ಮಾತೃಭಾಷೆಯಲ್ಲಿಯ ಶಿಕ್ಷಣ ಬಹಳ ಮುಖ್ಯ: ಸ್ವಾಮಿರಾವ ಕುಲಕರ್ಣಿ

ಕಲಬುರಗಿ,ನ.2: ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಭಿವೃದ್ದಿಯಾಗುವುದು ಆತನ ಮಾತೃಭಾಷೆ, ಮತೃಭೂಮಿಯ ಸಂಸ್ಕøತಿ, ಆಚಾರ ವಿಚಾರಗಳಿಂದ. ಆದ್ದರಿಂದ ಮಾತೃಭಾಷೆಯಲ್ಲಿಯ ಶಿಕ್ಷಣ ಬಹಳ ಮುಖ್ಯವೆಂದು ಹಿರಿಯ ಸಾಹಿತಿ, ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪೆÇ್ರ. ಸ್ವಾಮಿರಾವ ಕುಲಕರ್ಣಿ ಅವರು ಹೇಳಿದರು. ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ ನಮ್ಮ ಸರ್ವೋಚ್ಛ ನ್ಯಾಯಾಲಯವು ಶಿಕ್ಷಣದ ಮಾದ್ಯಮವನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ವಿದ್ಯಾರ್ಥಿ ಮತ್ತು ಆತನ ಪಾಲಕರಿಗಿದೆ ಎಂದು ಹೇಳಿದೆ. ಕಾನೂನಿನ ಮೂಲಕ ಒಂದು ಭಾಷೆಯನ್ನು ಬೆಳೆಸುವ ಹಾಗು ಉಳಿಸುವ ಪ್ರಯತ್ನ ಸೀಮಿತವಾದದ್ದು. ಬದಲಿಗೆ ಭಾಷೆಯನ್ನು ಬಳಸುವ ಮೂಲಕ ಉಳಿಸುವ ಕಾರ್ಯವನ್ನು ಸ್ವತಃ ಕನ್ನಡಿಗರು ಮಾಡಬೇಕು. ಅದಕ್ಕೆ ಮಾನಸಿಕ ಪರಿವರ್ತನೆ ಹಾಗು ಮನೋಭಾವದಲ್ಲಿನ ಪರಿವರ್ತನೆ ಅವಶ್ಯಕ. ತಮಿಳಿಗರ ಭಾಷಾ ಪ್ರತಿಯಿಂದ ನಾವು ನೋಡಿ ಕಲಿಯಬೇಕು. ಭಾಷೆಗೆ ಗಂಡಾಂತರವಿರುವುದು ಅನ್ಯ ಭಾಷಿಕರಿಂದ ಅಲ್ಲ ಬದಲಿಗೆ ಅವಿವೇಕಿ ವಿದ್ಯಾವಂತರಿಂದ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಕುಲಸಚಿವ ಪೆÇ್ರ. ಚೆನ್ನವೀರ ಆರ್ ಎಂ. ಅವರು ಮಾತನಾಡಿ ನಮ್ಮ ಸಾಂಪ್ರದಾಯಿಕ ಗ್ರಾಮೀಣ ಸೊಗಡಿನ ಹಳೆಯ ಕನ್ನಡ ಮಾಯವಾಗುತ್ತಿದೆ. ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಉಳಿದಿದ್ದು ಅನೇಕ ಹಳೆಯ ಕನ್ನಡ ಪದಗಳು ಮಾಯಾವಾಗುತ್ತಿವೆ. ಇಂದು ನಾವು ಕೃತಕ ಬುದ್ದಿಮತ್ತೆ ಯುಗದಲ್ಲಿ ಯಂತ್ರಗಳಿಗೆ ಭಾಷೆಯನ್ನು ಕಲಿಸುತ್ತಿದ್ದೇವೆ ಹಾಗು ಅವುಗಳೊಂದಿಗೆ ಸಂವಹನ ಮಾಡುತ್ತಿದ್ದೇವೆ. ಮನುಷ್ಯರ ಜೊತೆಗೆ ಯಂತ್ರಗಳೊಂದಿಗೂ ಹೊಂದಿಕೊಂಡು ಹೋಗಬೇಕಾದ ಅವಶ್ಯಕತೆಯಿದೆ. ನಾವು ಭಾಷೆಯ ವಿಷಯದಲ್ಲಿ ಬಹಳ ಉದಾರವಾದಿಗಳಾಗಿದ್ದೇವೆ ಹಾಗು ಇಂದಿನ ಅಗತ್ಯತೆಯಿಂದಾಗಿ ಬಹುಭಾಷಿಕರಾಗಿದ್ದೇವೆ ಅಲ್ಲದೆ ಇಂಗ್ಲೀಷ ಮೇಲಿನ ವ್ಯಾಮೋಹ ಬಹಳ ಹೆಚ್ಚಾಗಿದೆ ಎಂದು ಹೇಳಿದರು.
ಪೆÇ್ರ. ವೀರೇಶ ಕಸಬೆಗೌಡರ ಅತಿಥಿಗಳಾಗಿ ಪಾಲ್ಗೊಂಡರು.ಕಾರ್ಯಕ್ರಮದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಪ್ರಕಾಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿ ಎಲ್ಲರನ್ನೂ ವಂದಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ, ಡಾ. ರವಿಕಿರಣ ನಾಕೋಡ, ಡಾ. ಸ್ವಪನಿಲ್ ಚಾಪೇಕರ ಅವರು ರಾಷ್ಷ್ರಗೀತೆ, ನಾಡಗೀತೆ ಹಾಗು ಕನ್ನಡ ಗೀತೆಗಳನ್ನು ಹಾಡಿದರು. ಇದಕ್ಕೂ ಮುನ್ನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಕುಲಸಚಿವ ಪೆÇ್ರ. ಚೆನ್ನವೀರ ಆರ್ ಎಂ. ಅವರು ಕನ್ನಡಾಂಭೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆನೇರವೇರಿಸಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಪೆÇ್ರ. ಶಿವಗಂಗಾ ರುಮ್ಮಾ, ಪೆÇ್ರ. ವಿಕ್ರಮ ವಿಸಾಜಿ, ಪೆÇ್ರ. ಬಸವರಾಜ ಕೊಡಗುಂಟಿ, ಪೆÇ್ರ. ರಾಜಣ್ಣ ತಗ್ಗಿ, ಪೆÇ್ರ. ಎಂ. ಎಸ್ ಪಾಸೋಡಿ, ವಿತ್ತಾಧಿಕಾರಿ ಶ್ರೀ. ರಾಮಾದೊರೈ, ಡಾ. ಪಿ. ಎಸ್. ಕಟ್ಟಿಮನಿ, ಡಾ. ವಿಜಯಕುಮಾರ, ಪೆÇ್ರ. ಪಾಂಡುರಂಗ ಪತ್ತಿ ಉಪಸ್ಥಿತರಿದ್ದರು.