
ಜಮಖಂಡಿ:ಡಿ.24:ಟಿಪ್ಪು ಅವರ ಇತಿಹಾಸ ಬಹಳಷ್ಟು ಜನರಿಗೆ ಗೊತ್ತಿಲ್ಲ ಅವರ ಅವರ ಇತಿಹಾಸ ವನ್ನು ಎಲ್ಲರೂ ಅರಿತ ಕೊಳ್ಳಬೇಕು ಅವರ ಕಾಲದ ಮೈಸೂರು ಪ್ರಾಂತ್ಯದಲ್ಲಿ ಬಹಳಷ್ಟು ಹೋರಾಟಗಳು ನಡೆದಿವೆ ಅವತ್ತಿನ ದಿನಗಳಲ್ಲಿ ಜಾರಿಯಾದ ಕಾನೂನುಗಳು ಸ್ವತಂತ್ರ ಸಿಕ್ಕು 75 ವರ್ಷಗಳ ಕಳೆದರು ಇನ್ನೂ ಜಾರಿಯಲ್ಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಹಜರತ್ ಅಬುಬಕ್ಕರ ದರ್ಗಾದ ಆವರಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ಯವಾಗಿ ಶಹೀದ್ ಹಜರತ ಟಿಪ್ಪು ಸುಲ್ತಾನ್ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ ಕೌಮಿ ಏಕತಾ (ಸರ್ವಧರ್ಮ)ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೆÇೀಲಿಸ್ ವ್ಯವಸ್ಥೆ,ಮಿಸೈಲ್ ಸೇರಿದಂತೆ ಇಂತಹ ಹತ್ತು ಹಲವಾರು ವ್ಯವಸ್ಥೆ ಗಳನ್ನು ಇತಿಹಾಸದಲ್ಲಿ ಕಾನೂತ್ತೆವೆ ಎಂದರು.ಕಾಲ ಬದಲಾವಣೆ ಆಗುತ್ತಿದೆ. ಗಡಿಯಾರ ತಿರುಗುತ್ತಿದೆ. ಇಂದಿನ ಕಾಲದಲ್ಲಿ ಶಿಕ್ಷಣ ಮುಖ್ಯವಾಗಿದೆ ದುಡಿಮೆ ಜೊತೆಗೆ ಶಿಕ್ಷಣ ಮುಖ್ಯವಾಗಿದೆ ಉನ್ನತ ಸ್ಥಾನಗಳಿಂದ ಅಧಿಕಾರದಲ್ಲಿ ಎಲ್ಲರು ಮುಂದೆಬರಬೇಕಾಗಿದೆ ಇಂದಿನ ಪ್ರಸ್ತುತ ಸ್ಥಿತಿಯಲ್ಲಿ ಯಾರಿಂದ ಕೊಡುಗೆಗಳು ದೊರೆತ್ತದೆ ಅದನ್ನು ತಿಳಿದುಕೊಂಡು ಎಲ್ಲರೂ ಮುಖ್ಯವಾಹಿನಿಯಲ್ಲಿ ಮತ್ತು ಎಲ್ಲ ವಲಯದಲ್ಲಿ ಮುಂದೆಬರಬೇಕು. ಉತ್ತಮ ಶಿಕ್ಷಣ ಮಕ್ಕಳಿಗೆ ನೀಡಬೇಕು. ನೌಕರಿ. ಉದ್ಯಮ. ಉದ್ಯೋಗದಲ್ಲಿ ಎಆಯ್ ಅಂತಹ ತಂತ್ರಜ್ಞಾನ ಬಂದಿವೆ ಅವುಗಳ ಮೂಲಕ ಮುಂದೆ ಬರಬೇಕು. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದು ತಿಳಿದುಕೊಳ್ಳಬೇಕು.
ಟಿಪ್ಪು ಎಂದರೆ ಬೇರೆ ರೀತಿಯಿಂದ ಕಾಣುತ್ತಿದ್ದಾರೆ. ಕಹಳೆ ಊದುತ್ತಿದರು. ಕನ್ನಡವನ್ನು ಬೆಳೆಸಲು ಬಹಳ ಮುಖ್ಯವಾಗಿ ಪ್ರಾಮುಖ್ಯತೆ ಹೊಂದಿದರು. ಬ್ರಿಟಿಷ್ ಜೊತೆಗೆ ಕೈ ಜೊಡಿಸಿದರೆ ರಾಜಮಹಾರಾಜು ಆಗುತ್ತಿದರು ಆದರೆ ಅವರ ಜೋತೆ ಹೋರಾಟ ಮಾಡಿದರು. ಅಂಬೇಡ್ಕರ್. ಬಸವ. ಶಾಹುಮಾಹರಾಜ ನಾರಾಯನ ಗುರುಗಳ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ಇಂತಹ ಮಹಾನರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹೊಸಬೇಕು. ಅಂಬೇಡ್ಕರ್ ಹೇಳಿದ ಹಾಗೆ ಇತಿಹಾಸ ತಿಳಿದವರು ಜಗತ್ತನೆ ಬದಲಾವಣೆ ಮಾಡಲು ಸಾಧ್ಯ. ಹಿರಿಯರ ಆದರ್ಶಗಳನ್ನು ತಿಳಿದುಕೊಳಬೇಕು. ದಲಿತ.ಮುಸ್ಲಿಂ ಸಮಸ್ಯೆಗಳು ಒಂದೇ ಇದೆ. ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದರೆ ಮಾತ್ರ ಬದಲಾವಣೆ ಮಾಡಲು ಸಾಧ್ಯ. ಹೋರಾಟ ಮಾಡುವುದು ಬಹಳ ಮುಖ್ಯವಾಗಿದೆ. ಸರಕಾರ ಯೋಜನೆಗಳನ್ನು ಮೊದಲು ತಿಳಿದುಕೊಳ್ಳಬೇಕು. ಕಳ್ಳತನ ಆಗದ ವಸ್ತು ಅದು ಶಿಕ್ಷಣ. ಅಂಬೇಡ್ಕರ್ ಹೋರಾಟ. ಬಸವಣ್ಣನವರ ಹೋರಾಟ ಬಹಳ ಮುಖ್ಯವಾಗಿತ್ತು.ಕಬರಸ್ಥಾನ.ಮಸೀದಿ. ದರ್ಗಾಗಳ ಸುಧಾರಣೆ ಗೆ ಸರಕಾರ ಸಾಕಷ್ಟು ಅನೂಕಲತೆ ಮಾಡಿದೆ. ಅನ್ಯೋನ್ಯತೆ ಹೊಂದಿದ ದೇಶ ನಮ್ಮ ಭಾರತ ದೇಶವಾಗಿದೆ ಎಂದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ. ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಆಚರಣೆ ಯಾಕೆ ಮಾಡಬೇಕು ಎಂದರೆ ಈ ದೇಶವನ್ನು ಗಟ್ಟಿಯಾಗಿ ಕಟ್ಟಿದವರು ಮತ್ತು ಈ ದೇಶದಲ್ಲಿ ನಿಮಗೆ ಜಾಗ ಇಲ್ಲಾ ನಡೆಯರಿ ನನ್ನ ಪ್ರಾಣವನ್ನು ಕೊಡುತ್ತೆನೆ ಆದರೆ ಈ ದೇಶವನ್ನು ಉಳಿಸುತ್ತೆನೆ ಎಂದು ಹೇಳಿ ಹೋರಾಟ ಮಾಡಿದ ವ್ಯಕ್ತಿ ಟಿಪ್ಪು ಸುಲ್ತಾನರು ಇವತ್ತಿನ ದಿವಸ ಇತಿಹಾಸವನ್ನು ತಿರುಚಿ ಜನರನ್ನು ಮೋಸ ಮಾಡುವ ಕೃತ್ಯ ನಡೆದಿದೆ. ಆ ಇತಿಹಾಸವನ್ನು ತಿರುಚುವಂತವರಿಗೆ ಅಂಬೇಡ್ಕರ್ ಅವರು ದೇಶದಲ್ಲಿ ಪ್ರಧಾನಿ ಆಗಲು ಮತದಾನದ ಅಸ್ತ್ರ ನೀಡಿದ್ದಾರೆ.75ಶೇ. ಜನರು ಇದ್ದಾರೆ ಆದರೆ ಯಾಕೆ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಮತದಾನ ಅರಿತುಕೊಳಿ. ಯಾರನ್ನು ಆಯ್ಕೆ ಮಾಡಬೇಕು ಎಂಬುವುದು ಅರಿತುಕೊಳ್ಳಬೇಕಾಗಿದೆ. ಹೋರಾಟದಲ್ಲಿ ದಲಿತರು. ಮುಸ್ಲಿಮರು ಇದ್ದಾರೆ. ಬಸವಣ್ಣನವರ ಆಚರಣೆ ಕೇಳಿದೇವ.ಬಸವಣ್ಣನವರ ಇರುವವರಿಗೆ ನಾವೆಲ್ಲ ಒಂದು ಎಂದು ಬಸವಣ್ಣನವರ ದೇವಸ್ಥಾನವನ್ನು ಕಟ್ಟಿ ಒಳಗೆ ಇಟ್ಟರಲ್ಲ ಮತ್ತೆ ದಲಿತರೆಲ್ಲ ಹೊರಗಡಿ ನಿಲ್ಲುವಂತಾಯಿತು ಎಂದರು. ಬಸವ ತತ್ವ ಬಹಳ ಮಹತ್ವವಾಗಿದೆ. 12 ಶತಮಾನದಲ್ಲಿ ಕಲ್ಯಾಣ ಮಂಟಪದಲ್ಲಿ ನಡೆದಿರುವ ಬಗ್ಗೆ ಚರ್ಚೆಗಳು ವಚನಗಳು ಇಂದಿಗೂ ನೆನಪಿಸಿಕೊಳ್ಳುತ್ತಿದೇವೆ. ಸ್ವಾರ್ಥಕತೆಗಾಗಿ ರಾಜಕೀಯ ನಡೆಯುತ್ತಿದೆ. ಅದು ಮೊದಲು ನಿಲ್ಲಬೇಕಾಗಿದೆ ಎಂದರು.
ಚಿತ್ರದುರ್ಗದ ಮಹೇಶ್ವರಾನಂದ ಶ್ರೀಗಳು ಮಾತನಾಡಿದ ಅವರು. ಕಲ್ಲು.ಮಣ್ಣು. ಕಂಚಿನ ಮೂರ್ತಿ ಗಳು ದೇವರು ಅಲ್ಲ. ತನ್ನ ತಾನೇ ಅರ್ಥಮಾಡಿಕೊಂಡರೆ ಮಾತ್ರ ದಲಿತರು ಮುಸ್ಲಿಮರು ಹಾಗೂ ಒಬಿಸಿ. ಎಲ್ಲರೂ ಸೇರಿದರೆ ದೇಶದ ಆಳುವ ನಾಯಕರು ನಾವುಗಳು ಆಗುತ್ತೆವೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ.ಡಿಜೆ ಹಚ್ಚುವ ಮೂಲಕ ಜಯಂತಿ ಆಚರಣೆ ಮಾಡುವದಕಿಂತ ಇಂತಹ ಸರ್ವಧರ್ಮ ಸಮೇಳ ಮಾಡಿದ್ದು ಶ್ಲಾಘನೀಯ.ಭಾರತದೇಶ ಸರ್ವಜನಾಂಗದ ಶಾಂತಿ ತೋಟವಾಗಿದೆ.ಆದರಿಂದ ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಶಾಂತಿ ತೋಟವನ್ನಾಗಿ ಮಾಡುತ್ತಿದೆ. ನಾಲ್ಕು ಯುದ್ದ ಮಾಡಿ ಮೈಸೂರು ತಮ್ಮದಾಗಿಸಿಕೊಂಡಿರುವ ವ್ಯಕ್ತಿ ಟಿಪ್ಪು ಸುಲ್ತಾನರು. ದೇಶ ಕಟ್ಟುವ ಕೆಲಸ ಮಾಡಿದರು. ಶಿಕ್ಷಣ. ನಾಣ್ಯಗಳನ್ನು ಜಾರಿಗೆ ತಂದರು ಬ್ರಿಟಿಷ್ ವಿರುದ್ಧ ಹೋರಾಡಿದ ನಾಯಕರು ಮುಸ್ಲಿಂ ಸಮಾಜ ಶಿಕ್ಷಣದಲ್ಲಿ ಇನ್ನೂ ಹಿಂದು ಉಳಿದಿದೆ. ಎಲ್ಲರೂ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗಿದೆ. ಭಾರತ ದೇಶ ವೀವಿದೈತೆ ಹೊಂದಿರುವ ದೇಶವಾಗಿದೆ. ನರೇಗಾ ಯೋಜನೆಯಲ್ಲಿ ಗಾಂಧಿಜೀ ಅವರ ಹೆಸರು ತೆಗೆವ ಕೆಲಸ ಮಾಡುತ್ತಿದ್ದಾರೆ. ಆದರೆ ಗಾಂಧಿಜೀಯವರ ಚಿಂತನಗಳನ್ನು ಅಳಿಸಲು ಸಾಧ್ಯವಿಲ್ಲ. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮಾತ್ರ ಎಲ್ಲರು ನೆನಪಿಸಲು ಸಾಧ್ಯ. ಸ್ವಾಮ್ಯರಸದ ದೇಶ ಕಟ್ಟುವ ಕೆಲಸ ಮಾಡಲು ಎಲ್ಲರೂ ಮುಂದಾಗಬೇಕಾಗಿದೆ ಎಂದರು.
ಉತ್ತರ ಪ್ರದೇಶದ ಹಜರತ ಪೀರ ಸಯ್ಯದ ಕಾಸಿಮ್ ಅಶ್ರಫ ಶರೀಫ್ ಆಶೀರ್ವಚನ ನೀಡಿದರು.
ಲತಿಫಖಾನ ಪಠಾಣ,ತೌಪಿಕ್ ಪಾರಥನಳ್ಳಿ ಅವರು ಮಾತನಾಡಿದರು
ನಜೀರ ಕಂಗನೊಳ್ಳಿ ಸ್ವಾಗತಿಸಿ.ಪ್ರಾಸ್ತಾವಿಕ ಮಾತನಾಡಿದರು.
ಶ್ರೀನಿವಾಸ ಕಟ್ಟಿಮನಿ ನೀರುಪಿಸಿದರು,
ಮೌಲಾನಾ ಅಬ್ದುಲ್ಲಾಸಾಲೀಂ ಕಮರ ಚತುರ್ವೇದಿ,ರದ್ರಾವಧೂತ ಮಠದ ಶ್ರೀ ಸಹಜಾನಂದ ಅವಧೂತರು,ಓಲೆಮಠದ ಶ್ರೀ ಆನಂದ ದೇವರು,ಕಾರಿ ಸಮಿವುಲ್ಲಾ ಖಾದ್ರಿ,ನಗರಸಭೆ ಮಾಜಿ ಅದ್ಯಕ್ಷ ಈಶ್ವರ ವಾಳೆನ್ನವರ,ಅರ್ಬನ್ ಬ್ಯಾಂಕಿನ ಅದ್ಯಕ್ಷ ರಾಹುಲ್ ಕಲೂತಿ,ಸುಶಿಲಕುಮಾರ ಬೆಳಗಲಿ,ಪತ್ರಕರ್ತ ಜವಾರಿಕಾಕಾ,ದಾನೇಶ ಘಾಟಗೆ,ವರ್ಧಮಾನ ನ್ಯಾಮಗೌಡ,ರವಿ ಯಡಹಳ್ಳಿ,ಡಾ.ರಾಜು ಗಸ್ತಿ,ನಾನಾ ಮೋರೆ ಸೇರಿದಂತೆ ಇನ್ನಿತರರು ಇದ್ದರು






















