ದಾರ್ಶನಿಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದೇ ಶಿಕ್ಷಣ: ಡಾ. ನೀಲಕಂಠರಾವ್ ಕಣ್ಣಿ

ಕಲಬುರಗಿ:ಅ.21: ನಗರದ ಕೆಪಿಇ ಸಂಸ್ಥೆಯ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಕಲ್ಬುರ್ಗಿಯಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಬಿಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿಶೇಷ ಉಪನ್ಯಾಸವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ನಗರದ ಮಹಾತ್ಮ ಜ್ಯೋತಿಬಾ ಫುಲೆ ಕಾಲೇಜಿನ ಪ್ರಾಚಾರ್ಯರಾದ ಡಾ. ನೀಲಕಂಠ ರಾವ್ ಕಣ್ಣಿ ಮೇಲಿನಂತೆ ನುಡಿದರು.
ಕಲ್ಯಾಣ ಕರ್ನಾಟಕದಲ್ಲಿಯೇ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಒಂದು ಪ್ರತಿಷ್ಠಿತ ಕಾಲೇಜ್ ಆಗಿದ್ದು ಇಲ್ಲಿ ಪ್ರವೇಶ ಪಡೆದಿರುವ ತಾವುಗಳು ಸುದೈವಿಗಳು ಡಾ. ಬಾಬಾ ಸಾಹೇಬ ಅಂಬೇಡ್ಕರರ ಹಾಗೆ ತಾವುಗಳು ನಿರಂತರ ಅಧ್ಯಯನ ಮಾಡಬೇಕು ವಿದ್ಯಾಭ್ಯಾಸದ ಜೊತೆಗೆ ಸದ್ಗುಣಗಳನ್ನು ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ವಿಶೇಷ ಉಪನ್ಯಾಸಕರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಿಟಕಲಿನ ಉಪನ್ಯಾಸಕರಾದ ಡಾ. ಜ್ಞಾನಮಿತ್ರ ಅವರು . ಮಾತನಾಡುತ್ತಾ ಸಮಾಜಶಾಸ್ತ್ರದ ಮಹತ್ವವನ್ನು ತಿಳಿಸುತ್ತಾ ಸಮಾಜವನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯ ಬೇಕಾದರೆ ಮಾನವ ಸಾಮಾಜಿಕರಣವಾಗಿ ಸಮಾಜ ಶಾಸ್ತ್ರದ ಚಿಂತನೆಯನ್ನು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಕುಮಾರ್ ಡಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಟಿವಿ, ಅಂತರ್ಜಾಲ ಮತ್ತು ಮೊಬೈಲ್ ಗಳಿಂದ ದೂರ ಉಳಿದು ಒಳ್ಳೆಯ ಆಲೋಚನೆ ಆಸಕ್ತಿ ಹಾಗೂ ಶ್ರದ್ಧಾ ಭಕ್ತಿಗಳನ್ನು ಮೈಗೂಡಿಸಿ ಸತ್ಪ್ರಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗಬೇಕು ಎಂದು ಕರೆಕೊಟ್ಟರು. ಕಾಲೇಜಿನ ಐಕ್ಯೂಏಸಿ ಸಂಯೋಜಕರಾದ ಡಾ. ನಿರ್ಮಲಾ ಸಿರಗಾಪೂರ್, ಎನ್ ಎಸ್ ಎಸ್ ಅಧಿಕಾರಿಗಳಾದ ಸಿದ್ದಪ್ಪ ಕಾಂತಾ, ಇತಿಹಾಸದ ಉಪನ್ಯಾಸಕರಾದ ಡಾ.ಗಾಂಧೀಜಿ ಮೋಳಕೆರೆ ಮಾತನಾಡಿದರು. ಸಮಾಜಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುದರ್ಶನ್ ಮದನ್ಕರ್ ಅವರು ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಡಾ. ಅರುಣ್ ಜೋಳದ ಕೊಡ್ಲಗಿ, ಡಾ. ವಸಂತ ನಾಸಿ, ಡಾ. ಹರ್ಷವರ್ಧನ್ ಬಿ, ಡಾ. ಕರಬಸಪ್ಪ ಮೂಲಗೆ, ಡಾ. ದತ್ತುರಾಯ, ಡಾ. ಸಿದ್ದಾರ್ಥ್ ಮದನ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ಭುವನೇಶ್ವರಿ ನಿರೂಪಿಸಿದಳು ಮಧುಮತಿ ಸ್ವಾಗತಿಸಿ ಅಶ್ವಿನಿ ವಂದಿಸಿದಳು.