Home ಜಿಲ್ಲೆ ಕಲಬುರಗಿ ಡಾ.ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಗೆ ಆಯ್ಕೆ

ಡಾ.ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಗೆ ಆಯ್ಕೆ

ಕಲಬುರಗಿ:ಮಾ.2:ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ ರವರ 135 ನೇ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ನೂತನ ಗೌರವಾಧ್ಯಕ್ಷ ರಾಗಿ ಅಯುಷ್ಮಾನ ದಶರಥ ಬಾಬು ಒಂಟಿ, ಮತ್ತು ಜಿಲ್ಲಾಧ್ಯಕ್ಷರಾಗಿ ಅಯುಷ್ಮಾನ್ ಅಶೋಕ ವೀರನಾಯಕ ರವರನ್ನು ಸಮುದಾಯದ ಹಿರಿಯರಾದ ಡಾ. ವಿಠ್ಠಲ ದೊಡ್ಡಮನಿ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾಪಣ್ಣ ಗಂಜಗೇರಿ,ದಿಗಂಬರ ಬೆಳಮಗಿ, ಗಣೇಶ ವಳಕೇರಿ, ಅಂಬಾರಾಯ ಅಷ್ಟಗಿ, ಗುಂಡಪ್ಪ ಲಂಡನಕರ್, ಅರ್ಜುನ್ ಭದ್ರೆ, ವಿಶಾಲ ಧರ್ಗಿ, ರಾಹುಲ ಉಪಾರೆ, ಸುರೇಶ ಹಾದಿಮನಿ, ಎಸ್ ಎಸ್ ತವಡೆ, ದೇವೇಂದ್ರ ಸಿನ್ನೂರ್, ಪ್ರಕಾಶ ಮೂಲಭಾರತಿ, ವಿಶಾಲ ನವರಂಗ್, ರಾಜಕುಮಾರ ಕಪನೂರ, ಅವಿನಾಶ ಗಾಯಕವಾಡ, ಪ್ರಕಾಶ ಔರಾದಕರ, ಶ್ರೀನಿವಾಸ ಲಾಖೆ, ದಿನೇಶ ದೊಡ್ಡಮನಿ, ರಾಜು ಸಂಕಾ, ವಾಸು ಒಂಟಿ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.