ವಿದ್ಯಾರ್ಥಿಗಳಿಗೆ ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸವು ಮುಖ್ಯ

ಚನ್ನಮ್ಮನ ಕಿತ್ತೂರು,ಆ29: ವಿದ್ಯಾರ್ಥಿಗಳು ಸದೃಢವಾಗಬೇಕಾದರೆ ಕ್ರೀಡೆ ಬಹಳ ಮುಖ್ಯ ಅದರ ಜೊತೆಯಲ್ಲಿ ಅಷ್ಟೇ ವಿದ್ಯಾಭ್ಯಾಸವು ಮಹತ್ವವಾದದ್ದು ಎಂದು ರಾಜಗುರು ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಸಂಸ್ಥಾನ ಕಲ್ಮಠ ಕಿತ್ತೂರು ಅಭಿಮತ ವ್ಯಕ್ತಪಡಿಸಿದರು.


ತಾಲೂಕಿನ ತಿಗಡೊಳ್ಳಿ ರಸ್ತೆಗೆ ಹೊಂದಿಕೊಂಡಿದ್ದ ಪೌಜಿ ಕಾರ್ಖಾನೆ ಅಂಗಳದಲ್ಲಿ ನಡೆದ 2025-26ನೇ ಸಾಲಿನ ಪ್ರಾಥಮಿಕ ಹಾಗೂ ಪೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿ, ನಾವು ಯಾವುದೇ ಕೆಲಸ ಮಾಡಬೇಕಾದರೆ ಶರೀರ ಗಟ್ಟಿಯಾಗಿದ್ದರೆ ಮಾತ್ರ ಸಾಧ್ಯ. ಇದಕ್ಕೆಲ್ಲಾ ಯೋಗ, ಜ್ಞಾನ, ಕ್ರೀಡೆ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಗಟ್ಟಿಯಾಗಲು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ-ತಮ್ಮ ಶಾಲೆಯ ಕೀರ್ತಿ ತರುವಲ್ಲಿ ಯಶಸ್ಸು ಕಾಣಬೇಕೆಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ ತುಬಾಕದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಕಲ್ಲನಗೌಡ ಪಾಟೀಲ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಗಣ್ಯರು ಜ್ಯೋತಿಯನ್ನು ಸ್ವಾಗತಿಸಿದರು. ನೂತನ ತಾಪಂ ಇಓ ನಿಂಗಪ್ಪ ಮಸಳಿ ಕ್ರೀಡಾಕೂಟ ಉದ್ಘಾಟಿಸಿದರು.


ಸಾಧಕರನ್ನು ಗಣ್ಯರನ್ನು ಸತ್ಕರಿಸಲಾಯಿತು. ಈ ವೇಳೆ ಪೌಜಿ ಕಾರ್ಖಾನೆ ಮುಖ್ಯಸ್ಥ ನಿವೃತ್ತ ಸೈನಿಕ ಪರವೇಜ ಹವಾಲ್ದಾರ, ಸಿಪಿಐ ಶಿವಾನಂದ ಗುಡಗನಟ್ಟಿ, ದೈಹಿಕ ಶಿಕ್ಷಕರು, ತಹಶೀಲ್ದಾರ ಹಾಗೂ ಪೌಜಿ ಕಾರ್ಖಾನೆ ಸಿಬ್ಬಂದಿ, ಸಾರ್ವಜನಿಕರು ಇನ್ನಿತರರಿದ್ದರು.