
ಅಥಣಿ : ಮೇ.೨೫:ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಪರಿಶ್ರಮ. ಸಂಯಮ. ಸಂಸ್ಕಾರ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸಬೇಕು. ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಬೇಕು. ಜೀವನದ ಯಶಸ್ಸಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಹಲ್ಯಾಳದ ಕೃಷ್ಣಾ ರೈತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಥಣಿ ತಾಲೂಕಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. ೮೫ ಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು ೨೦೦೦ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಭವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಸಂಸ್ಕಾರದೊAದಿಗೆ ಉತ್ತಮ ಶಿಕ್ಷಣ ಪಡೆದು ನಾಡಿಗೆ ಕೀರ್ತಿ ತರಬೇಕು. ನಿಮ್ಮ ತಂದೆ-ತಾಯಿಯರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಜಿಲ್ಲಾ ಮಟ್ಟದಲ್ಲಿ ಇರುವಂತಹ ಶಾಲೆ. ಕಾಲೇಜುಗಳು ನಮ್ಮ ತಾಲೂಕಿನಲ್ಲಿವೆ. ಇಡೀ ರಾಜ್ಯವೇ ನಮ್ಮ ತಾಲೂಕಿನ ಕಡೆ ನೋಡುವಂತಾಗಿದೆ ಎಂದರು.
“ಆಧುನಿಕ ಯುಗದಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯ”
ಈ ಹಿಂದೆ ಅಥಣಿ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿತ್ತು. ಆ ಪರಿಸ್ಥಿತಿ ಮರುಕಳಿಸಬಾರದು ಎಂಬ ದೃಢ ನಿರ್ಧಾರದಿಂದ ತಾಲೂಕಿನಲ್ಲಿ ೯ ಪ್ರೌಢಶಾಲೆಗಳು ಮತ್ತು ೩ ಕಾಲೇಜುಗಳನ್ನು ತೆರೆಯಲಾಗಿದೆ. ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ೧ನೇ ತರಗತಿಯಿಂದಲೇ ಕೆಪಿಎಸ್‌ಸಿ ಮಾದರಿಯ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಪ್ರತಿಯೊಂದು ಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಕಟಗೇರಿ ಗ್ರಾಮದ ವಿದ್ಯಾರ್ಥಿನಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವುದನ್ನು ಹಾಗೂ ಸವದಿ ಗ್ರಾಮದ ವಿದ್ಯಾರ್ಥಿ ಬಸವರಾಜ ಕೆಂಪವಾಡ. ರಾಷ್ಟ್ರಮಟ್ಟದ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಅಲ್ಪಸಂಖ್ಯಾತರ ಸಮುದಾಯದವರು ಹಿಂದುಳಿಯಲು ಶಿಕ್ಷಣದ ಕೊರತೆಯೇ ಪ್ರಮುಖ ಕಾರಣವಾಗಿದ್ದು. ಪ್ರತಿಯೊಬ್ಬರೂ ಶಿಕ್ಷಣದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಮಾನಸದ ರಾಜಕಾರಣಿಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವವರೇ ನಿಜವಾದ ನಾಯಕರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸವದಿ ಅವರು ಜನಪರ ಕಾಳಜಿಯನ್ನು ಮೆರೆದಿದ್ದಾರೆ,” ಎಂದರು
ಆನಂತರ ದಿವ್ಯ ಸಾನಿಧ್ಯ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಮಕ್ಕಳಿಗೆ ಆಸ್ತಿ ಗಳಿಸುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು. ಇಂದಿನ ಹೇಳಿ ಜನಪರ ಕಾಳಜಿ ಹೊಂದಿರುವ ಲಕ್ಷ್ಮಣ ಸವದಿ ನಾಡಿನ ಅಪರೂಪದ ರಾಜಕಾರಣಿ ಮತಕ್ಷೇತ್ರಕ್ಕೆ ಅನೇಕ ಪ್ರೌಢಶಾಲೆಗಳನ್ನು, ವಸತಿ ಶಾಲೆಗಳನ್ನು, ಆಂಗ್ಲ ಮಾಧ್ಯಮ ಶಾಲೆಗಳನ್ನು, ಕೇಂದ್ರಿಯ ಮಹಾ ವಿದ್ಯಾಲಯ, ಪಶು ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಸೇರಿದಂತೆ ಹಲವು ಶಾಲಾ ಕಾಲೇಜುಗಳನ್ನು ಆರಂಭಿಸಿದ್ದಾರೆ. ಇದರಿಂದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇಂಜಿನಿಯರಿAಗ್ ಮಹಾವಿದ್ಯಾಲಯವನ್ನು ಆರಂಭಿಸುವAತೆ ಸಲಹೆ ನೀಡಿದರು.
ಯುವ ನಾಯಕ ಚಿದಾನಂದ ಸವದಿ ಸರ್ವರನ್ನು ಸ್ವಾಗತಿಸಿದರು. ಶರಣಯ್ಯ ಭಂಡಾರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ, ಶ್ರೀಶೈಲ ನಾರಗೊಂಡ. ಅಶೋಕ ಯಲ್ಲಡಗಿ, ಆನಂದ ದೇಶಪಾಂಡೆ. ಶಿವಕುಮಾರ ಸವದಿ. ನ್ಯಾಯವಾದಿ ಸಿದ್ದಾರೂಢ ಸವದಿ. ಅಮೋಘ ಖೊಬ್ರಿ.
ಸುಮೀತ್ ಸವದಿ. ಶಶಿಕಾಂತ ಸವದಿ. ಅಕ್ಷಯ್ ಸವದಿ.
ದತ್ತಾ ವಾಸ್ಟರ್. ಮಲ್ಲು ಕುಲ್ಲೋಳಿ. ರಾಮನಗೌಡ ಪಾಟೀಲ. ಆಸೀಫಅಲಿ ಡೊಂಗರಗಾAವ.
ಸೇರಿದAತೆ ಹಲವು ಗಣ್ಯರು, ಶಿಕ್ಷಕರು, ಪೋಷಕರು ಮತ್ತು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






















