ಕಲಬುರಗಿ,ಸೆ.28-ನೇಣು ಹಾಕಿಕೊಂಡು ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟಿಪ್ಪು ಚೌಕ್‍ನ ಅಕ್ಬರ್ ಭಾಗ್ ಕಾಲೋನಿಯಲ್ಲಿ ನಡೆದಿದೆ.
ನಹೀಮ್ ಪಾಶಾ (71) ಎಂಬುವವರೆ ಮನೆಯಲ್ಲಿನ ಫ್ಯಾನಿಗೆ ಬೆಡ್‍ಶೀಟ್‍ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅವರ ಸಹೋದರ ಅಬ್ದುಲ್ ಸಲೀಮ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

























