
ಬಸವಕಲ್ಯಾಣ: ಶಿಕ್ಷಣವು ಜ್ಞಾನ ಪರಂಪರೆಯ ದಾರಿಯಾಗಿದೆ. ಅದು ಕೌಶಲ್ಯ ಮತ್ತು ವಿವೇಕವನ್ನು ರೂಪಿಸುವ ಸಾಧನವಾಗಿದೆ. ವಿದ್ಯಾರ್ಥಿಗಳು ಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2026-27ನೇ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಮಾಣ ಪತ್ರಕಷ್ಟೇ ಜೋತು ಬೀಳದೆ ತಮ್ಮ ಜ್ಞಾನ-ಸೃಜನಶೀಲತೆ ಮತ್ತು ಕೌಶಲ್ಯಗಳಿಂದ ಜಗತ್ತು ರೂಪಿಸಬೇಕು ಎಂದು ಹೇಳಿದರು.
ಅಳಿತಾತ್ಮಕವಾಗಿ ಹಲವು ಅನುಕೂಲತೆಗಳು ಆಡಳಿತ ಮಂಡಳಿ ಮಾಡಿಕೊಡುತ್ತದೆ. ಆದರೆ ಅದನ್ನ ಅಕಾಡೆಮಿಕ್ಕಾಗಿ ಬೆಳವಣಿಗೆ ಮಾಡುವಂತಹ ಜವಾಬ್ದಾರಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ವಿದ್ಯಾ ಸಂಸ್ಥೆಗೆ ಉತ್ತಮ ಹೆಸರು ತಂದು ಕೊಡುತ್ತದೆ. ವಿದ್ಯಾರ್ಥಿಗಳ ಸಾಧನೆಯೇ ವಿದ್ಯಾ ಸಂಸ್ಥೆಯ ಬೆಳವಣಿಗೆಯಾಗಿದೆ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಹಲವು ಜ್ಞಾನ ಪರಂಪರೆಗಳು ಅರಿಯಬೇಕಾಗುತ್ತದೆ. ಬಹುಶಿಸ್ತೀಯ ಮತ್ತು ಅಂತರ್ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡಬೇಕು. ಎಲ್ಲಾ ವಿಷಯಗಳ ಸಂಶೋಧನಾ ಪ್ರಬಂಧಗಳು ಮತ್ತು ಸಂಶೋಧನಾ ಲೇಖನಗಳ ಅನುಸಂಧಾನ ಮಾಡಿ, ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹೊಣೆ ಅಧ್ಯಾಪಕರದ್ದಾಗಿದೆ. ಸ್ಪರ್ಧಾತ್ಮಕ ಓದಿಗೂ ಮಹತ್ವ ನೀಡಿದರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಸಾಧ್ಯವಿದೆ. ಎಂದರು.
ಬಿಡಿಪಿಸಿ ನಿರ್ದೇಶಕ ಭದ್ರಿನಾಥ ಪಾಟೀಲ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ,
ಬಸವೇಶ್ವರ ಪಿಜಿ ಪ್ರಾಚಾರ್ಯೆ ಶಾಂತಲಾ ಪಾಟೀಲ, ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಡಾ. ಬಸವರಾಜ ಖಂಡಾಳೆ, ವಿವೇಕಾನಂದ ಶಿಂದೆ, ಸುಜಾವುದ್ದೀನ್, ರೋಷನ್ ಬಿ, ಸಂಗೀತಾ ಮಹಾಗಾವೆ, ಪ್ರಿಯಾ ಚೌಹಾಣ್,
ನಾಗವೇಣಿ ಬಿರಾದಾರ, ಶೀತಲ್ ರೆಡ್ಡಿ , ಸಚಿನ್ ಬಿಡುವೆ, ಚನ್ನಬಸಪ್ಪ ಹೆ???ಸ್, ಪ್ರವೀಣ ಬಿರಾದರ್, ನಾಗರಾಜ್ ನಾಸೆ, ಪ್ರಶಾಂತ್ ಬುಡಗೆ,
ಸುಮಾ ಕುಂಟನೂರ, ಐಶ್ವರ್ಯ ಖರೋಣೆ,
ವೀರೇಶ ಸ್ವಾಮಿ, ಗಣೇಶ ಮೇತ್ರಿ ಮೊದಲಾವರಿದ್ದರು.
ಗಂಗಾಧರ ಸಾಲಿಮಠ ನಿರೂಪಿಸಿ, ಸ್ವಾಗತಿಸಿದರು.
ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ ಶಾಂತಲಾ ಪಾಟೀಲ ವಂದಿಸಿದರು.































