ್ಮಿಸುವವರು. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ನಾಯಕತ್ವದ ಗುಣ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ. ನಾಯಕತ್ವದ ಗುಣಕ್ಕೆ ಶಾಲಾ ಸಂಸತ್ ಚುನಾವಣೆ ಅಡಿಪಾಯ ಎಂದು ಹೇಳಿದರು.
ಸಿ. ಎಸ್. ವಾಲಿ, ಸಾಗರ ಕುಲಕರ್ಣಿ, ಸಮಾಜ ವಿಜ್ಞಾನದ ಶಿಕ್ಷಕ ಗಿರೀಶ ಬಿರಾದಾರ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.